Advertisement

ಅಫ‌ಜಲಪುರ; ಬಿಜೆಪಿ-ಕಾಂಗ್ರೆಸ್‌ನಲ್ಲಿ ಸಹೋದರರ ಸವಾಲ್‌! 

11:34 PM Mar 28, 2023 | Team Udayavani |

ಕಲಬುರಗಿ: ಭೀಮಾತೀರದ ಅಫ‌ಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಸಹೋದರರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಯಾರಿಗೆ ಟಿಕೆಟ್‌ ಎನ್ನುವಂತಾಗಿದೆ.

Advertisement

ಶಿವಮೊಗ್ಗದ ಸೊರಬದಲ್ಲಿ ಮಾಜಿ ಮುಖ್ಯ ಮಂತ್ರಿ ದಿ| ಎಸ್‌.ಬಂಗಾರಪ್ಪ ಕುಟುಂಬದಲ್ಲಿ ಟಿಕೆಟ್‌ಗಾಗಿ ಸಹೋದರರ ನಡುವೆ ಫೈಟ್‌ ನಡೆದಂತೆ ಇಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗುತ್ತದೆಯೇ ಎಂಬ ಆತಂಕ ಎರಡೂ ಕುಟುಂಬ ಹಾಗೂ ಎರಡು ಪಕ್ಷಗಳ ಕಾರ್ಯ ಕರ್ತರಲ್ಲಿ ಮನೆ ಮಾಡಿರುವುದು ಒಂದೆಡೆಯಾದರೆ; ಹೀಗಾದರೆ ಏನು ಮಾಡೋದು ಎಂಬ ಆತ್ಮಾವಲೋ ಕನದಲ್ಲಿ ಹೈಕಮಾಂಡ್‌ ಮುಳುಗಿದೆ.

ಸಹೋದರರಲ್ಲಿ ಒಡಕು: ಈ ಕ್ಷೇತ್ರದಲ್ಲಿ ಆರು ಸಲ ಗೆದ್ದಿರುವ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಗಿರುವ ಮಾಲೀಕಯ್ಯ ಗುತ್ತೇದಾರ್‌ ಕೊರೊನಾ ಸಮಯದಲ್ಲಿ ಇನ್ನು ಮುಂದೆ ಸ್ಪರ್ಧಿಸುವುದಿಲ್ಲ. ಸಹೋದರ ನಿತೀನ ಗುತ್ತೇದಾರ ಉತ್ತರಾಧಿಕಾರಿ ಎಂದು ಹೇಳಿದ್ದರು. ಆದರೆ ಈಗ ಸ್ಪರ್ಧಿಸುವಂತೆ ಬೆಂಬಲಿಗರ ಒತ್ತಡದ ಜತೆಗೆ ಬಿಜೆಪಿ ಸರಕಾರ ರಚನೆಯಾದರೆ ಸಚಿವರಾಗುವ ಅವಕಾಶದ ಹಿನ್ನೆಲೆಯಲ್ಲಿ ಸ್ಪರ್ಧೆಗೆ ಸಿದ್ಧರಾಗಿದ್ದಾರೆ. ಟಿಕೆಟ್‌ ತಮಗೇ ಸಿಗುತ್ತದೆ ಎಂದು ವಿಶ್ವಾಸದಿಂದ ಹೇಳುತ್ತಿದ್ದಾರೆ. ಆದರೆ ಇದಕ್ಕೆ ಸವಾಲೊಡ್ಡಿರುವ ಸಹೋದರ ನಿತಿನ್‌ ಗುತ್ತೇದಾರ ಬಿಜೆಪಿ ಟಿಕೆಟ್‌ ಸಿಗದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳುತ್ತಿರು ವುದು ಕುತೂಹಲ ಮೂಡಿಸಿದೆ.
ಮಾಲೀಕಯ್ಯ ಮಾತಿಗೆ ತಪ್ಪುತ್ತಿದ್ದಾರೆ. ಹೃದ ಯಕ್ಕೂ ಮಾತಿಗೂ ಸಂಬಂಧವಿಲ್ಲ ಎನ್ನುವಂತಾಗಿದೆ ಎಂದು ನಿತಿನ್‌ ಟೀಕಿಸುತ್ತಿದ್ದರೆ; ಆತನಿಗೆ ರಾಜಕೀಯದಲ್ಲಿ ತಮಗಾದ ಅನುಭವದಷ್ಟು ವಯಸ್ಸಾಗಿಲ್ಲ. ರಾಜಕೀಯದಲ್ಲಿ ಇನ್ನೂ ಬಚ್ಚಾ ಎಂದು ಮಾಲೀಕಯ್ಯ ಬಹಿರಂಗವಾಗಿ ಹೇಳುತ್ತಿದ್ದಾರೆ. ಇಬ್ಬರಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಪರಿಣಾಮ ಬೀರುವುದು ಸ್ಪಷ್ಟ. ಹೀಗಾಗಿ ಯಾರಿಗೆ ಟಿಕೆಟ್‌ ನೀಡಿದರೆ ಹೇಗೆ? ಎಂಬ ಗೊಂದಲದಲ್ಲಿ ಅಳೆದು ತೂಗುವ ಸ್ಥಿತಿಯಲ್ಲಿ ಬಿಜೆಪಿ ನಾಯಕರಿದ್ದಾರೆ.

