Advertisement

ಜೆಟ್ ಏರ್ವೇಸ್ ನಲ್ಲಿ ಹೂಡಿಕೆ ಮಾಡಲ್ಲ ಎಂದ ಅಗರ್ವಾಲ್

10:11 AM Aug 13, 2019 | Team Udayavani |

ಹೊಸದಿಲ್ಲಿ: ತೀವ್ರ ನಷ್ಟದಲ್ಲಿರುವ ಜೆಟ್ ಏರ್ವೇಸ್ ನಲ್ಲಿ ಬಂಡವಾಳ ಹೂಡಲು ಆಸಕ್ತನಾಗಿದ್ದೇನೆ ಎಂದು ಕೆಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದ ಉದ್ಯಮಿ ಅನಿಲ್ ಅಗರ್ವಾಲ್ ಇದೀಗ ನೋ ಎಂದಿದ್ದಾರೆ.

Advertisement

ತೀವ್ರ ನಷ್ಟದ ಬಾಧೆಗೆ ಒಳಗಾಗಿರುವ ಜೆಟ್ ಏರ್ವೇಸ್ ನಲ್ಲಿ ಹಣ ಹೂಡಲು ಆಸಕ್ತನಾಗಿದ್ದೇನೆ ಎಂದು ಕೆಲವು ದಿನಗಳ ಹಿಂದೆ ಸಾರ್ವಜನಿಕವಾಗಿ ಅಗರ್ವಾಲ್ ಹೇಳಿದ್ದರು. ದಿನಗಳ ಬಳಿಕ ತಮ್ಮ ನಿರ್ಧಾರವನ್ನು ಬದಲಿಸಿದ್ದು, ಏರ್ವೇಸ್ನಲ್ಲಿ ಹಣ ಹೂಡಲು ಆರಂಭದಲ್ಲಿ ಇದ್ದ ಉತ್ಸಾಹ ಈಗ ನನ್ನಲ್ಲಿ ಇಲ್ಲ ಎಂದಿದ್ದಾರೆ. ಅಗರ್ವಾಲ್ ಅವರ ಹಣ ಹೂಡಿಕೆಯ ಸಂಸ್ಥೆಯಾದ ವೋಲ್ಕಾನ್ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.

ಹಣಕಾಸಿನ ಕೊರತೆಯಿಂದಾಗಿ ಎಪ್ರಿಲ್ ತಿಂಗಳಲ್ಲಿ ಜೆಟ್ ಏರ್ವೇಸ್ ತನ್ನ ಹಾರಾಟವನ್ನು ನಿಲ್ಲಿಸಿತ್ತು. ದಿವಾಳಿಯಾಗಿರುವ ಜೆಟ್ಏರ್ವೇಸ್ ಅನ್ನು ಕೊಂಡುಕೊಳ್ಳಲು ಅಥವ ಹಣ ಹೂಡಲು ಯಾವುದೇ ಉದ್ಯಮಿಗಳು ಮುಂದೆ ಬರುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next