ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ನ ಮೊದಲ ಸ್ವತಂತ್ರ ಮುಖ್ಯಸ್ಥನೆಂಬ ಹೆಗ್ಗಳಿಕೆ ಹೊಂದಿರುವ ಶಶಾಂಕ್ ಮನೋಹರ್ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಇದು ಐಸಿಸಿ ಸೇರಿದಂತೆ ಸಮಸ್ತ ಕ್ರಿಕೆಟ್ ವಲಯಕ್ಕೆ ಅಚ್ಚರಿ ತಂದಿದೆ. ತಮ್ಮ ರಾಜೀನಾಮೆಯನ್ನು ಶಶಾಂಕ್ ಐಸಿಸಿ ಸಿಇಒ ಡೇವ್ ರಿಚಡ್ಸìನ್‌ಗೆ ಇ-ಮೈಲ್ ಮಾಡಿದ್ದಾರೆ. ಯಾವುದೇ ನಿರ್ದಿಷ್ಟ ಕಾರಣಗಳನ್ನು ಉಲ್ಲೇಖೀಸದೇ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡುತ್ತಿದ್ದೇನೆಂದು ಹೇಳಿದ್ದಾರೆ.
ಐಸಿಸಿಯಲ್ಲಿ ಜವಾಬ್ದಾರಿ ವಹಿಸಿಕೊಂಡ ಅನಂತರ ಶಶಾಂಕ್ ಅವರು ಬಿಸಿಸಿಐಗೇ ಸಡ್ಡು ಹೊಡೆದು ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೆ ಕಾರಣವಾಗಿತ್ತು. ಸದ್ಯದಲ್ಲೇ ಐಸಿಸಿಯ ಮಹತ್ವದ ಸಭೆ ನಡೆಯಲಿದ್ದು, ಇಲ್ಲಿ ಹಲವಾರು ಆರ್ಥಿಕ ಸುಧಾರಣೆ ಕುರಿತ ತೀರ್ಮಾನ ತೆಗೆದುಕೊಳ್ಳುವವರಿದ್ದರು.
ಉನ್ನತ ಮೂಲಗಳ ಪ್ರಕಾರ ಶಶಾಂಕ್ ದಿಢೀರ್ ರಾಜೀನಾಮೆ ನೀಡುವುದರ ಹಿಂದಿನ ಉದ್ದೇಶ ಬಿಸಿಸಿಐಯಿಂದ ಸಂಭಾವ್ಯ ಮುಖಭಂಗ ತಪ್ಪಿಸಿಕೊಳ್ಳುವುದು ಎನ್ನಲಾಗಿದೆ. ಸದ್ಯದಲ್ಲೇ ನಡೆಯುವ ಐಸಿಸಿ ಸಭೆಯಲ್ಲಿ ಕೆಲವು ಆರ್ಥಿಕ ಸುಧಾರಣೆಗಳನ್ನು ಕುರಿತ ತೀರ್ಮಾನ ಮಾಡಬೇಕಿದೆ. ಇದು ಒಪ್ಪಿಗೆಯಾಗಬೇಕಿದ್ದರೆ 3ರಲ್ಲಿ 2ರಷ್ಟು ಬಹುಮತ ಬೇಕು. ಈ ಸುಧಾರಣೆಗಳಿಗೆ ಬಿಸಿಸಿಐ ವಿರೋಧವಿದೆ. ಬಿಸಿಸಿಐಗೆ ಬಾಂಗ್ಲಾದೇಶ, ಶ್ರೀಲಂಕಾ, ಜಿಂಬಾಬ್ವೆ ಬೆಂಬಲವಿರುವುದರಿಂದ ಶಶಾಂಕ್ ನಿಲುವಿಗೆ ಸೋಲಾಗುವುದು ಖಂಡಿತವೆನ್ನಲಾಗಿದೆ. ಇದು ಶಶಾಂಕ್‌ಗೆ ಭಾರೀ ಅವಮಾನ ಉಂಟು ಮಾಡಲಿದೆ. ಇದನ್ನು ಮುಂದಾಲೋಚಿಸಿಯೇ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ. ಶಶಾಂಕ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಐಸಿಸಿ, ಈ ಬಗ್ಗೆ ಪರಿಶೀಲಿಸಿ ನಿರ್ಧರಿಸುವುದಾಗಿ ತಿಳಿಸಿದೆ.ಸದ್ಯ ಶಶಾಂಕ್ ಐಸಿಸಿಯಲ್ಲಿ ಕೇವಲ 9 ತಿಂಗಳು ಅಧಿಕಾರಾವಧಿ ಪೂರೈಸಿದ್ದಾರೆ. ಇನ್ನೂ 15 ತಿಂಗಳ ಅಧಿಕಾರಾವಧಿ ಬಾಕಿಯಿದೆ.
