Advertisement

ಮತ್ತೆ ತೈವಾನ್‌ಗೆ ಬಂದಿಳಿದ ಅಮೆರಿಕ ನಿಯೋಗ!

09:19 PM Aug 14, 2022 | Team Udayavani |

ತೈಪೆ: ಅಮೆರಿಕ ಸಂಸತ್ತಿನ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತೈವಾನ್‌ ಭೇಟಿ ಬೆನ್ನಲ್ಲೇ ತೈವಾನ್‌ ಮೇಲೆ ಚೀನ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವಂತೆಯೇ ಅಮೆರಿಕ ಮತ್ತೊಂದು ನಿಯೋಗವನ್ನು ತೈವಾನ್‌ಗೆ ಕಳುಹಿಸಿಕೊಟ್ಟಿದೆ. ಅಮೆರಿಕ ಸರ್ಕಾರದ ಐವರು ಸದಸ್ಯರ ನಿಯೋಗ ಭಾನುವಾರ ತೈವಾನ್‌ಗೆ ಬಂದಿಳಿದಿದೆ.

Advertisement

ಈ ನಿಯೋಗವು ತೈವಾನ್‌ ಅಧ್ಯಕ್ಷ ತ್ಸೆ„ ಇಂಗ್‌-ವೆನ್‌ ಅವರನ್ನು ಭೇಟಿ ಮಾಡಲಿದ್ದು, ವಿದೇಶಾಂಗ ಸಚಿವ ಜೋಸೆಫ್ ವು ಅವರ ಔತಣಕೂಟದಲ್ಲಿಯೂ ಭಾಗವಹಿಸಲಿದೆ.

ಉಭಯ ದೇಶಗಳ ಸಂಬಂಧ, ಪ್ರಾದೇಶಿಕ ಭದ್ರತೆ, ವ್ಯವಹಾರ ಮತ್ತು ಹೂಡಿಕೆ, ಹವಾಮಾನ ಬದಲಾವಣೆ ಸೇರಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿವೆ.

ಆ.4ರಿಂದಲೂ ಚೀನವು ತೈವಾನ್‌ ಮೇಲೆ ದಾಳಿ ನಡೆಸುತ್ತಲೇ ಇದೆ. ಅಂದಿನಿಂದ ಆ.14ರವರೆಗೆ ಚೀನದ 22 ವಿಮಾನಗಳು ಮತ್ತು 6 ಹಡಗುಗಳು ತೈವಾನ್‌ ಗಡಿ ಬಳಿ ಸುಳಿದಾಡಿವೆ. ಹಾಗೂ ಅದರಲ್ಲಿ 11 ವಿಮಾನಗಳು ಚೀನಾ-ತೈವಾನ್‌ ನಡುವಿನ ಅನಧಿಕೃತ ಗಡಿ ರೇಖೆ ದಾಟಿವೆ ಎಂದು ತೈವಾನ್‌ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next