Advertisement
ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ದಂಡುಪಾಳ್ಯಗ್ಯಾಂಗ್‌ನ ಮುನಿಕೃಷ್ಣ, ವೆಂಕಟೇಶ್, ನಲ್ಲತಿಮ್ಮನಿಗೆ ಅಧೀನ ನ್ಯಾಯಾಲಯ ವಿಧಿಸಿದ್ದ ಮರಣದಂಡನೆ ಖಾಯಂಗೊಳಿಸುವಂತೆ ಸಲ್ಲಿಕೆಯಾಗಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿಗಳನ್ನು ಇತ್ಯರ್ಥಪಡಿಸಿರುವ ನ್ಯಾಯಮೂರ್ತಿ ರವೀಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಕಾಮಾಕ್ಷಿಪಾಳ್ಯದ ಸುಧಾ ಎಂಬುವವರನ್ನು 2000ನೇ ಮಾರ್ಚ್ 22ರಂದು ಕತ್ತುಕೊಯ್ದು ಕೊಲೆಮಾಡಿ ಚಿನ್ನಾಭರಣ ದೋಚಿ ನಾಲ್ವರು ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ ಸಿಟಿ ಸಿವಿಲ್ ಸೆಷನ್ಸ್ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನಾಲ್ವರು ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ 2010ರ ಸೆಪ್ಟೆಂಬರ್‌ನಲ್ಲಿ ತೀರ್ಪು ನೀಡಿತ್ತು.
Related Articles
ಕೊಲೆ, ಸುಲಿಗೆ ಪ್ರಕರಣಗಳ ಸಂಬಂಧ ದಂಡುಪಾಳ್ಯ ಗ್ಯಾಂಗ್‌ನ ವಿರುದ್ಧದ 38 ಕ್ರಿಮಿನಲ್ ಮೇಲ್ಮನವಿಗಳನ್ನು ಹೈಕೋರ್ಟ್ ವಿಭಾಗೀಯ ಪೀಠ ಇತ್ಯರ್ಥಪಡಿಸಿದೆ. ಕಳೆದ ಜುಲೈ 9ರಿಂದ ದಂಡುಪಾಳ್ಯಗ್ಯಾಂಗ್‌ನ ವಿರುದ್ಧದ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ರವೀಮಳಿಮs… ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ ಅರ್ಜಿಗಳನ್ನು ಇತ್ಯರ್ಥಪಡಿಸಿದೆ.
Advertisement
ದಂಡುಪಾಳ್ಯಗ್ಯಾಂಗ್‌ಗೆ ಮರಣದಂಡನೆ ಖಾಯಂಗೊಳಿಸುವಂತೆ 13 ಅರ್ಜಿಗಳು ಹಾಗೂ 25 ಮೇಲ್ಮನವಿಗಳನ್ನು ವಿಭಾಗೀಯಪೀಠ ಇತ್ಯರ್ಥಪಡಿಸಿದ್ದು, ಅತ್ಯಂತ ಕಡಿಮೆ ಅವಧಿಯಲ್ಲಿಯೇ ವಿಭಾಗೀಯ ಪೀಠ ತ್ವರಿತವಾಗಿ ಇತ್ಯರ್ಥಪಡಿಸಿದ್ದು ಇದೇ ಮೊದಲು ಎಂದು ಅರ್ಜಿದಾರರ ಪರ ವಕೀಲರು ಅಭಿಪ್ರಾಯಟ್ಟರು. ಅರ್ಜಿದಾರರ ಪರ ವಕೀಲ ಹಸ್ಮತ್‌ಪಾಷಾ ಹಾಗೂ ಪ್ರಾಸಿಕ್ಯೂಶನ್ ಪರ ಎಚ್.ಎನ್ ನಿಲಗೋಳ್ ವಾದ ಮಂಡಿಸಿದ್ದರು.