Advertisement

ಐಎಎಫ್: ಅಗ್ನಿಪಥ ಯೋಜನೆಗೆ 4 ದಿನಗಳಲ್ಲಿ 94,218 ಅರ್ಜಿಗಳು!

07:57 AM Jun 28, 2022 | Team Udayavani |

ಹೊಸದಿಲ್ಲಿ/ಥಾಣೆ: “4 ದಿನಗಳಲ್ಲಿ 94,218 ಅರ್ಜಿಗಳು!’- ಕೇಂದ್ರ ಸರಕಾರ ಜಾರಿಗೊಳಿಸಿರುವ ಅಗ್ನಿಪಥ ಯೋಜನೆಗೆ ಸಲ್ಲಿಕೆಯಾಗಿರುವ ಅರ್ಜಿಗಳಿವು.

Advertisement

ಜು. 5ರಂದು ನೋಂದಣಿ ಮುಕ್ತಾಯವಾಗಲಿದೆ ಎಂದು ರಕ್ಷಣ ಸಚಿವಾಲಯದ ವಕ್ತಾರ ಎ. ಭರತ್‌ಭೂಷಣ್‌ ಟ್ವೀಟ್‌ ಮಾಡಿದ್ದಾರೆ.

ಅಂದಹಾಗೆ ಇದು ಐಎಎಫ್ ನಲ್ಲಿ ಇರುವ 3 ಸಾವಿರ ಹುದ್ದೆಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳು. ಜೂ.14ರಂದು ಹೊಸ ಯೋಜನೆಯ ಬಗ್ಗೆ ಕೇಂದ್ರ ಪ್ರಕಟನೆೆ ನೀಡಿತ್ತು.

ತಂತ್ರಜ್ಞಾನ ವರ್ಗಾಯಿಸಬೇಕು: ಐಎಎಫ್ ಗೆ ಪೂರೈ ಸಲಿರುವ 114 ಬಹೂಪಯೋಗಿ ಯುದ್ಧ ವಿಮಾನಗಳ ತಯಾರಕರು ಕ್ಷಿಪ್ರವಾಗಿ ಅದರ ತಂತ್ರಜ್ಞಾನ ವರ್ಗಾಯಿಸಬೇಕು. ಅವುಗಳನ್ನು “ಮೇಕ್‌ ಇನ್‌ ಇಂಡಿಯಾ’ ವ್ಯಾಪ್ತಿಯಲ್ಲಿಯೇ ತಯಾರಿಸಲಾಗುತ್ತದೆ ಎಂದು ವಾಯುಪಡೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ವಿ.ಆರ್‌. ಚೌಧರಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next