ಪ್ರವಾಹ ಬಂದು ಹೋದ ಮೇಲೆ..!
ಕಾಣದಾಗಿವೆ ಗ್ರಾಮೀಣ ರಸ್ತೆ-ಜಮೀನಿನ ಸರಹದ್ದು,ಚಾಲಕರಿಗೆ ಯಮಸ್ವರೂಪಿಯಾದ ಹೆದ್ದಾರಿಗಳು
Team Udayavani, Nov 3, 2020, 5:40 PM IST
ಅಫಜಲಪುರ: ತಿಂಗಳ ಹಿಂದೆ ಸುರಿದ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ ತಾಲೂಕಿನ 48 ಹಳ್ಳಿಗಳ ರಸ್ತೆಗಳು, ಹೊಲಗಳು ಸಂಪೂರ್ಣ ಹದಗೆಟ್ಟು ಹೋಗಿದ್ದು, ದುರಸ್ತಿಗಾಗಿ ಹಾತೊರೆಯುತ್ತಿವೆ.
ಮಹಾರಾಷ್ಟ್ರದ ಉಜನಿ ಮತ್ತು ವೀರ ಜಲಾಶಯ(ಶೀನಾ ನದಿ)ದಿಂದ ಸೊನ್ನ ಬ್ಯಾರೇಜ್‌ಗೆ ಬಂದ ನೀರು, ಉಸ್ಮಾನಾಬಾದ ಹತ್ತಿರವಿರುವ ಕುರನೂರುಬ್ಯಾರೇಜ್‌ನಿಂದ ಅಮರ್ಜಾ ಹಾಗೂ ಬೋರಿ ನಾಲಾಕ್ಕೆ ಹರಿದು ಬರುವ ನೀರು ಹಾಗೂ ಭೀಮಾ ನದಿಯ ಹಿನ್ನೀರು (ಘತ್ತರಗಾ, ಮೋರಟಗಿ, ದೇವಲಗಾಣಗಾಪುರ, ಜೇರಟಗಿ, ಚಿನಮಳ್ಳಿಯಿಂದ ನೆಲೋಗಿ ಹೆಚ್ಚಾದ ನೀರು), ಬೋರಿ ಹಳ್ಳದಿಂದ ಹರಿದು ಬಂದ ನೀರು ತಾಲೂಕಿನ ರಾಷ್ಟ್ರೀಯ, ರಾಜ್ಯ ಹಾಗೂ ಗ್ರಾಮೀಣ ರಸ್ತೆಗಳನ್ನೆಲ್ಲ ಹಾಳುವೆಡವಿದೆ. ಅಳ್ಳಗಿ, ಬಂಕಲಗಾ, ಉಡಚಣ, ನಂದರಗಾ, ಹಿರೇಜೇವರ್ಗಿ, ಅಳ್ಳಗಿ (ಬಿ), ಮಣೂರ, ಶಿವಪುರ, ಹಿಂಚಗೇರಾ, ಬನ್ನಟ್ಟಿ, ಹವಳಗಾ, ಕೊಳ್ಳೂರ, ಘತ್ತರಗಿ, ದೇವಲಗಾಣಗಾಪುರ ಸಂಗಮ, ಬಂದರವಾಡ, ಸಂಗಾಪುರ, ಉಮ್ಮರಗಿ ಸೇರಿದಂತೆ ತಾಲೂಕಿನ 48 ಗ್ರಾಮಗಳು ಜಲಾವೃತವಾಗಿದ್ದವು. ಪ್ರವಾಹ ಬಂದ ಸಂದರ್ಭದಲ್ಲಿ ಅನೇಕ ಹಳ್ಳಿಗಳ ಜನರು ಗಂಜಿ ಕೇಂದ್ರಗಳನ್ನು ಸೇರಿಕೊಳ್ಳುವಂತಾಗಿತ್ತು. ಸದ್ಯ ಕೆಲ ಗ್ರಾಮಗಳ ನಿವಾಸಿಗಳು ತಮ್ಮ ಗ್ರಾಮಕ್ಕೆ ರಸ್ತೆಗಳೆಲ್ಲಿವೆ, ಹೊಲ-ಗದ್ದೆಗಳಿಗೆ ಹೋಗುವುದು ಹೇಗೆ ಎಂದು ಹುಡುಕುವಂತಾಗಿದೆ. ಅಲ್ಲದೇ ಆಸ್ತಿ ಕಳೆದುಕೊಂಡು ಗೋಳಾಡುವಂತಾಗಿದೆ.
