Advertisement

ಭಾರತೀಯ ಸಿಬ್ಬಂದಿಗೆ ಸ್ವಯಂ ಪ್ರೇರಿತವಾಗಿ ಕೆಲಸ ಬಿಡಿ ಎಂದ ಬೆಟರ್‌ ಡಾಟ್‌ ಕಾಮ್‌

09:15 AM May 17, 2022 | Team Udayavani |

ವಾಷಿಂಗ್ಟನ್‌: ಕೆಲ ತಿಂಗಳ ಹಿಂದೆ ಜೂಮ್‌ ಕಾಲ್‌ನಲ್ಲೇ 900 ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಸುದ್ದಿಯಾಗಿದ್ದ “ಬೆಟರ್‌ ಡಾಟ್‌ ಕಾಮ್‌’ ಸಂಸ್ಥೆ ಇದೀಗ ಮತ್ತೆ ಸುದ್ದಿಯಲ್ಲಿದೆ.

Advertisement

ಸಂಸ್ಥೆಯು ಭಾರತೀಯ ಸಿಬ್ಬಂದಿಗೆ ಸ್ವಯಂ ಪ್ರೇರಿತವಾಗಿ ಕೆಲಸ ಬಿಡಿ ಎಂದು ಹೇಳಿ, “ಆಪ್ಶನ್‌ ಟು ಲೀವ್‌’ ಆಯ್ಕೆ ತೆರೆದಿದೆ.

ಸಾಕಷ್ಟು ಸಿಬ್ಬಂದಿಯೂ ಸಂಸ್ಥೆಯಿಂದಾಗಿ ಬೇಸತ್ತಿದ್ದು, ಸುಮಾರು 920 ಸಿಬ್ಬಂದಿ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಹಿಂದೆ ಜೂಮ್‌ ಕಾಲ್‌ನಲ್ಲಿ ಅಮೆರಿಕ ಮತ್ತು ಭಾರತದ 900 ಸಿಬ್ಬಂದಿಯನ್ನು ಕೆಲಸದಿಂದ ತೆಗೆದ ನಂತರ 2022ರ ಏಪ್ರಿಲ್‌ನಲ್ಲಿ ಸಂಸ್ಥೆ ಮತ್ತೆ 1000 ಸಿಬ್ಬಂದಿಯನ್ನು ಕೆಲಸದಿಂದ ತೆಗೆದಿತ್ತು. ಸಂಸ್ಥೆಯ ವ್ಯವಹಾರದಲ್ಲಿ ಸಾಕಷ್ಟು ಏರಿಳಿತವಾದ್ದರಿಂದ ಈ ನಿರ್ಧಾರ ಅಗತ್ಯ ಎಂದು ಸಂಸ್ಥೆ ಹೇಳಿಕೊಂಡಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next