ರಾಮನಗರ: ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಬಂದು ಪಕ್ಷವನ್ನೇ ಕಳೆದುಕೊಳ್ಳುವ ಸ್ಥಿತಿಗೆ ಬಂದಿದ್ದಾರೆ. ನಾನು ಈ ಬಾರಿ ಸೋತಿದ್ದೇನೆ ಆದರೆ ಮುಂದಿನ ದಿನ ಒಳ್ಳೆಯ ಕಾಲ ಬರುತ್ತದೆ. ಎಲ್ಲಾ ನೋವನ್ನು ಮರೆಯೋಣ, ಇದೊಂದು ಕೆಟ್ಟಕನಸು.ನನ್ನಿಂದ ಯಾವುದೇ ತಪಾಗಿದ್ದರೂ ಅದನ್ನ ಕ್ಷಮಿಸಿ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಯೋಗೇಶ್ವರ್, ಬಿಜೆಪಿಯ ಕೆಲ ನಾಯಕರನ್ನ ನಾನು ಕೇಳಿದೆ. ನೀವು ಐದಾರು ಇಲಾಖೆ ಖಾಲಿ ಇಟ್ಟುಕೊಂಡು ಕೂತಿರಿ. ನಮಗೆ ಅದನ್ನ ನೀಡಿ ಶಕ್ತಿ ತುಂಬಿದ್ದರೆ ಅನುಕೂಲವಾಗುತ್ತಿತ್ತು. ಆದರೆ ಈಗ ಸಮಯ ಮೀರಿಹೋಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ಅವರು ಕೊಟ್ಟಿರೋ ಭರವಸೆಗಳನ್ನ ಈಡೇರಿಸಲಿ ಎಂದರು.
ಚನ್ನಪಟ್ಟಣದ ಗಬ್ಬೆದ್ದು ನಾರುತ್ತಿದೆ.ಅದನ್ನ ಇಲ್ಲಿ ಗೆದ್ದವರು ಸರಿ ಮಾಡಲ್ಲ.ನಾನೇ ಅದನ್ನ ಸರಿಮಾಡಬೇಕು.ನಾನೊಬ್ಬ ಸೀನಿಯರ್, ಎಲ್ಲಾ ಪಕ್ಷದ ಮಂತ್ರಿ ಸೇರಿ ಎಲ್ಲರೂ ಗೊತ್ತು. ಕ್ಷೇತ್ರಕ್ಕೆ ಅನುದಾನ ತರುವ ಪ್ರಯತ್ನವನ್ನ ನಿರಂತರವಾಗಿ ಮಾಡುತ್ತೇನೆ. ಪರೀಕ್ಷೆ ಬರೆದು ಫೇಲ್ ಆಗಿದ್ದೇನೆ.ಆದರೆ ಕೈಕಟ್ಟಿ ಕೂರುವುದಿಲ್ಲ. ಮತ್ತೆ ಓದಿ ಎಕ್ಸಾಂ ಬರೆದು ಪಾಸ್ ಆಗುತ್ತೇನೆ. ಸೋತಿದಕ್ಕೆ ದುಃಖ ಪಡಲ್ಲ ಎಂದರು.
ನಂಗೊಬ್ಬರು ಜೆಡಿಎಸ್ ನ ಮಾಜಿ ಎಂಎಲ್ಎ ಫೋನ್ ಮಾಡಿದ್ದ.”ಏನಣ್ಣ ಇಂಗಾಗೋಯ್ತು ಅಂದ.ನಾನು ನಿಂಗೂ ಇಂಗಾಯ್ತಲ್ಲಪ್ಪ ಅಂದೆ. ನಿಮ್ ಸಹವಾಸಕ್ಕೆ ಬಂದು ಕುಮಾರಸ್ವಾಮಿ 19ಕ್ಕೆ ಬಂದ್ಬಿಟ್ರು ಅಂದ” ಎಂದರು.
