ಹೊಸದಿಲ್ಲಿ: ಸಿಎಎ-ಎನ್‌ಆರ್‌ಸಿ- ಎನ್‌ಪಿಆರ್ ವಿರುದ್ಧದ ತಮ್ಮ ವಿರೋಧವನ್ನು ಗಟ್ಟಿಗೊಳಿಸಿರುವ ಕೇರಳ ಸರಕಾರ, ರಾಜ್ಯದಲ್ಲಿ ಎನ್‌ಪಿಆರ್ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಹಕಾರ ನೀಡುವುದಿಲ್ಲ ಎಂದು ಕೇಂದ್ರ ಸರಕಾರಕ್ಕೆ ತಿಳಿಸಲು ನಿರ್ಧರಿಸಿದೆ.
ಈ ಪ್ರಕ್ರಿಯೆ ಜನಸಾಮಾನ್ಯರ ಆತಂಕ ದೂರ ಮಾಡುವುದು ಸಾಂವಿಧಾನಿಕ ಕರ್ತವ್ಯವಾಗಿದೆ. ಹೀಗಾಗಿ ನಾವು ಎನ್‌ಪಿಆರ್ ಪ್ರಕ್ರಿ ಯೆಗೆ ಸಹಕರಿಸುವುದಿಲ್ಲ ಎಂದು ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್‌ಗೆ ಹೇಳಲು ಇಚ್ಛಿಸುತ್ತೇವೆ ಎಂದಿದೆ.
ಮುಸ್ಲಿಮರಿಗೂ ಪೌರತ್ವ ಸಿಗಲಿ: ಪೌರತ್ವ ಕಾಯ್ದೆಯನ್ವಯ ಮುಸ್ಲಿಮರಿಗೂ ನಾಗರಿಕತ್ವ ನೀಡಬೇಕು ಎಂದು ನೇತಾಜಿ ಸುಭಾಶ್‌ಚಂದ್ರ ಬೋಸ್ ಅವರ ಸಂಬಂಧಿ, ಪಶ್ಚಿಮ ಬಂಗಾಲ ಬಿಜೆಪಿ ಉಪಾಧ್ಯಕ್ಷ ಚಂದ್ರ ಬೋಸ್ ಆಗ್ರಹಿಸಿದ್ದಾರೆ.
ಎಸ್‌ಐಟಿ ತನಿಖೆ: ಪೌರತ್ವ ವಿರೋಧಿ ಪ್ರತಿಭಟನೆ ವೇಳೆ ಬಂಧಿತರಾಗಿದ್ದ ಉ.ಪ್ರದೇಶದ ಮದರಸಾ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಸುಳ್ಳು ಆರೋಪಕ್ಕೆ ಸಂಬಂಧಿಸಿ ಉಪ್ರ ಎಸ್.ಐ.ಟಿ. ವಿಚಾರಣೆ ಆರಂಭಿಸಿದೆ.
ಸಿಎಎ ವಿರೋಧಿಸುವವರು ಕಾನೂನನ್ನೇ ಓದಿಲ್ಲ. ಹೀಗಾಗಿ, ಸಂತರು ವಿವಿಧ ಗ್ರಾಮಗಳಿಗೆ ತೆರಳಿ ಪೌರತ್ವ ಕಾಯ್ದೆ ಕುರಿತು ಸೃಷ್ಟಿಸಲಾಗಿರುವ ಗೊಂದಲ ನಿವಾರಿಸಲಿದ್ದಾರೆ ಎಂದು ವಿಎಚ್‌ಪಿ ಮುಖ್ಯಸ್ಥ ವಿಷ್ಣು ಸದಾಶಿವ ಕೋಕ್ಜೆ ತಿಳಿಸಿದ್ದಾರೆ.