Advertisement

ಅಗ್ನಿ ಶ್ರೀಧರ್‌, ಬಚ್ಚನ್‌ ಮನೆ ಮೇಲೆ ದಾಳಿ

03:45 AM Feb 08, 2017 | Team Udayavani |

ಬೆಂಗಳೂರು: ಪ್ರಕರಣವೊಂದರ ಆರೋಪಿಗಳಿಗೆ ಆಶ್ರಯ ನೀಡಿದ್ದಾರೆ ಎಂಬ ಮಾಹಿತಿ ಮೇರೆಗೆ ಕುಮಾರಸ್ವಾಮಿ ಲೇಔಟ್‌ನಲ್ಲಿರುವ
ಪತ್ರಕರ್ತ ಅಗ್ನಿ ಶ್ರೀಧರ್‌ ಹಾಗೂ ಆಪ್ತ ಬಚ್ಚನ್‌ ಮನೆ ಮೇಲೆ ಮಂಗಳವಾರ ಬೆಳಗ್ಗೆ ಪೊಲೀಸ್‌ ಅಧಿಕಾರಿಗಳು ದಾಳಿ ನಡೆಸಿದರು.

Advertisement

ನಗರ ಹೆಚ್ಚುವರಿ ಪೊಲೀಸ್‌ ಹೇಮಂತ್‌ ನಿಂಬಾಳ್ಕರ್‌ ನೇತೃತ್ವದಲ್ಲಿ 3 ಡಿಸಿಪಿಗಳ ತಂಡ ಕೋರ್ಟ್‌ ಸರ್ಚ್‌ ವಾರೆಂಟ್‌ ಹಿಡಿದು
ದಾಳಿ ನಡೆಸಿದ್ದು, ಅಗ್ನಿ  ಶ್ರೀಧರ್‌ ಮತ್ತು ಬಚ್ಚನ್‌ ಮನೆಯಲ್ಲಿ ನಾಲ್ಕು ಪಿಸ್ತೂಲ್‌, ಜೀವಂತ ಗುಂಡುಗಳು, ಮಾರಕಾಸ್ತ್ರ ಮತ್ತು
6.88 ಲಕ್ಷ ರೂ.ಹಣ ಪತ್ತೆಯಾಗಿವೆ. ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇರೆಗೆ ಬಚ್ಚನ್‌ ಸೇರಿ ಏಳು ಮಂದಿಯನ್ನು ಬಂಧಿಸಲಾಗಿದೆ.

ಪ್ರಕರಣವೊಂದರ ಆರೋಪಿಗಳು ಎನ್ನಲಾದ ರೋಹಿತ್‌ ಆಲಿಯಾಸ್‌ ಒಂಟೆ ಹಾಗೂ ಸೈಲಂಟ್‌ ಸುನೀಲ್‌ ಅವರಿಗೆ ಆಶ್ರಯ ನೀಡಿದ್ದ ಆರೋಪ ಅಗ್ನಿ ಶ್ರೀಧರ್‌ ವಿರುದ್ದ ಕೇಳಿ ಬಂದಿತ್ತು. ಆದರೆ, ಅವರ ಮನೆ ಶೋಧದ ವೇಳೆ ಈ ಇಬ್ಬರೂ ಅಲ್ಲಿರಲಿಲ್ಲ ಎಂದು
ಪೊಲೀಸರು ತಿಳಿಸಿದ್ದಾರೆ. 6 ಗಂಟೆಗಳ ಕಾಲ ಶ್ರೀಧರ್‌ ಮತ್ತು ಬಚ್ಚನ್‌ ಇನ್ನಿತರರನ್ನು ಪೊಲೀಸ್‌ ಅಧಿಕಾರಿಗಳು ವಿಚಾರಣೆಗೊಳಪಡಿ
ಸಿದ್ದು, ಇತ್ತೀಚೆಗೆ ಯಲಹಂಕ ಕೋಗಿಲು ಕ್ರಾಸ್‌ ಬಳಿ ನಡೆದ ದಾಸನ ಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್‌ ಹತ್ಯಾಯತ್ನ
ಪ್ರಕರಣದ ಕುರಿತು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಶ್ರೀಧರ್‌ ಎದೆ ನೋವಿನಿಂದ ಕುಸಿದು ಬಿದ್ದಿದ್ದು, ಸಾಗರ ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯುತ್ತಿದ್ದಾರೆ. 

ಬಳಿಕ ಆರೋಪಿ ಒಂಟೆ ರೋಹಿತ್‌ ಸಾಗರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಧರ್‌ ಅವರನ್ನು ನೋಡುವ  ನೆಪದಲ್ಲಿ ಬಂದು ಕುಮಾರಸ್ವಾಮಿ ಲೇಔಟ್‌ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ. ಇದರ ಬಳಿಕ ಸೈಲೆಂಟ್‌ ಸುನೀಲ ಕೂಡ ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿಗಳ ವಿರುದಟಛಿ ಅಕ್ರಮ ಶಸ್ತ್ರಾಸಸ್ತ್ರ ಕಾಯ್ದೆ ಮತ್ತು ಪ್ರೈವೆಟ್‌ ಸೆಕ್ಯೂರಿಟಿ ರೆಗ್ಯೂಲೆಷನ್‌ ಕಾಯ್ದೆಯಡಿ
ಕುಮಾರಸ್ವಾಮಿ ಲೇಔಟ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next