ಮುಂಬಯಿ: ಶಾರುಖ್ ಖಾನ್ ಅಭಿನಯದ ʼಪಠಾಣ್ʼ ಸಿನಿಮಾ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ಒಂದಷ್ಟು ಕಾರಣದಿಂದ ಸುದ್ದಿಯಾದ ಸಿನಿಮಾದ ʼಬೇಷರಂ ರಂಗ್ʼ ಹಾಡು ಸಿನಿಮಾಕ್ಕೆ ಪಾಸಿಟಿವ್ ಹಾಗೂ ನೆಗೆಟಿವ್ ಎರಡು ಕಡೆಯಿಂದಲೂ ಪರಿಣಾಮ ಬೀರಿದೆ.
ಈಗಾಗಲೇ ಸಿನಿಮಾ ಅಡ್ವಾನ್ಸ್ ಬುಕಿಂಗ್ ನಲ್ಲಿ ದಾಖಲೆ ಬರೆದಿದೆ. ಒಂದು ಕಡೆಯಿಂದ ಕೆಲವರು ಸಿನಿಮಾದ ಹಾಡನ್ನು ಹಿಡಿದುಕೊಂಡು ಬಾಯ್ಕಾಟ್ ಮಾಡುತ್ತಿದ್ದರೆ, ಇನ್ನೊಂದೆಡೆ ಬಹು ಸಮಯದ ಬಳಿಕ ಅಭಿಮಾನಿಗಳು ಶಾರುಖ್ ಅವರನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ.
ಇದನ್ನೂ ಓದಿ: ಅಪ್ಪು ಹುಟ್ಟು ಹಬ್ಬಕ್ಕೆ ʼಕಬ್ಜʼ ರಿಲೀಸ್: ರೆಟ್ರೋ ಅವತಾರದಲ್ಲಿ ಉಪ್ಪಿ
ಸಿನಿಮಾದ ಬಗ್ಗೆ ಇದೀಗ ನಟಿ ದೀಪಿಕಾ ಪಡುಕೋಣೆ ಅವರು ಮಾತನಾಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ದೀಪಿಕಾ ಪಡುಕೋಣೆ ಸಿನಿಮಾದ ಹಾಡುಗಳ ಬಗ್ಗೆ ಮಾತನಾಡಿದ್ದಾರೆ.
Related Articles
ಜೂಮ್ ಜಾ ಪಠಾಣ್ ಹಾಗೂ ಬೇಷರಂ ರಂಗ್ ಇದರಲ್ಲಿ ಯಾವ ಹಾಡು ನಿಮಗೆ ಇಷ್ಟವೆನ್ನುವ ಪ್ರಶ್ನೆಗೆ ಉತ್ತರಿಸಿದ ದೀಪಿಕಾ, ಎರಡೂ ಹಾಡುಗಳು ನನ್ನ ಇಷ್ಟದ ಹಾಡುಗಳು, ಈ ಹಾಡುಗಳು ಭಿನ್ನವಾಗಿ ಮೂಡಿಬಂದಿದೆ. ʼಬೇಷರಂʼ ಹಾಡು ನನ್ನ ಇಷ್ಟದ ಹಾಡು. ನಾವು ಶೂಟಿಂಗ್ ಮಾಡುತ್ತಿದ್ದ ಸ್ಥಳ ಕಷ್ಟಕರವಾಗಿತ್ತು. ಈ ಹಾಡು ತುಂಬಾ ಸುಂದರವಾಗಿ ಮೂಡಿಬಂದಿದೆ ಎಂದಿದ್ದಾರೆ.
ಹಾಡಿನ ಚಿತ್ರೀಕರಣದ ವೇಳೆ ಎಂಜಾಯ್ ಮಾಡಿ, ಸ್ಟೆಪ್ ಗಳನ್ನು ಹಾಕುತ್ತಿದ್ದೆವು. ಎರಡೂ ಹಾಡುಗಳು ನನ್ನ ಇಷ್ಟದ ಹಾಡುಗಳು, ಈ ಎರಡೂ ಹಾಡುಗಳೂ ದೊಡ್ಡಮಟ್ಟದಲ್ಲಿ ಹಿಟ್ ಆಗಿರುವುದು ಖುಷಿಯಿದೆ ಎಂದಿದ್ದಾರೆ.
ಇದೇ ಜ.25 ರಂದು ಸಿನಿಮಾ ʼಪಠಾಣ್ʼ ತೆರೆಗೆ ಬರಲಿದೆ.