ಶಾಸಕರ ಮಕ್ಕಳ ಪೈಪೋಟಿ: ಇನ್ನು ಹಾಲಿ ಕಾಂಗ್ರೆಸ್‌ ಪಕ್ಷದ ಶಾಸಕ ಎಂ.ವೈ. ಪಾಟೀಲರಿಗೆ ಈಗ 80 ವರ್ಷ. ಹೀಗಾಗಿ ವಯಸ್ಸಿನ ಕಾರಣದಿಂದ ಸ್ಪರ್ಧಿಸುವುದಿಲ್ಲ. ಮಗನಿಗೆ ಸೀಟು ಬಿಟ್ಟು ಕೊಡುವುದಾಗಿ ಈಗಾಗಲೇ ಹೇಳಿದ್ದಾರೆ. ಆದರೆ ಟಿಕೆಟ್‌ಗಾಗಿ ಇಬ್ಬರು ಮಕ್ಕಳಾದ ಜಿ.ಪಂ. ಮಾಜಿ ಸದಸ್ಯ ಅರುಣಕುಮಾರ ಪಾಟೀಲ್‌ ಹಾಗೂ ವೈದ್ಯರಾದ ಡಾ| ಸಂಜು ಪಾಟೀಲ್‌ ನಡುವೆ ಪೈಪೋಟಿ ಏರ್ಪಟ್ಟಿದೆ. ಇಬ್ಬರೂ ಟಿಕೆಟ್‌ಗಾಗಿ ಅರ್ಜಿ ಹಾಕಿದ್ದಾರೆ. ಮತ್ತೂಂದೆಡೆ ಶಾಸಕರ ಸಹೋದರ ಕ್ಲಾಸ್‌ ವನ್‌ ಗುತ್ತಿಗೆದಾರ ಎಸ್‌.ವೈ. ಪಾಟೀಲ್‌ ಸಹ ಟಿಕೆಟ್‌ ಕೇಳಿದ್ದಾರೆ. ಇದರ ನಡುವೆ ಕಾಂಗ್ರೆಸ್‌ ಮುಖಂಡ ರಾಜೇಂದ್ರ ಪಾಟೀಲ್‌ ರೇವೂರ ತಮಗೆ ಟಿಕೆಟ್‌ ನೀಡಿದಲ್ಲಿ ಪಕ್ಷ ಗೆಲ್ಲುತ್ತದೆ ಎಂದು ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದರೆ, ಮತ್ತೂಂದೆಡೆ ಕುರುಬ ಸಮಾಜದ ಜೆ.ಎಂ. ಕೊರಬು ಮಾಜಿ ಸಿಎಂ ಸಿದ್ದರಾಮಯ್ಯ ಮೂಲಕ ಟಿಕೆಟ್‌ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಪಕ್ಷದ ಹಿರಿಯ ಕಾರ್ಯಕರ್ತರು. ಇದೊಂದು ಸಲ ಎಂ.ವೈ ಪಾಟೀಲ್‌ರಿಗೆ ಟಿಕೆಟ್‌ ನೀಡಿದರೆ ಎಲ್ಲ ಸಮಸ್ಯೆಗೆ ಪರಿಹಾರ ಎನ್ನುತ್ತಿದ್ದಾರೆ. ಹೀಗಾಗಿ ಐವರ ನಡುವೆ ಯಾರಿಗೆ ಟಿಕೆಟ್‌ ಎನ್ನುವಂತಾಗಿದೆ. ಹೈಕಮಾಂಡ್‌ ಯಾರಿಗೆ ಮಣೆ ಹಾಕುತ್ತದೆ ಎಂಬುದೇ ಕುತೂಹಲವಾಗಿದೆ. ಮತ್ತೆ ಎಂ.ವೈ. ಪಾಟೀಲ್‌ರಿಗೆ ಟಿಕೆಟ್‌ ನೀಡಿದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

