Advertisement

ಅಗ್ನಿಪಥ ಯೋಜನೆ: ಐಎಎಫ್ ಗೆ 59,960 ಅರ್ಜಿ ಸಲ್ಲಿಕೆ

08:42 PM Jun 26, 2022 | Team Udayavani |

ನವದೆಹಲಿ: ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆಗೆ 59,960 ಅರ್ಜಿಗಳು ಸಲ್ಲಿಕೆಯಾಗಿವೆ. ಅಲ್ಲಿ ಒಟ್ಟು ಮೂರು ಸಾವಿರ ಹುದ್ದೆಗಳು ಇವೆ.

Advertisement

ಹೀಗಾಗಿ, ಕೇಂದ್ರ ಸರ್ಕಾರದ ಉದ್ದೇಶಿತ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜು.5ರಂದು ನೋಂದಣಿ ಮುಕ್ತಾಯವಾಗಲಿದೆ ಎಂದು ಐಎಎಫ್ ಭಾನುವಾರ ಟ್ವೀಟ್‌ ಮಾಡಿದೆ.

ಇನ್ನೊಂದೆಡೆ, ಅಗ್ನಿವೀರರನ್ನು ನಾಲ್ಕು ವರ್ಷಗಳ ತರಬೇತಿ ಬಳಿಕ ಸರ್ಕಾರಿ ಹುದ್ದೆಗಳಿಗೆ ನೇಮಕ ವೇಳೆ ಪರಿಗಣಿಸುವ ಬಗ್ಗೆ ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ, ಹರ್ಯಾಣ, ಉತ್ತರಾಖಂಡ, ಅಸ್ಸಾಂ ಸರ್ಕಾರಗಳು ಈಗಾಗಲೇ ವಾಗ್ಧಾನ ಮಾಡಿವೆ.

ಉತ್ತರಾಖಂಡವು ಪೊಲೀಸ್‌ ಇಲಾಖೆ, ವಿಪತ್ತು ರಕ್ಷಣಾ ಇಲಾಖೆ, ಚಾರ್‌ ಧಾಮ್‌ ನಿರ್ವಹಣಾ ಇಲಾಖೆಯ ಕೆಲಸಗಳಲ್ಲಿ ಅಗ್ನಿವೀರರಿಗೆ ಮೀಸಲಾತಿ ಕೊಡುವುದಾಗಿ ಹೇಳಿದೆ.

ಇದನ್ನೂ ಓದಿ:ಸ್ಮಾರ್ಟ್‌ವಾಚ್‌ನಿಂದ ಫಾಸ್ಟ್‌ಟ್ಯಾಗ್‌ ಸ್ಕ್ಯಾನ್‌ ಸಾಧ್ಯವಿಲ್ಲ

Advertisement

ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತರಾದವರಿಗೆ ರಾಜ್ಯದ ಇಲಾಖೆಗಳಲ್ಲಿ ಕೆಲಸ ಕೊಡುವ ಕಾನೂನು ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿದೆ.

ಹರ್ಯಾಣದ ಗ್ರೂಪ್‌ ಸಿ ಹುದ್ದೆಗಳು ಅಥವಾ ಪೊಲೀಸ್‌ ಇಲಾಖೆಯ ಕೆಲಸವನ್ನು ಅಗ್ನಿವೀರರಿಗೆ ಕೊಡುವುದಾಗಿ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ತಿಳಿಸಿದ್ದಾರೆ.

ಆದರೆ, ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಆಡಳಿತದಲ್ಲಿ ಇಲ್ಲದೇ ಇರುವ ರಾಜ್ಯಗಳಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next