ಅಫಜಲಪುರ: ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಬಳಸಿದ ಸಿರಿಂಜ್, ಸೂಜಿ ಹಾಗೂ ಅವಧಿ ಮುಗಿದ ಔಷಧ, ಮಾತ್ರೆಗಳನ್ನು ರಸ್ತೆ ಪಕ್ಕದಲ್ಲೇ ಬಿಸಾಡುತ್ತಿದ್ದರೂ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತಿದೆ. ಸರ್ಕಾರ ಆರೋಗ್ಯ ಇಲಾಖೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ, ಸೂಜಿ, ಸಿರಿಂಜ್ ಪೂರೈಕೆ ಮಾಡುತ್ತದೆ. ಜತೆಗೆ ಬಳಕೆ ಮಾಡಿದ ಬಳಿಕ, ಅವುಗಳನ್ನು ಏನು ಮಾಡಬೇಕು ಎನ್ನುವುದನ್ನು ನಿಯಮಗಳಲ್ಲಿ ತಿಳಿಸಿದೆ. ಆದರೆ ಬಹುತೇಕ ಆಸ್ಪತ್ರೆಗಳು ತಾವು ಬಳಸಿದ ಸೂಜಿ, ಸಿರಿಂಜ್‌ಗಳು ಹಾಗೂ ಅವಧಿ ಮುಗಿದ ಔಷಧಿ, ಮಾತ್ರೆಗಳನ್ನು ರಸ್ತೆಗಳ ಪಕ್ಕದಲ್ಲೇ ಬಿಸಾಡುತ್ತಿವೆ.
Advertisement
ನಾಮಕೇ ವಾಸ್ತೆ ವಿಲೇವಾರಿ: ಬಳಸಿ ಬಿಡುವ ಔಷಧಿಗಳು, ಅವ ಧಿ ಮುಗಿದ ಔಷಧಿಗಳು, ಸೂಜಿ, ಸಿರಿಂಜ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲಿಗೆ ಅದಕ್ಕಾಗಿಯೇ ಇರುವ ವಿಲೇವಾರಿ ಘಟಕ ವಾಹನದಲ್ಲಿ ತುಂಬಿ ಕಳುಹಿಸಬೇಕು. ಆದರೆ ಈ ವಾಹನ ಕೇವಲ ವಾನಕೇವಾಸ್ತೆ ಎನ್ನುವಂತಾಗಿದೆ.