Advertisement

ಕಂಠಪೂರ್ತಿ ಕುಡಿದು ನಿದ್ದೆ ಹೊಡೆದ 24 ಆನೆಗಳು!

07:18 PM Nov 10, 2022 | Team Udayavani |

ಭುವನೇಶ್ವರ: ಗುಂಡು ಪ್ರಿಯರು ಭರಪೂರ ಪಾನೀಯ ಸೇವನೆ ಮಾಡುವುದು ಹೊಸ ವಿಚಾರವಲ್ಲ. ಆದರೆ, ಕೆಲವೊಮ್ಮೆ ಪ್ರಾಣಿಗಳಿಗೂ ಗುಂಡಿನ ರುಚಿ ಹತ್ತುವುದುಂಟು. ಇಂಥದ್ದೊಂದು ಘಟನೆ ಒಡಿಶಾ ಅರಣ್ಯದಲ್ಲಿ ನಡೆದಿದೆ.

Advertisement

ಬರೋಬ್ಬರಿ 24 ಆನೆಗಳು ಕ್ಯೋಂಜಾರ್‌ ಜಿಲ್ಲೆಯ ಶಿಲಿಪಾದ ಗ್ರಾಮದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸ್ಥಳೀಯವಾಗಿ ತಯಾರಿಸಲಾಗುವ “ಮಹುವಾ’ ಎಂಬ ಮದ್ಯವನ್ನು ಸೇವಿಸಿವೆ. ಅದನ್ನು ಸೇವಿಸಿದ್ದೇ ತಡ, ಆನೆಗಳನ್ನು ನಿದ್ರಾದೇವಿ ಆವರಿಸಿಬಿಟ್ಟಿದ್ದಾಳೆ. ಅದರ ತಯಾರಿ ಪೂರ್ತಿಯಾಗಿರಲಿಲ್ಲ. ಆದರೂ, ಆನೆಗಳು ಅದನ್ನು ಸೇವಿಸಿದ್ದವು. ಅವುಗಳನ್ನು ಎಚ್ಚರಿಸಲು ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ, ಅವರು ಬಂದು ತಮಟೆ ಬಡಿದು ಆನೆಗಳನ್ನು ಎಬ್ಬಿಸಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next