Advertisement

Kerala ಚಿತ್ರರಂಗದ ಬಳಿಕ ಕಾಂಗ್ರೆಸ್ಸಲ್ಲಿ ಮೀ ಟೂ ಕಿಡಿ?

01:17 AM Sep 02, 2024 | Team Udayavani |

ತಿರುವನಂತಪುರಂ: ಕೇರಳ ಕಾಂಗ್ರೆಸ್‌ ಘಟಕ­ದಲ್ಲೂ ಮಿ ಟೂ ಬಿರುಗಾಳಿ ಸೃಷ್ಟಿ­ಯಾ­ಗಿದೆ. ಪಕ್ಷದ ನಾಯಕರೊಂದಿಗೆ ಯಾರು ಚೆನ್ನಾಗಿರುತ್ತಾರೋ ಅಂಥವ ರಿಗೆ ಮಾತ್ರ ಉನ್ನತ ಸ್ಥಾನ ನೀಡ­ಲಾ­ಗುತ್ತಿದೆ ಎಂದು ಕಾಂಗ್ರೆಸ್‌ ನಾಯಕಿ ಸಿಮಿ ರೋಸ್‌ಬೆಲ್ಲಾ ಜಾನ್‌ ಆರೋಪಿಸಿ­ದ್ದಾರೆ. ಅಲ್ಲದೇ, ಕಾಂಗ್ರೆಸ್‌ “ಕಾಸ್ಟಿಂಗ್‌ ಕೌಚ್‌’ (ಅವಕಾಶಕ್ಕಾಗಿ ಲೈಂಗಿಕ ದುರ್ಬಳಕೆ) ಅನುಸರಿಸುತ್ತಿದೆ ಎಂದಿದ್ದಾರೆ.

Advertisement

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು  ಕೆಪಿಸಿಸಿಯಲ್ಲಿ ಇದೇ ರೀತಿ ಸಾಕಷ್ಟು ಮಹಿಳೆಯರಿಗೆ ಅನ್ಯಾಯವಾಗಿದೆ. ಅದಕ್ಕೆ ದಾಖಲೆ, ಸಾಕ್ಷಿಯೂ ನನ್ನ ಬಳಿ ಇದೆ. ಸೂಕ್ತ ಸಮಯದಲ್ಲಿ ಬಿಡುಗಡೆಗೊಳಿಸುತ್ತೇನೆ’ ಎಂದು ಹೇಳಿದ್ದಾರೆ.

ಪಕ್ಷದಿಂದ ಉಚ್ಚಾಟನೆ

ಕಾಂಗ್ರೆಸ್‌ ಬಗ್ಗೆ ಸಿಮಿ ಆರೋಪ ಬೆನ್ನಲ್ಲೇ ಪಕ್ಷದಿಂದ ಅವ­ರನ್ನು ಉಚ್ಚಾ­ಟಿಸಲಾಗಿದೆ. ಪಕ್ಷದ ಲಕ್ಷಾಂತರ ಮಹಿಳಾ ಕಾರ್ಯಕರ್ತರ ಮನೋಬಲ ಕುಗ್ಗಿಸಲು, ಅವರ ಘನತೆಗೆ ಧಕ್ಕೆ ತರಲು ವಿರೋಧಿಗಳ ಕುಮ್ಮಕ್ಕಿ­ನೊಂದಿಗೆ ಸಿಮಿ ಆರೋಪ ಮಾಡಿ­ದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತುಕ್ರಮ ಜರಗಿ­ಸಲಾಗಿದೆ ಎಂದು ಕೆಪಿಸಿಸಿ ತಿಳಿಸಿದೆ. ಕಾಂಗ್ರೆಸ್‌ ಮಹಿಳಾ ಘಟಕವೂ ಸಿಮಿ ವಿರುದ್ಧ ದೂರು ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next