ಬಿಸಿಸಿಐಗೂ ದಿಢೀರ್ ರಾಜೀನಾಮೆ ನೀಡಿದ್ದ ಶಶಾಂಕ್ ಮನೋಹರ್
ಶಶಾಂಕ್ ಈ ನಡೆ ಪಲಾಯನ ವಾದವೇ ಎಂಬ ಪ್ರಶ್ನೆಗಳಿಗೆ ಕಾರಣ ವಾಗಿದೆ. 2016ರಲ್ಲಿ ಅವರು ಒಂದು ಇಕ್ಕಟ್ಟಿನ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೂ ದಿಢೀರ್ ರಾಜೀನಾಮೆ ನೀಡಿದ್ದರು. ಆಗ ಐಸಿಸಿ ನೂತನ ಸಂವಿಧಾನವೇ ಹೀಗಿರುವುದರಿಂದ ಶಶಾಂಕ್ ರಾಜೀನಾಮೆ ಅನಿವಾರ್ಯ ಎಂದು ವರ್ಣಿಸಲಾಗಿತ್ತು. ಇದೀಗ ಐಸಿಸಿಗೆ ರಾಜೀನಾಮೆ ನೀಡಿ ರುವುದು, ಹಿಂದೆ ಬಿಸಿಸಿಐಗೆ ರಾಜೀನಾಮೆ ನೀಡಿರುವುದು ಎರಡನ್ನೂ ಪರಿಗಣಿಸಿದಾಗ ಸಮಾನ ಅಂಶವೊಂದು ಕಾಣಿಸುತ್ತಿದೆಯೆಂದು ಕೆಲ ವರು ಅಭಿಪ್ರಾಯಪಡುತ್ತಾರೆ. ಅವರು ಬಿಸಿಸಿಐಗೆ ರಾಜೀನಾಮೆ ನೀಡುವಾಗ ಬಿಸಿಸಿಐ ಬಹಳ ಇಕ್ಕಟ್ಟಿನಲ್ಲಿತ್ತು. ಲೋಧಾ ಸಮಿತಿ ಶಿಫಾರಸನ್ನು ಜಾರಿ ಮಾಡಲೇಬೇಕೆಂದು ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು. ಅದಕ್ಕೆ ಬಿಸಿಸಿಐ ತನ್ನ ವಿರೋಧ ಮುಂದುವರಿಸಿತ್ತು. ಶಶಾಂಕ್ ತಮ್ಮ ಸ್ಥಾನ ದಲ್ಲಿಯೇ ಮುಂದುವರಿದಿದ್ದರೆ ಬಹಳ ಇಕ್ಕಟ್ಟಿಗೊಳಗಾಗುತ್ತಿದ್ದರು. ಸದ್ಯ ಅನುರಾಗ್ ಠಾಕೂರ್ ಪದಚ್ಯುತಿಗೊಂಡಂತೆ ಶಶಾಂಕ್ ಕೂಡ ಪದಚ್ಯುತಿಗೊಳ್ಳುವ ಸಾಧ್ಯತೆಯಿತ್ತು. ಅಂತಹ ರಗಳೆಗಳಿಂದ ಪಾರಾಗಲು ಅವರು ರಾಜೀನಾಮೆ ನೀಡಿದ್ದರು, ಸದ್ಯ ಐಸಿಸಿಯಲ್ಲಿ ಮತ್ತೂಂದು ರೀತಿಯ ಇಕ್ಕಟ್ಟನ್ನು ಪರಿಗಣಿಸಿ ಅವರು ರಾಜೀ ನಾಮೆ ನೀಡಿದ್ದಾರೆಂದು ಹೇಳಲಾಗಿದೆ.
ನಾನು ಅವಿರೋಧವಾಗಿ ಐಸಿಸಿ ಮುಖ್ಯಸ್ಥ ನಾಗಿ ಆಯ್ಕೆಯಾಗಿದ್ದೇನೆ. ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಪ್ರಾಮಾಣಿಕವಾಗಿ ಯತ್ನಿಸಿದ್ದೇನೆ. ಸದಸ್ಯ ಮಂಡಳಿಗಳ ವಿಚಾರ ದಲ್ಲೂ ಪಕ್ಷಪಾತ ತೋರಿಲ್ಲ. ಖಾಸಗಿ ಕಾರಣಗಳಿಂದ ಈ ಹುದ್ದೆಯಲ್ಲಿ ಮುಂದು ವರಿಯಲು ಸಾಧ್ಯವಾಗುತ್ತಿಲ್ಲ. ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು.
-ಶಶಾಂಕ್ ಮನೋಹರ್,
ಐಸಿಸಿ ಮಾಜಿ ಮುಖ್ಯಸ್ಥ