ಇನ್ನೊಂದೆಡೆ ಪ್ರವಾಹದ ಅಬ್ಬರಕ್ಕೆ ತಾಲೂಕಿನ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾನಿಗೀಡಾಗಿವೆ. ತಾಲೂಕಿನ ಬಾದನಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಣ್ಣು ಕುಸಿದಿದೆ. ಮಣ್ಣು ಕುಸಿತದಿಂದ ಸಿಮೆಂಟ್ ಹೆದ್ದಾರಿ ಮೇಲೆ ಕೆಳಗಾಗಿದೆ. ಅನೇಕ ಕಡೆ ದೊಡ್ಡ ಪ್ರಮಾಣದ ಬಿರುಕುಗಳು ಕಾಣಿಸಿಕೊಂಡಿವೆ. ದ್ವಿಚಕ್ರ, ತ್ರಿಚಕ್ರ ವಾಹನ ಸವಾರರಿಗೆ ಈ ರಸ್ತೆ ಯಮಸ್ವರೂಪಿಯಾಗಿ ಕಾಣಿಸುತ್ತಿದೆ. ಉಳಿದಂತೆ ತಾಲೂಕಿನ ಮಾಶಾಳ, ದಿಕ್ಸಂಗಾ, ಸಂಗಾಪುರ, ಭೂಂಯಾರ, ಚವಡಾಪುರ, ಚಿನಮಳ್ಳಿ, ಹಾವಳಗಾ ಸೇರಿದಂತೆ ಅನೇಕ ಗ್ರಾಮಗಳ ರಸ್ತೆಗಳು ಹದಗೆಟ್ಟು ಹೋಗಿವೆ. ಪ್ರವಾಹ ತಗ್ಗಿದ ಮೇಲೆ ಗ್ರಾಮಗಳಿಗೆ ಹೋಗುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಂಬಂಧ ಪಟ್ಟ ಇಲಾಖೆಗಳು ದುರಸ್ತಿ ಕೆಲಸ ಮಾಡಬೇಕು ಎಂದು ಪ್ರವಾಹ ಸಂತ್ರಸ್ತರು, ವಾಹನ ಸವಾರರು, ಸಾರ್ವಜನಿಕರು ಮನವಿ ಮಾಡಿದ್ದಾರೆ.
ಪ್ರವಾಹದಿಂದ ಕಂಗೆಟ್ಟ ಜನರು ತಮ್ಮೂರಿಗೆ ತೆರಳಲು ರಸ್ತೆಗಳು ಉಳಿದಿಲ್ಲ ಎಂದು ಕಂಗಾಲಾಗಿದ್ದಾರೆ. ಸರ್ಕಾರ, ಜನಪ್ರತಿನಿಧಿಗಳು ಕೂಡಲೇ ರಸ್ತೆಗಳನ್ನು ನಿರ್ಮಿಸಿ, ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು. -ರಾಜೇಂದ್ರ ಪಾಟೀಲ, ರೇವೂರ ಬಿ., ಕಾಂಗ್ರೆಸ್ ಮುಖಂಡ
ಲೋಕೋಪೋಯೋಗಿ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ. -ನಾಗಮ್ಮ, ತಹಶೀಲ್ದಾರ್
-ಮಲ್ಲಿಕಾರ್ಜುನ ಹಿರೇಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶ್ರೀ ಸಿಮೆಂಟ್ ಕಾರ್ಖಾನೆ; ರೈತರ ಪರಿಹಾರದಲ್ಲಿ ತಾರತಮ್ಯ: ಹೋರಾಟದ ಎಚ್ಚರಿಕೆ ನೀಡಿದ ತೇಲ್ಕೂರ
Kalaburagi ರೈಲ್ವೇ ವಿಭಾಗೀಯ ಕಚೇರಿಗಾಗಿ ರೈಲು ತಡೆಗೆ ಯತ್ನ
Congress: ಸಿಎಂ, ಡಿಸಿಎಂ ನಡುವೆ ಅಧಿಕಾರ ಹಂಚಿಕೆಯ ಚರ್ಚೆಯೇ ಆಗಿಲ್ಲ: ಕೆ.ಜೆ.ಜಾರ್ಜ್
Kalaburagi: ಜ. 26ರಂದು ಸಿದ್ಧಲಿಂಗೇಶ್ವರ ಪ್ರಕಾಶನ 131 ಗ್ರಂಥಗಳು ಏಕಕಾಲಕ್ಕೆ ಬಿಡುಗಡೆ
Kalaburagi:ರೈಲ್ವೇ ವಿಭಾಗೀಯ ಕಚೇರಿಗಾಗಿ 371 ಜೆ ವಿಧಿ ಜಾರಿ ಮಾದರಿ ಹೋರಾಟ
MUST WATCH
ಹೊಸ ಸೇರ್ಪಡೆ
AB de Villiers; ಮತ್ತೆ ಕ್ರಿಕೆಟ್ ಗೆ ಮರಳಿದ ಎಬಿಡಿ; ನಾಯಕತ್ವಕ್ಕೆ ರೆಡಿ ಎಂದ ಮಿ.360
Maha Kumbh Mela: ಮೌನಿ ಅಮಾವಾಸ್ಯೆ ಶಾಹಿ ಸ್ನಾನಕ್ಕಾಗಿ ಜನಸಾಗರ…ಡ್ರೋನ್ ನಲ್ಲಿ ಸೆರೆ!
ಬೆಳ್ತಂಗಡಿ: ಸೋಮಂತ್ತಡ್ಕ ಬಳಿ ಬಸ್ ಅಪಘಾತ;ಸ್ವಲ್ಪದರಲ್ಲೇ ಪಾರಾದ ವಿದ್ಯಾರ್ಥಿಗಳು,ಪ್ರಯಾಣಿಕರು
Dharwad: ಅನುದಾನ ವಾಪಸ್ ಹೋದರೆ ಅಧಿಕಾರಿಗಳಿಂದ ವಸೂಲಿ: ಲಾಡ್ ಖಡಕ್ ಸೂಚನೆ
Chikkamagaluru: ಅಕ್ರಮ ಮಣ್ಣು ಸಾಗಾಟ ಪ್ರಕರಣ; 3 ಲಾರಿ, 1 ಹಿಟಾಚಿ ವಶ