Advertisement
ಈ ಬಾರಿ ಹನಿಟ್ರ್ಯಾಪ್‌ಗೆ ಒಳಗಾದವರು ಜೈಸಲ್ಮೇರ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಪಾಯಿ ಸೋಮವೀರ ಸಿಂಗ್. ಸದ್ಯಕ್ಕೆ ಅವರನ್ನು ಬಂಧಿಸಿ ವಿಚಾರಣೆ ಗೊಳಪಡಿಸಲಾಗಿದ್ದು, ಇವರಿಗೆ ಮೋಸ ಮಾಡಿರುವ ವ್ಯಕ್ತಿ ಭಾರತದ ಇತರೆ 50 ಸೈನಿಕರಿಗೂ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.ಏನಿದು ಪ್ರಕರಣ?
ಜೈಸಲ್ಮೇರ್‌ನ ಸೇನಾ ಶಿಬಿರದ ಶಸ್ತ್ರಾಸ್ತ್ರ ಸಂಗ್ರಹಾಗಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸೋಮವೀರ್ ಸಿಂಗ್‌ಗೆ ಫೇಸ್‌ಬುಕ್‌ನಲ್ಲಿ ಅನಿಕಾ ಚೋಪ್ರಾ ಎಂಬಾಕೆ ಯೊಂದಿಗೆ ಸ್ನೇಹ ವಾಗಿತ್ತು. ಕಾಲಕ್ರಮೇಣ, ಈ ಸ್ನೇಹ ಸಲುಗೆಯಾಗಿ ಇದರ ಆಧಾರದಲ್ಲಿ ಆಕೆ ಕೇಳಿದ್ದ ಭಾರತೀಯ ಸೇನೆಯ ಕೆಲವು ಮಾಹಿತಿಗಳನ್ನು ಸಿಂಗ್ ನೀಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಈಗಾಗಲೇ ವಿವಾಹವಾಗಿರುವ ಸಿಂಗ್, ಈಕೆಯ ಸ್ನೇಹ ಬೆಳೆಸಿದ ಬಳಿಕ ತನ್ನ ಪತ್ನಿಗೆ ವಿಚ್ಛೇದನ ನೀಡಲೂ ಮುಂದಾಗಿದ್ದರು ಎನ್ನಲಾಗಿದೆ.
ತನ್ನನ್ನು, ಸೇನಾ ನರ್ಸಿಂಗ್ ಆಸ್ಪತ್ರೆಯೊಂದರ ಕ್ಯಾಪ್ಟನ್ ಎಂದು ಹೇಳಿ ನಂಬಿಸಿದ್ದಳು ಅನಿಕಾ. ಅಲ್ಲದೆ, ಫೇಸ್‌ಬುಕ್‌ನಲ್ಲಿ ಹಸಿರು ಸೀರೆ ಉಟ್ಟು, ತೆಳ್ಳಗೆ ಬೆಳ್ಳಗಿನ, ಮುಗುಳ್ನಗುತ್ತಿರುವ ಚೆಲು ವೆಯ ಫೋಟೋವೊಂದನ್ನು ಹಾಕಿದ್ದಳು. ಆ ಫೋಟೋವನ್ನು ನೋಡಿ ಸಿಂಗ್ ಮೋಹದ ಬಲೆಯಲ್ಲಿ ಬಿದ್ದಿದ್ದ ಎನ್ನಲಾಗಿದೆ.
ಬ್ಲ್ಯಾಕ್‌ಮೇಲ್
ಈ ಖಾತೆಯನ್ನು ಪಾಕಿಸ್ಥಾನ ದಿಂದ ನಿರ್ವಹಿ ಸಲಾಗುತ್ತಿದ್ದು, ಇದರ ಅರಿವಿಲ್ಲದೆ, ಸಿಂಗ್ ಹಾಗೂ ಇತರ 50 ಭಾರತೀಯ ಯೋಧರು ಮೋಸ ಹೋಗಿದ್ದಾರೆನ್ನಲಾಗಿದೆ. ಸಿಂಗ್ ವಿಚಾರದಲ್ಲಿ, ಮೊದಲಿಗೆ ಸ್ನೇಹ ಪೂರ್ವಕವಾಗಿ ಮಾಹಿತಿ ಪಡೆದು ಅನಂತರ ಬ್ಲ್ಯಾಕ್‌ವೆುàಲ್ ಮಾಡಿ ಮಾಹಿತಿ ಪಡೆಯಲಾಗಿದೆ. ಸಿಂಗ್ ನೀಡಿದ ಕೆಲವು ಮಾಹಿತಿಗಳಿಗೆ ಹಣ ವನ್ನೂ ನೀಡಲಾಗಿದೆ ಎಂದು ಸೇನೆ ತಿಳಿಸಿದೆ. ಪತ್ತೆಯಾಗಿದ್ದು ಹೇಗೆ?
ಅಸಲಿಗೆ, ಇದೊಂದು ಫೇಕ್ ಖಾತೆಯಾಗಿತ್ತು ಎಂಬುದು ಸೇನೆಯ ಗುಪ್ತಚರ ಇಲಾಖೆಯ ವಿವರಣೆ. ನಾಲ್ಕೈದು ತಿಂಗಳಿಂದೀಚೆಗೆ, ಜಮ್ಮುವಿನಿಂದ ಸೋಮವೀರ್ ಸಿಂಗ್‌ಗೆ ಕೆಲವು ದೂರವಾಣಿ ಕರೆಗಳು ಬರಲಾರಂಭಿಸಿದ್ದವು. ಇದನ್ನು ಗಮನಿಸಿದ್ದ ಸೇನೆಯ ಗುಪ್ತಚರ ಇಲಾಖೆ, ಸಿಂಗ್ ಅವರ ಚಲನ ವಲನಗಳ ಮೇಲೆ ನಿಗಾ ಇಟ್ಟಿತ್ತು. ಅವರ ಫೇಸ್‌ಬುಕ್ ಚಟುವಟಿಕೆಗಳನ್ನು ಅವಲೋಕಿಸಿದಾಗ ಕರ್ಮಕಾಂಡ ಬೆಳಕಿಗೆ ಬಂದಿದೆ.