Advertisement

ಗೂಗಲ್‌ ಸಂಸ್ಥೆಗೆ ಕೆಲಸಕ್ಕಾಗಿ ಅರ್ಜಿ: 39 ಬಾರಿ ರಿಜೆಕ್ಟ್, 40ನೇ ಬಾರಿಗೆ ಸೆಲೆಕ್ಟ್!

09:45 PM Jul 27, 2022 | Team Udayavani |

ವಾಷಿಂಗ್ಟನ್‌: “ಮರಳಿ ಯತ್ನವ ಮಾಡು’ ಎನ್ನುವ ಮಾತನ್ನು ನಂಬಿ ಪ್ರಯತ್ನಿಸಿ, ಈಗ ಟೆಕ್‌ ದೈತ್ಯ ಗೂಗಲ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡವನ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

ಡೋರ್‌ಡ್ಯಾಶ್‌ ಸಂಸ್ಥೆಯಲ್ಲಿ ಅಸೋಸಿಯೇಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದ ಸ್ಯಾನ್‌ ಫ್ರಾನ್ಸಿಸ್ಕೋದ ಟೈಲರ್‌ ಕೊಹೆನ್‌ಗೆ ಜು.19ರಂದು ಕೆಲಸಕ್ಕೆ ಸೇರಿಕೊಳ್ಳುವುದಕ್ಕೆ ಕೋರಿ ಗೂಗಲ್‌ ನಿಂದ ಮೇಲ್‌ ಬಂದಿದೆ.

ಟೈಲರ್‌ ಅವರು 2019ರಿಂದ ಇಲ್ಲಿಯವರೆಗೆ ಸುಮಾರು 40 ಬಾರಿ ಗೂಗಲ್‌ ಸಂಸ್ಥೆಗೆ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಕಡೆಯ ಬಾರಿಗೆ ಅವರಿಗೆ ಯಶಸ್ಸು ಸಿಕ್ಕಿದೆ.

2019ರಿಂದ ಈವರೆಗಿನ ಗೂಗಲ್‌ ಸಂಸ್ಥೆಯ ಮೇಲ್‌ಗ‌ಳ ಸ್ಕ್ರೀನ್‌ಶಾಟ್‌ನ್ನು ಟೈಲರ್‌ “ಲಿಂಕ್ಡ್ ಇನ್‌’ನಲ್ಲಿ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next