Advertisement

ಮೊದಲ ಬ್ಯಾಚ್‌ನ ಅಗ್ನಿವೀರರಿಗೆ ತರಬೇತಿ ಆರಂಭ: ಹೈದರಾಬಾದ್‌, ನಾಸಿಕ್‌, ರಾಮಗಢ ಕೇಂದ್ರಗಳಲ್ಲಿ ತರಬೇತಿ

09:00 PM Jan 10, 2023 | Team Udayavani |

ನವದೆಹಲಿ: ಭಾರತೀಯ ಸೇನೆಗೆ ಅಗ್ನಿವೀರ ಯೋಜನೆಯಡಿ ನೇಮಕಗೊಂಡಿರುವ 40 ಸಾವಿರ ಮಂದಿಗೆ ದೇಶದ ವಿವಿಧಡೆಯ ತರಬೇತಿ ಕೇಂದ್ರಗಳಲ್ಲಿ ತರಬೇತಿ ಆರಂಭವಾಗಿದೆ.

Advertisement

ತಲಂಗಾಣ ರಾಜಧಾನಿ ಹೈದರಾಬಾದ್‌ನ ಆರ್ಟಿಲಿಯರಿ ಸೆಂಟರ್‌ನಲ್ಲಿ 5,500 ಮಂದಿಗೆ ಎರಡು ಬ್ಯಾಚ್‌ನಲ್ಲಿ ತರಬೇತಿ ನೀಡಲಾಗುತ್ತದೆ. ಜ.1ರಂದು ಮೊದಲ ಬ್ಯಾಚ್‌ನ 2,200 ಅಗ್ನಿವೀರರಿಗೆ ತರಬೇತಿ ಆರಂಭವಾಗಿದೆ. ಇವರಿಗೆ 31 ವಾರಗಳ ತರಬೇತಿ ನಡೆಯಲಿದೆ. ದೇಶದ ಅತಿದೊಡ್ಡ ತರಬೇತಿ ಕೇಂದ್ರವಾದ ಇಲ್ಲಿ 3,300 ಅಗ್ನಿವೀರರ ಎರಡನೇ ಬ್ಯಾಚ್‌ ಮಾ.1ರಂದು ತರಬೇತಿ ಆರಂಭವಾಗಲಿದೆ.

ಇದೇ ರೀತಿ ನಾಸಿಕ್‌ನ ಆರ್ಟಿಲಿಯರಿ ಸೆಂಟರ್‌ನಲ್ಲಿ ಮೊದಲ ಬ್ಯಾಚ್‌ನ 2,600 ಅಗ್ನಿವೀರರಿಗೆ ಜ.1ರಿಂದ, ಜಾರ್ಖಂಡ್‌ನ‌ ರಾಮಗಢ ಜಿಲ್ಲೆಯಲ್ಲಿರುವ ಪಂಜಾಬ್‌ ರೆಜಿಮೆಂಟಲ್‌ ಸೆಂಟರ್‌(ಪಿಆರ್‌ಸಿ)ನಲ್ಲಿ ಮೊದಲ ಬ್ಯಾಚ್‌ನ 217 ಅಗ್ನಿವೀರರಿಗೆ ಜ.2ರಂದು ತರಬೇತಿ ಆರಂಭವಾಗಿದೆ.

31 ವಾರಗಳ ತರಬೇತಿಯಲ್ಲಿ ಇವರಿಗೆ ಬಂದೂಕು ತರಬೇತಿ, ವಾಹನ ಚಾಲನೆ, ಈಜು, ಸೈಬರ್‌ ಭದ್ರತೆ, ಸಂವಹನ, ಮಿಲಿಟರಿ ಕಾರ್ಯಾಚರಣೆ, ದೈಹಿಕ ತರಬೇತಿ ಸೇರಿದಂತೆ ವಿವಿಧ ಬಗೆಯ ತರಬೇತಿ ನೀಡಲಾಗುತ್ತದೆ. ಇದೇ ರೀತಿ ವಾಯುಪಡೆಗೆ ಮೊದಲ ಬ್ಯಾಚ್‌ನ 2,850 ವಾಯು ಅಗ್ನಿವೀರ್‌ಗಳಿಗೆ ಕರ್ನಾಟಕದ ಬೆಳಗಾವಿಯ ಏರ್‌ವೆುನ್‌ ತರಬೇತಿ ಶಾಲೆಯಲ್ಲಿ ಡಿ.30ರಂದು ತರಬೇತಿ ಆರಂಭವಾಗಿದೆ.

ಇದನ್ನೂ ಓದಿ: ಸ್ಯಾಂಟ್ರೊ ರವಿ ಬಂಧನಕ್ಕೆ ತಂಡ ರಚನೆ, ಲುಕ್ ಔಟ್ ನೋಟಿಸ್ ಜಾರಿ: ಎಡಿಜಿಪಿ ಅಲೋಕ್ ಕುಮಾರ್

Advertisement
Advertisement

Udayavani is now on Telegram. Click here to join our channel and stay updated with the latest news.

Next