Related Articles
ಕುಮಾರ ಸ್ವಾಮಿಯವರು ಅತಂತ್ರ ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ದೇವೇಗೌಡರು ನನ್ನ ಮಗ ಕೊನೆಯದಾಗಿ ಸಿಎಂ ಆಗುತ್ತಾನೆ ಅಂತ ಆಸೆ ಇಟ್ಕೊಂಡಿದ್ದರು. ಅದಕ್ಕೆ ಅತಂತ್ರ ಆಗುತ್ತದೆ ಅಂತ ಸಿಂಗಾಪುರಕ್ಕೆ ಹೋಗಿ ಕೂತಿದ್ದರು. ಅದೇನೋ ಕಿಂಗ್ ಮೇಕರ್ ಅಂತೆ.ಈಗ ಯಾವ ಮೇಕರ್ ಆದರು ಎಂದರು.
ನಾವು ಪ್ರಮಾಣಿಕವಾಗಿ ದುಡಿದು ಮತಪಡೆದಿದ್ದೇವೆ.ಆದರೆ ಅವರು ಜಾತಿ ವಿಚಾರ ಮತ್ತೊಂದು ಸೇರಿ ಅನೇಕ ಕುತಂತ್ರ ನಡೆಸಿ ಗೆದ್ದಿದ್ದಾರೆ.ನನ್ನನ್ನು ಒಂದುಸಾರಿ ಸೋಲಿಸಿ ಮತ್ತೆ ಗೆಲ್ಲಿಸಿದ್ದಾರೆ.ಆದಾದ ಬಳಿಕ ಎರಡು ಸಾರಿ ಸೋಲಿಸಿರೋದು ಯಾಕೆ ಅಂತ ಗೊತ್ತಾಗುತ್ತಿಲ್ಲ. ನಾನು ಗೆದ್ದರೂ ಇಲ್ಲೇ ಇರುತ್ತೇನೆ, ಸೋತರೂ ಇಲ್ಲೇ ಇರುತ್ತೇನೆ, ಸಟ್ಟರೂ ಇಲ್ಲೇ. ಆದರೆ ಬೇರೆಯವರ ಕಥೆ ಹಾಗಲ್ಲ ಎಂದರು.
ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದಿದೆ. ಚೆನ್ನಾಗಿ ಆಡಳಿತ ನಡೆಸಲಿ ಅಂತ ಶುಭಹಾರೈಸುತ್ತೇನೆ.ನಾವು ವಿರೋಧ ಪಕ್ಷದಲ್ಲಿ ಕುಳಿತು ಕೆಲಸ ಮಾಡುತ್ತೇವೆ. ಈ ತಾಲೂಕಿನ ಬಹುಸಂಖ್ಯಾತ ಒಕ್ಕಲಿಗರು ಹೆಚ್ ಡಿಕೆ ಕೈಹಿಡಿದರು. ಆದರೆ ಜೆಡಿಎಸ್ ಅಧಿಕೃತ ವಿರೋಧ ಪಕ್ಷವೂ ಅಲ್ಲ.
ಜೆಡಿಎಸ್ ಕನಿಷ್ಠ ಸ್ಥಾನಕ್ಕೆ ಕುಸಿದಿದೆ.ನೀವ್ಯಾರು ಆತಂಕ ಪಡಬೇಕಿಲ್ಲ.ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಹೆಚ್ಚಾಗುತ್ತಿದೆ.ಇವತ್ತು ಜೆಡಿಎಸ್ ಸೋಲಲು ಬಿಜೆಪಿ ಕಾರಣ ಎಂದರು.
ಮಂಡ್ಯದಲ್ಲಿ ಬಿಜೆಪಿ ಬೆಳವಣಿಗೆ ಪ್ರಾರಂಭ ಆಯಿತು, ಆದರೆ ಅದರ ಲಾಭ ಕಾಂಗ್ರೆಸ್ ಗೆ ಆಯ್ತು.ನಮ್ಮ ಬೆಳವಣಿಗೆ ಕಾಂಗ್ರೆಸ್ ಗೆ ಲಾಭ ಆಯ್ತು.ನಾನು ಇನ್ನೂ ಮೂರು ವರ್ಷ ಎಂಎಲ್ ಸಿ ಆಗಿ ಇರುತ್ತೇನೆ. ಮುಂದೆ ಏನಾಗುತ್ತೋ ಕಾದುನೋಡೊಣ ಎಂದರು.