ಹೊಸದಿಲ್ಲಿ: ಜಗತ್ತಿನ ಇ- ಕಾಮರ್ಸ್ ದೈತ್ಯ ಅಮೆಜಾನ್ ಕೂಡ ಉದ್ಯೋಗಿಗಳನ್ನು ತೆಗೆದು ಹಾಕುವ ಪ್ರಕ್ರಿಯೆಗೆ ಮುಂದಾಗಿದೆ.
ಕಂಪೆನಿಯ ಲಾಭ ತರದ ವಿಭಾಗಗಳಲ್ಲಿ ಕೆಲಸ ಮಾಡುವವರನ್ನು ತೆಗೆದು ಹಾಕಲು ನಿರ್ಧಾರ ಕೈಗೊಂಡಿದೆ. ರೋಬೋಟಿಕ್ಸ್ ವಿಭಾ ಗದಲ್ಲಿ ಕೆಲಸ ಮಾಡುವ ಎಲ್ಲರನ್ನೂ ಕರ್ತವ್ಯದಿಂದ ಕೈಬಿಡಲಾಗಿದೆ ಎಂದು ಜೆಮೀ ಝಾಂಗ್ ಎಂಬ ವರು ಜಾಲತಾಣಲವೊಂದರಲ್ಲಿ ಬರೆದುಕೊಂಡಿದ್ದಾರೆ.
ಒಂದೂ ವರೆ ವರ್ಷದಿಂದ ನಾನು ಆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೆ. ಸಂಸ್ಥೆಯ ನಿರ್ಧಾರ ಅಚ್ಚರಿ ತಂದಿದೆ ಎಂದು ಹೇಳಿಕೊಂಡಿದ್ದಾರೆ. ಒಟ್ಟು 10 ಸಾವಿರ ಮಂದಿ ಕೆಲಸ ಕಳೆದು ಕೊಂಡಿದ್ದಾರೆ ಎಂದು ಹೇಳಲಾ ಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಟ್ವಿಟರ್, ಮೆಟಾದಿಂದ ಉದ್ಯೋಗಿ ಗಳನ್ನು ತೆಗೆದು ಹಾಕಲಾಗಿತ್ತು.