Advertisement

ಹಲವು ವರ್ಷಗಳ ಬಳಿಕ ಪುಲ್ವಾಮದಲ್ಲಿ ಸಿನಿಮಾ ಹಾಲ್‌ ಶುರು

08:21 PM Sep 18, 2022 | Team Udayavani |

ಶ್ರೀನಗರ: ಹಲವು ವರ್ಷಗಳಿಂದ ಚಿತ್ರ ಮಂದಿರವೇ ಇಲ್ಲದಾಗಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೀಗ ಮತ್ತೆ ಚಿತ್ರ ಮಂದಿರಗಳು ಶುರುವಾಗಲಾರಂಭಿಸಿವೆ.

Advertisement

ಪುಲ್ವಾಮಾ ಮತ್ತು ಶೋಪಿಯಾನ್‌ ಜಿಲ್ಲೆಯಲ್ಲಿ ಕೆಲವು ಚಿತ್ರಮಂದಿರಗಳನ್ನು ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ಭಾನುವಾರ ಉದ್ಘಾಟಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಇದೊಂದು ಐತಿಹಾಸಿಕ ದಿನ. ಇದು ಸಿನಿಮಾ ವೀಕ್ಷಣೆಗೆ ಮಾತ್ರವಲ್ಲದೆ, ಮಾಹಿತಿ ಹಂಚಿಕೆಗೆ ಹಾಗೂ ಯುವ ಜನತೆಗೆ ಕೌಶಲ್ಯ ಅಭಿವೃದ್ಧಿಗೂ ಸಹಕಾರಿಯಾಗಲಿದೆ’ ಎಂದಿದ್ದಾರೆ. ಅವರು ನೂತನ ಸಿನಿಮಾ ಹಾಲ್‌ನಲ್ಲಿ ಕುಳಿತು ಬಾಲಿವುಡ್‌ನ‌ “ಭಾಗ್‌ ಮಿಲ್ಕಾ ಭಾಗ್‌’ ಸಿನಿಮಾವನ್ನೂ ವೀಕ್ಷಿಸಿದ್ದಾರೆ.

1990ರ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಕಾರ್ಯಾಚರಣೆಗಳು ಹೆಚ್ಚಾದ ಹಿನ್ನೆಲೆ ಸಿನಿಮಾ ಮಂದಿರಗಳನ್ನು ಮುಚ್ಚಲಾಗಿತ್ತು. 1999ರಲ್ಲಿ ಶ್ರೀನಗರದಲ್ಲಿದ್ದ ರೀಗಲ್‌ ಸಿನಿಮಾ ಮಂದಿರದ ಮೇಲೆ ಗ್ರೆನೇಡ್‌ ದಾಳಿಯಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next