Advertisement

ಟೊಮ್ಯಾಟೊ ಬಳಿಕ ಶುಂಠಿ, ಕೊತ್ತಂಬರಿ, ಹಸಿಮೆಣಸಿನ ದರವೂ ದುಬಾರಿ

07:52 PM Jul 06, 2023 | Team Udayavani |

ನವದೆಹಲಿ: ದೇಶದಲ್ಲಿ ಬೆಲೆ ಇಳಿಕೆಯಾಗಬಹುದೆನ್ನುವ ಆಶಾವಾದ ಶುರುವಾಗಿರುವ ಹೊತ್ತಿನಲ್ಲೇ, ತರಕಾರಿ ಬೆಲೆಗಳು ವಿಪರೀತ ಏರಿವೆ. ಈ ಹಿಂದೆ ಅಗ್ಗವೆಂದೇ ಪರಿಗಣಿಸಲ್ಪಟ್ಟಿದ್ದ ಟೊಮ್ಯಾಟೊ ದೇಶದ ಒಂದೊಂದು ನಗರಗಳಲ್ಲಿ ಒಂದೊಂದು ರೀತಿ ಏರಿಕೆಯಾಗಿದೆ. ಮಾತ್ರವಲ್ಲ ಹೂಕೋಸು, ಶುಂಠಿ, ಕೊತ್ತಂಬರಿ, ಹಸಿಮೆಣಸಿನ ಬೆಲೆಗಳೂ ಏರಿವೆ.

Advertisement

ಕೋಲ್ಕತದಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ 152 ರೂ, ದೆಹಲಿಯಲ್ಲಿ 120 ರೂ., ಚೆನ್ನೈನಲ್ಲಿ 117 ರೂ., ಮುಂಬೈನಲ್ಲಿ 108 ರೂ. ಇದೆ. ಇನ್ನು ದೆಹಲಿಯಲ್ಲಿ ಹೂಕೋಸಿನ ಬೆಲೆ 80 ರೂ., ಶುಂಠಿ 1 ಕೆಜಿಗೆ 380 ರೂ., ಹಸಿಮೆಣಸು ಕೆಜಿಗೆ 170 ರೂ.ಗಳಾಗಿದೆ.

ಏಪ್ರಿಲ್‌ನಲ್ಲಿ ಹಣದುಬ್ಬರ ಪ್ರಮಾಣ ಶೇ. 4.7ರಷ್ಟಿತ್ತು. ಮೇ ನಲ್ಲಿ ಆ ಪ್ರಮಾಣ ಶೇ.4.25ಕ್ಕೆ ಇಳಿದಿದೆ. ಹೀಗಿದ್ದರೂ ತರಕಾರಿ ಬೆಲೆ ಏರುತ್ತಿರುವುದು ಜನರ ಜೇಬಿಗೆ ದೊಡ್ಡಮಟ್ಟದಲ್ಲಿ ಕತ್ತರಿ ಹಾಕಿದೆ. ಒಂದು ಕಡೆ ವಿಪರೀತ ಬಿಸಿಲು, ಮತ್ತೂಂದು ಕಡೆ ಪ್ರವಾಹ ಇವೆರಡರಿಂದ ತರಕಾರಿ ಪೂರೈಕೆಯೇ ಅಸ್ತವ್ಯಸ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next