Advertisement

ಚೆಕ್‌ ಬೌನ್ಸ್‌ ವಿಚಾರ: ಮಾಜಿ ಭೂಮಾಲೀಕನಿಂದ ನಿರಂತರ ಅತ್ಯಾಚಾರ

02:58 PM Nov 28, 2021 | Team Udayavani |

ಜಬಲ್‌ಪುರ: ಮಧ್ಯಪ್ರದೇಶದ ಜಬಲ್‌ಪುರ ನಗರದಲ್ಲಿ ಚೆಕ್‌ ಬೌನ್ಸ್‌ ವಿಚಾರದಲ್ಲಿ ವಿವಾದ ಹೊಂದಿದ್ದ 62 ವರ್ಷದ ವಿಧವೆಯೊಬ್ಬಳ ಮೇಲೆ ಆಕೆಯ ಮಾಜಿ ಭೂಮಾಲೀಕ ಪದೇ ಪದೇ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ.

Advertisement

ಅಪರಾಧವು 2019 ರಲ್ಲಿ ನಡೆದಿದ್ದು, 67 ವರ್ಷ ವಯಸ್ಸಿನ ಆರೋಪಿ ಭೂ ಮಾಲೀಕ ಮಹಿಳೆಗೆ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಶನಿವಾರ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಗರ್ಹಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಾಕೇಶ್ ತಿವಾರಿ ಪಿಟಿಐಗೆ ತಿಳಿಸಿದ್ದಾರೆ.

ವಿಧವೆಯಾಗಿರುವ ಮಹಿಳೆ ಈಗ ತನ್ನ ಕೆಲಸದಿಂದ ನಿವೃತ್ತಿ ಹೊಂದಿದ್ದು, 2019 ರಲ್ಲಿ ಆರೋಪಿ ಬಿಟ್ಟುಕೊಟ್ಟ ಮನೆಯ ಒಂದು ಭಾಗದಲ್ಲಿ ಒಬ್ಬಂಟಿಯಾಗಿ ಇರುತ್ತಿದ್ದರು. ಆಕೆಯ ಮಕ್ಕಳು ನಗರದ ಇತರ ಭಾಗಗಳಲ್ಲಿ ವಾಸಿಸುತ್ತಿದ್ದರು ಎಂದು ಅವರು ಹೇಳಿದರು.

ಆರೋಪಿಯು 2019 ರಲ್ಲಿ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ ಎಂದು ದೂರನ್ನು ಉಲ್ಲೇಖಿಸಿದ ಅಧಿಕಾರಿ, ಮಹಿಳೆ ನಂತರ ತನ್ನ ಮನೆಯನ್ನು ತೊರೆದಿದ್ದಾಳೆ ಎಂದು ತಿಳಿಸಿದರು.

Advertisement

ಆರಂಭಿಕ ತನಿಖೆಯ ಪ್ರಕಾರ, ಆರೋಪಿ ಮತ್ತು ದೂರುದಾರೆ 2019 ರಿಂದ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟದಲ್ಲಿ ನಡೆಸುತ್ತಿದ್ದು,ನ್ಯಾಯಾಲಯವು ಮಹಿಳೆಯ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ ಎಂದು ಅವರು ಹೇಳಿದರು.

ಮಹಿಳೆಯ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next