Advertisement

ಅಗ್ನಿಪಥಗೆ ವಿರೋಧ; ಕೈ ಕಾರ್ಯಕರ್ತರ ಬಂಧನ

09:47 AM Jun 21, 2022 | Team Udayavani |

ಕಲಬುರಗಿ: ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ಅಗ್ನಿಪಥ್‌ ಯೋಜನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಒತ್ತಾಯಿಸಿ ಸೋಮವಾರ ಯುವ ಕಾಂಗ್ರೆಸ್‌ ಕಾರ್ಯಕರ್ತರು ರೈಲು ನಿಲ್ದಾಣಕ್ಕೆ ನುಗ್ಗಿ ರೈಲು ರೋಕೋ ಮಾಡಲು ಮುಂದಾಗಿದ್ದವರನ್ನು ಪೊಲೀಸರ ಬಂಧಿಸಿ ನಂತರ ಬಿಡುಗಡೆ ಮಾಡಿದರು.

Advertisement

ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಶಿವಾನಂದ ಹೊನಗುಂಟಿ ಮಾತನಾಡಿ, ಮೋದಿ ಸರಕಾರ ಸೇನೆ ಸೇರುವ ಯುವಕರ ಕನಸನ್ನು ಭಗ್ನಗೊಳಿಸುತ್ತಿದೆ. ಸೇನೆ ಸೇರುವ ಯುವಕರು ನಾಲ್ಕು ವರ್ಷಗಳ ನಂತರ ನಿವೃತ್ತಿ ಹೊಂದಲಿದ್ದಾರೆ. 4 ವರ್ಷಗಳ ಬಳಿಕ ನಿವೃತ್ತ ಯುವಕರು ಬೇರೆ ಕೆಲಸಗಳಿಗೆ ಹೋಗುವ ಅವಕಾಶ ಇದೆ ಎಂದು ಸರಕಾರ ಹೇಳುತ್ತಿದೆ. ವಾಸ್ತವದಲ್ಲಿ ಮೂರು ಸೇವೆಗಳಿಂದ 55 ಸಾವಿರಕ್ಕೂ ಹೆಚ್ಚು ನುರಿತ ಜವಾನರು ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತರ ಕೇವಲ 1 ಅಥವಾ ಶೇ.2ರಷ್ಟು ಮಾತ್ರ ಮತ್ತೂಂದು ಕೆಲಸದಲ್ಲಿ ಮರು ಸ್ಥಾಪಿಸಲಾಗುತ್ತಿದೆ. ಹೀಗಿರುವಾಗ ಅಗ್ನಿವೀರ್‌ ಮತ್ತೊಂದು ಕೆಲಸಕ್ಕೆ ಸೇರುತ್ತಾರೆ ಎಂಬುದಕ್ಕೆ ಗ್ಯಾರಂಟಿ ಏನು ಎಂದು ಪ್ರಶ್ನಿಸಿದರು. ಆದ್ದರಿಂದ ಕೂಡಲೇ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಈರಣ್ಣ ಜಳಕಿ, ಅಮರ್‌ ಶಿರ್ವಾಲ್‌ ,ಪರಶುರಾಮ ನಟೇಕರ್‌, ಶಕೀಲ್‌ ಸರಡಗಿ, ಕಾರ್ತಿಕ ನಾಟೇಕರ್‌, ಅಶೋಕ್‌, ಗೀತಾ ಮುದುಗಲ್‌ ,ಶ್ವೇತಾ ಬಳಿಚಕ್ರ, ಮಂಜುಳಾ ಪಾಟೀಲ್‌, ಸವಿತಾ ಕಾಂಬಳೆ, ಫಿರೋಜ್‌ ಆನಂದ್‌, ರಮೇಶ್‌, ಪಿಂಟು ಸೇರಿದಂತೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next