Advertisement
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿವಿಧ ವಸತಿ ಯೋಜನೆಗಳಡಿ 3.5 ಲಕ್ಷ ಮನೆಗಳು ಮಂಜೂರಾಗಿದ್ದು, ಅನುದಾನ ನೀಡದ ಕಾರಣ ಕಾಮಗಾರಿಗಳು ಅರೆಬರೆಯಾಗಿವೆ. ಅಂದಾಜು 1,500 ಸಾವಿರ ಕೋಟಿ ರೂ.ಬರಬೇಕಿದ್ದು, ನಯಾ ಪೈಸೆ ಬಿಡುಗಡೆಯಾಗಿಲ್ಲ. ಫಲಾನುಭವಿಗಳಿಗೆ 15 ದಿನಕ್ಕೊಮ್ಮೆ ಹಣ ನೀಡಬೇಕು. ಜೋಪಡಿ ಕಿತ್ತು ಹಾಕಿ ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಕಂಡ ಕಂಡಲ್ಲಿ ಸಾಲ ಮಾಡಿಕೊಂಡಿದ್ದು, ಬಡ್ಡಿ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾತೆತ್ತಿದರೆ ನಮ್ಮದು ರೈತಪರ ಸರ್ಕಾರ ಎನ್ನುತ್ತಿದ್ದರು. ಆದರೆ, ಮಳೆ ಇಲ್ಲದ ಪ್ರದೇಶಗಳ ರೈತರಿಗಾಗಿ ಜಾರಿ ಮಾಡಿದ್ದ ಕೃಷಿ ಭಾಗ್ಯ ಯೋಜನೆಯನ್ನೇ ಈ ಸರ್ಕಾರ ಕೈ ಬಿಟ್ಟಿದೆ ಎಂದು ಟೀಕಿಸಿದರು.
– ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ.