Advertisement

ಕ್ಸಿ ಜತೆ ಕಿಮ್‌ ಅಣ್ವಸ್ತ್ರ ನಿಶ್ಶಸ್ತ್ರೀಕರಣ ವಿಚಾರ ಚರ್ಚೆ

06:00 AM Mar 29, 2018 | |

ಬೀಜಿಂಗ್‌/ವಾಷಿಂಗ್ಟನ್‌: ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಭಾನುವಾರದಿಂದ ಬುಧವಾರದ ವರೆಗೆ ಚೀನಾಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದಾರೆ. ತನ್ನಲ್ಲಿರುವ ಅಣ್ವಸ್ತ್ರಗಳನ್ನು ನಿಶ್ಶಸ್ತ್ರೀಕರಣಗೊಳಿಸುವ ನಿಟ್ಟಿನಲ್ಲಿ ಕಿಮ್‌ ಶೀಘ್ರವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆಗೆ ಮಾತುಕತೆ ನಡೆಸಲಿದ್ದಾರೆ. ಅದಕ್ಕೆ ಪೂರಕವಾಗಿ ಈ ಭೇಟಿ ನಡೆದಿದೆ. ಈ ಸಂದರ್ಭದಲ್ಲಿ ಉತ್ತರ ಕೊರಿಯಾ ಹೊಂದಿರುವ ಅಣ್ವಸ್ತ್ರಗಳನ್ನು ನಿಶ್ಶಸ್ತ್ರೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಮುಖವಾಗಿ ಮಾತುಕತೆ ನಡೆಸಲಾಗಿದೆ. ಕ್ಸಿ ಜಿನ್‌ಪಿಂಗ್‌ರೇ ಆಹ್ವಾನ ನೀಡಿದ್ದರು ಮತ್ತು ಅವರು ಸ್ವದೇಶಕ್ಕೆ ಮರಳಿದ ಬಳಿಕವೇ ಈ ಭೇಟಿಯ ಬಗ್ಗೆ ಮಾಹಿತಿಯನ್ನು ಚೀನಾದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ಮಾಹಿತಿ ನೀಡಿದೆ. ಇದೊಂದು ವಿಶೇಷ ಭೇಟಿ ಎಂದು ಚೀನಾ ಅಧ್ಯಕ್ಷರು ಬಣ್ಣಿಸಿದರು ಎಂದು ಕ್ಸಿನ್‌ಹುವಾ ಹೇಳಿದೆ. ಕಿಮ್‌ ಜಾಂಗ್‌ ಉನ್‌ ಗೌರವಾರ್ಥ ಔತಣ ಕೂಟ ಮತ್ತು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಇದೇ ವೇಳೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಅಣ್ವಸ್ತ್ರಗಳನ್ನು ನಿಶ್ಶಸ್ತ್ರೀಕರಣಗೊಳಿಸಲು ಮುಂದಾಗಿರುವುದು ಸರಿಯಾಗಿದೆ. ಆ ದೇಶಕ್ಕೆ ಇದೊಂದು ಉತ್ತಮ ಅವಕಾಶ ಎಂದಿದ್ದಾರೆ ಅಮೆರಿಕ ಅಧ್ಯಕ್ಷ ಟ್ರಂಪ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next