Advertisement

ಫಿಲಿಪ್ಸ್‌ ಕಂಪನಿಯಿಂದ ಮತ್ತೆ 6000 ಉದ್ಯೋಗ ಕಡಿತ

09:44 PM Jan 30, 2023 | |

ದ ಹೇಗ್‌: ಆರ್ಥಿಕ ನಷ್ಟದಿಂದ ತತ್ತರಿಸಿರುವ ವೈದ್ಯಕೀಯ ಸಾಧನ ತಯಾರಿ ಕಂಪನಿ ಫಿಲಿಪ್ಸ್‌; ಮತ್ತೆ 6000 ಜನರನ್ನು ಉದ್ಯೋಗದಿಂದ ಕಿತ್ತೂಗೆಯುವುದಾಗಿ ಘೋಷಿಸಿದೆ.

Advertisement

ನಿದ್ರೆಯಲ್ಲಿ ಬಳಸುವ ಉಸಿರಾಟದ ಸಾಧನಗಳು ದೋಷಪೂರಿತವಾಗಿದ್ದರಿಂದ ಅವನ್ನು ಕಂಪನಿ ಹಿಂಪಡೆದಿತ್ತು. ಈ ನಷ್ಟಭರ್ತಿಗೆ ಉದ್ಯೋಗಕಡಿತ ಮಾಡಲು ನಿರ್ಧರಿಸಲಾಗಿದೆ.

ಕೇವಲ 3 ತಿಂಗಳ ಹಿಂದೆ ಇದೇ ಕಂಪನಿ 4000 ಮಂದಿಯನ್ನು ಕೆಲಸದಿಂದ ಕಿತ್ತೂಗೆದಿತ್ತು. 2025ರ ಹೊತ್ತಿಗೆ ಇನ್ನಷ್ಟು ಮಂದಿಯನ್ನು ಕೆಲಸದಿಂದ ತೆಗೆಯುವುದು ಕಂಪನಿ ಉದ್ದೇಶ.

ಈ ಬಗ್ಗೆ ಮಾತನಾಡಿರುವ ಕಂಪನಿಯ ಸಿಇಒ ರಾಯ್‌ ಜೇಕಬ್ಸ್ “2022 ನಮ್ಮ ಪಾಲಿಗೆ ಅತ್ಯಂತ ಕಠಿಣವರ್ಷ. ನಮ್ಮ ಪ್ರದರ್ಶನ ಗುಣಮಟ್ಟ ವೃದ್ಧಿಸಿಕೊಳ್ಳಲು ಕಠಿಣಕ್ರಮ ತೆಗೆದುಕೊಳ್ಳಲೇಬೇಕಾಗಿದೆ’ ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next