ಪಾಟೀಲ್‌ ಕುಟುಂಬ ಕಣಕ್ಕೆ: ಈ ನಡುವೆ ಪಿಎಸ್‌ಐ ಹಗರಣದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಚುನಾವಣೆಗೆ ಸಿದ್ದತೆ ನಡೆಸುತ್ತಿದ್ದ ಸಂದರ್ಭದಲ್ಲೇ ಹಗರಣ ಬಯಲಿಗೆ ಬಂದು ಜೈಲು ಪಾಲಾಗಿದ್ದರಿಂದ ರಾಜಕೀಯಕ್ಕೆ ಬ್ರೇಕ್‌ ಬಿದ್ದಿತ್ತು. ಈಗ ಅವರ ತಾಯಿ ಇಲ್ಲವೇ ಪತ್ನಿ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಗಳಿವೆ. ಈಗಾಗಲೇ ಸಹೋದರ ಮಹಾಂತೇಶ ಪಾಟೀಲ್‌ ಚುನಾವಣೆಗೆ ತಮ್ಮ ಕುಟುಂಬದವರು ಸ್ಪರ್ಧಿಸುವುದು ಪಕ್ಕಾ ಎಂದಿದ್ದಾರೆ.

Advertisement

ಇನ್ನೊಂದೆಡೆ ಜೆಡಿಎಸ್‌ದಿಂದ ಹೋರಾಟಗಾರ ಶಿವಕುಮಾರ ನಾಟೀಕಾರ ಕಳೆದೊಂದು ವರ್ಷದಿಂದ ಹಗಲಿರಳು ಕ್ಷೇತ್ರದಲ್ಲಿ ಸಂಚಾರ ಮಾಡುತ್ತಿದ್ದು, ಮತದಾರರ ಒಲವು ಗಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಪ್ರಮುಖವಾಗಿ ಅಫ‌ಜಲಪುರ ಕ್ಷೇತ್ರದಲ್ಲಿ ಬಂದುಳಿದ ವರ್ಗಗಳ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಯಲಿದ್ದಾರೆ.

ಹಿರಿಯರು ಹೊರಗೋ-ಒಳಗೋ
ಆರು ಸಲ ಗೆದ್ದಿರುವ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹಾಗೂ ಮೂರು ಸಲ ಗೆದ್ದಿರುವ ಹಾಲಿ ಶಾಸಕ ಎಂ.ವೈ. ಪಾಟೀಲ್‌ ಇಬ್ಬರೂ ಈ ಸಲ ಚುನಾವಣ ಕಣದಿಂದ ಹೊರಗುಳಿಯುತ್ತಾರೆಯೋ? ಇಲ್ಲವೇ ಇಬ್ಬರೂ ಎದುರು ಬದುರಾಗಿ ಸ್ಪರ್ಧಿಸುತ್ತಾರೆಯೋ? ಎಂಬ ಲೆಕ್ಕಾಚಾರ ಹಾಗೂ ಗೊಂದಲದ ಜತೆಗೆ ಸಹೋದರ ನಡುವಿನ ಟಿಕೆಟ್‌ ಫೈಟ್‌ದಿಂದ ಅಫ‌ಜಲಪುರ ಕ್ಷೇತ್ರ ಹೈವೋಲ್ಟೆàಜ್‌ ಕ್ಷೇತ್ರವಾಗಿ ಹೊರ ಹೊಮ್ಮಿದೆ.

-ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next