Advertisement

ಡೆಬ್ರಿಗಢ್‌ ವನ್ಯಜೀವಿ ಅಭಯಾರಣ್ಯದಲ್ಲಿ ಕಾಣಿಸಿಕೊಂಡ ರಾಯಲ್ ಬೆಂಗಾಲ್ ಟೈಗರ್

09:14 PM Dec 03, 2022 | Team Udayavani |

ಸಂಬಲ್‌ಪುರ: ನಾಲ್ಕು ವರ್ಷಗಳ ನಂತರ ಬಾರ್‌ಗಢ್‌ನ ಡೆಬ್ರಿಗಢ್‌ ವನ್ಯಜೀವಿ ಅಭಯಾರಣ್ಯದ ಪ್ರವೇಶ ದ್ವಾರದಲ್ಲಿ ರಾಯಲ್ ಬೆಂಗಾಲ್ ಟೈಗರ್ ಕಾಣಿಸಿಕೊಂಡಿದೆ ಎಂದು ಹಿರಿಯ ವನ್ಯಜೀವಿ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

Advertisement

ಡಿಸೆಂಬರ್ 1 ರಂದು ಸಂಜೆ 5 ಗಂಟೆಗೆ ಅರಣ್ಯ ಅಧಿಕಾರಿಗಳು, ಸಫಾರಿ ವಾಹನಗಳು ಮತ್ತು ಪ್ರವಾಸಿಗರು ಬಿಳಿ ಹುಲಿ ಅಭಯಾರಣ್ಯವನ್ನು ಪ್ರವೇಶಿಸುವುದನ್ನು ನೋಡಿದ್ದಾರೆ ಎಂದು ಹಿರಾಕುಡ್ ವನ್ಯಜೀವಿ ವಿಭಾಗದ (ದೇಬಿಗಢ ಅಭಯಾರಣ್ಯ) ವಿಭಾಗೀಯ ಅರಣ್ಯಾಧಿಕಾರಿ ಅಂಶು ಪ್ರಜ್ಞಾನ್ ದಾಸ್ ತಿಳಿಸಿದ್ದಾರೆ.

ಪ್ರವಾಸಿಗರು ಮತ್ತು ಅರಣ್ಯ ಸಿಬಂದಿ ಇದ್ದರೂ ಯಾವುದೇ ಅಡಚಣೆ ಇಲ್ಲದೆ ನಿರ್ಭೀತಿಯಿಂದ ಅರಣ್ಯ ರಸ್ತೆಯಲ್ಲಿ ಭವ್ಯವಾಗಿ ನಡೆದುಕೊಂಡು ಹೋಗುವುದನ್ನು ಕೆಲಕಾಲ ವೀಕ್ಷಿಸಲಾಗಿದೆ. ನೋಡುಗರು ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಹುಲಿಯ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ ಎಂದು ಅರಣ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 2018 ರ ನಂತರ ಡೆಬ್ರಿಗಢ್‌ನಲ್ಲಿ ಯಾವುದೇ ಹುಲಿ ದಾಖಲಾಗಿಲ್ಲ. ಈ ನಿರ್ದಿಷ್ಟ ಗಂಡು ಹುಲಿ ಡೆಬ್ರಿಗಢ್‌ನಲ್ಲಿ ಉಳಿಯಬಹುದು ಅಥವಾ ಹತ್ತಿರದಲ್ಲಿ ತನ್ನದೇ ಆದ ಪ್ರದೇಶವನ್ನು ಹುಡುಕಬಹುದು. ಹುಲಿಯನ್ನು ನೋಡಿದ ನಂತರ ಅಭಯಾರಣ್ಯದ ಪರಿಧಿಯಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಒಂದು ಸುತ್ತಿನ ಗಸ್ತು ತಿರುಗಲು ಪ್ರಾರಂಭಿಸಲಾಗಿದೆ ಎಂದು ಡಿಎಫ್‌ಒ ಹೇಳಿದ್ದಾರೆ. ಗುಪ್ತಚರ ಜಾಲ ಬಲಪಡಿಸಲಾಗಿದೆ ಮತ್ತು ಡೆಬ್ರಿಗಢ್‌ಗೆ ಯಾವುದೇ ರೀತಿ ಅಕ್ರಮ ಪ್ರವೇಶ ಮಾಡಿದವರನ್ನು ತಕ್ಷಣವೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

“ನಮ್ಮ ವ್ಯಾಪ್ತಿಯಲ್ಲಿರುವ ಹುಲಿಯನ್ನು ರಕ್ಷಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು ಈಗ ದೊಡ್ಡ ಕಾರ್ಯವಾಗಿದೆ. ಎರಡು ಹುಲಿ ನಿಗಾ ಘಟಕಗಳನ್ನು ಸ್ಥಾಪಿಸಲಾಗಿದೆ . ಒಂದು ಅಭಯಾರಣ್ಯದ ಒಳಗೆ ಮತ್ತು ಇನ್ನೊಂದು ಹಿರಾಕುಡ್‌ನ ಸಂಬಲ್‌ಪುರ ವಿಭಾಗ ಕಚೇರಿಯಲ್ಲಿ ಸ್ಥಾಪಿಸಲಾಗಿದೆ ಎಂದು ಅರಣ್ಯಾಧಿಕಾರಿ ಹೇಳಿದರು.

Advertisement

ಹನ್ನೆರಡು ಗಸ್ತು ಪಡೆಗಳು ಅಭಯಾರಣ್ಯದ ಒಳಗೆ 24/7 ಗಸ್ತು ತಿರುಗುತ್ತಿವೆ ಮತ್ತು ದುರ್ಬಲ ವಲಯಗಳನ್ನು ಸ್ಕ್ಯಾನ್ ಮಾಡಲು ಲೋಹದ ಶೋಧಕಗಳನ್ನು ಬಳಸಲಾಗುತ್ತಿದೆ. ದೇಬ್ರಿಗಢ್ ಅಭಯಾರಣ್ಯದೊಳಗೆ ಕಂಡುಬರುವ ಯಾವುದೇ ನಾಗರಿಕರನ್ನು ಬಂಧಿಸಲಾಗುತ್ತದೆ ಏಕೆಂದರೆ ಅದರೊಳಗೆ ಪ್ರವೇಶಿಸುವುದು ಜಾಮೀನು ರಹಿತ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next