ನವದೆಹಲಿ: ಕೋವಿಡ್ 19ರ ನೂತನ ರೂಪಾಂತರ ತಳಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ನಗರಪ್ರದೇಶದಲ್ಲಿ ಹೆಚ್ಚಳವಾದ ಬಳಿಕ ಇದೀಗ ಸಣ್ಣ ನಗರ ಮತ್ತು ಗ್ರಾಮ ಪ್ರದೇಶಗಳಲ್ಲಿ ಮುಂಬರುವ ಕೆಲವು ವಾರಗಳಲ್ಲಿ ಕ್ರಿಪ್ರವಾಗಿ ಏರಿಕೆಯಾಗಲಿದೆ ಎಂದು ಕೇರಳದ ಐಎಂಎ ಕೋವಿಡ್ 19 ಟಾಸ್ಕ್ ಪೋರ್ಸ್ ನ ಡಾ.ರಾಜೀವ್ ಜಯದೇವನ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಜೇಮ್ಸ್ ಶೂಟಿಂಗ್ ಕಂಪ್ಲೀಟ್ : ವಿಶೇಷ ಪಾತ್ರದಲ್ಲಿ ಶಿವಣ್ಣ-ರಾಘಣ್ಣ
ಕೋವಿಡ್ ಹಾಗೂ ರೂಪಾಂತರ ತಳಿಗಳು ಪ್ರತಿ ಬಾರಿಯೂ ಮೊದಲು ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಪ್ರದೇಶದಲ್ಲಿ ಕಾಣಿಸಿಕೊಂಡ ನಂತರ ಸಣ್ಣ ಪಟ್ಟಣ ಮತ್ತು ಹಳ್ಳಿಗಳಲ್ಲಿ ಸೋಂಕು ಹರಡುತ್ತದೆ. ಹೀಗೆ ಮುಂದಿನ ಕೆಲವು ವಾರಗಳಲ್ಲಿ ಒಮಿಕ್ರಾನ್ ಕೂಡಾ ಗ್ರಾಮ, ಪಟ್ಟಣಗಳಲ್ಲಿ ಪ್ರಕರಣ ಹೆಚ್ಚಳವಾಗಲಿದೆ ಎಂದು ಡಾ.ಜಯದೇವನ್ ತಿಳಿಸಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಒಮಿಕ್ರಾನ್ ತಳಿ ಕೋವಿಡ್ 19 ಸೋಂಕಿನಷ್ಟು ಹೆಚ್ಚು ಪರಿಣಾಮಕಾರಿಯಲ್ಲ, ಇದು ಸಾಮಾನ್ಯ ಶೀತ, ಜ್ವರಕ್ಕೆ ಸೀಮಿತವಾಗಿರಲಿದೆ ಎಂದು ಡಾ.ಜಯದೇವನ್ ಮಾಹಿತಿ ನೀಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿನ ಕೋವಿಡ್ 19ರ ಹಿಸ್ಟರಿ ಪ್ರಕಾರ ಸೋಂಕಿನಿಂದ ಸಾವನ್ನಪ್ಪಿರುವವರ ಪ್ರಮಾಣ ಕಡಿಮೆ ಇದೆ. ಯಾವುದೇ ಸೋಂಕು ಹೆಚ್ಚು ದೀರ್ಘಕಾಲ ಜನರನ್ನು ಬಾಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಚೀನಾದ ವುಹಾನ್ ನಲ್ಲಿ ಪತ್ತೆಯಾದ ಕೋವಿಡ್ ನ ಮೊದಲ ಅಲೆಯಲ್ಲಿ ಆರು ತಿಂಗಳ ಬಳಿಕ ಎರಡನೇ ಅಲೆಯಲ್ಲಿನ ಬೇಟಾ, ಮೂರನೇ ಅಲೆಯ ಡೆಲ್ಟಾ ಹಾಗೂ ಇದೀಗ ನಾಲ್ಕನೇ ಒಮಿಕ್ರಾನ್ ಹೆಚ್ಚು ಪರಿಣಾಮಕಾರಿಯಾಗಿಲ್ಲ ಎಂಬುದು ವೈದ್ಯಕೀಯ ಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ ಎಂದು ಡಾ.ಜಯದೇವನ್ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.