Advertisement

ಕೋವಿಡ್ 19: ಜಗಕೆ ಮತ್ತೆ ತೆರೆದುಕೊಂಡ ವುಹಾನ್‌

10:12 AM Apr 01, 2020 | sudhir |

ವುಹಾನ್‌: ವುಹಾನ್‌..ಕೋವಿಡ್ 19 ತವರೂರು ಎಂದೇ ಬಿಂಬಿತವಾಗಿದೆ. ಅಲ್ಲೀಗ ಜನಜೀವನ ಯಥಾಸ್ಥಿತಿಗೆ ಬರುತ್ತಿದೆ. ಜನರು ಅಂಗಡಿಗಳಿಗೆ ತೆರಳುತ್ತಿದ್ದಾರೆ.

Advertisement

ಈ ಕುರಿತಂತೆ ವುಹಾನ್‌ ನ 24 ವರ್ಷದ ಯ ಫ್ರಾಕ್ಲೀನ್‌ ಎಂಬವರು ಕ್ಯಾರೆಂಟೈನ್‌ ನಿಂದ ಹೊರಬಂದಿದ್ದಾರೆ. ಬಳಿಕ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಈಗ ನಾನು ಚೆನ್ನಾಗಿ ಜೀವಿಸುತ್ತಿದ್ದೇನೆ. ಮನೆಯಲ್ಲಿ ಇದ್ದ ಅಷ್ಟೂ ದಿನಗಳಲ್ಲಿ ನಿದ್ರಾಹೀನತೆಯೇ ಕಾಡುತ್ತಿತ್ತು ಎಂದಿದ್ದಾರೆ.

ತಾನು ಬಳಸುತ್ತಿದ್ದ ಪಾರ್ಕ್‌ ಗೆ ತೆರಳಿದ ಅವರು ಚಳಿಗಾಲವನ್ನು ಅನುಭವಿಸ ತೊಡಗಿದ್ದಾರೆ. ಪಾರ್ಕ್‌ ನಲ್ಲಿನ ಹೂವುಗಳನ್ನು ನೋಡಲು ಬಯಸಿದ್ದೆ. ಬೈಕು ಓಡಿಸಲು ಬಯಸಿದ್ದೇನೆ, ನನ್ನ ಸ್ನೇಹಿತರನ್ನು ಭೇಟಿಯಾಗುವುದಿದೆ.

ಸ್ನೇಹಿತನೊಬ್ಬ ನನ್ನ ಪಕ್ಕದಲ್ಲಿ ಕುಳಿತು ಮಾತನಾಡಿದರೆ ಆಗುವ ಸಂತೋಷ ಹೇಳಲಿಕ್ಕಾಗದು’ ಎಂದು ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾನೆ.

ಯಾಕೆಂದರೆ ಇಷ್ಟು ದಿನ ಸಾಕಷ್ಟು ಒಂಟಿತನ ಅನುಭವಿಸಿದ್ದೇನೆ. ಅದು ನನಗೆ ನಿದ್ದೆ ಮಾಡಲೇ ಕೊಟ್ಟಿಲ್ಲ. ಇಂಥ ಒಂಟಿತನದಿಂದ ಹೊರಬರಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Advertisement

ಚೀನ ನಿಧಾನವಾಗಿ ದೇಶಾದ್ಯಂತ ಕಟ್ಟುನಿಟ್ಟಿನ ಸಂಪರ್ಕ ತಡೆಯನ್ನು ತೆರವುಗೊಳಿಸುತ್ತಿದೆ. ಬೀಜಿಂಗ್‌ ನಲ್ಲೂ ಉದ್ಯಾನಗಳು ಮತ್ತು ಪ್ರವಾಸಿ ತಾಣಗಳು ನಿಧಾನವಾಗಿ ಮತ್ತೆ ವ್ಯವಹಾರ ಆರಂಭಿಸುತ್ತಿದೆ. ಆದರೆ ಉದ್ಯಮಗಳಿಗೆ ಇನ್ನೂ ವೇಗ ಸಿಗಬೇಕಿದೆ.

ಬಹುತೇಕ ನಗರಗಳಲ್ಲಿ ಮತ್ತೆ ವಾಹನಗಳ ಸದ್ದು ಕೇಳಿಬರುತ್ತಿದೆ. ರೆಸ್ಟೋರೆಂಟ್‌ ಗಳು, ಶಾಪಿಂಗ್‌ ಮಾಲ್‌ ಗಳು ತೆರೆಯುತ್ತಿವೆ. ಬಹುತೇಕ ಮಾಲ್‌ ಗಳ ಪಾರ್ಕಿಂಗ್‌ ಏರಿಯಾಗಳು ವಾಹನಗಳಿಂದ ತುಂಬುತ್ತಿವೆ. ವಾಚ್‌ಮನ್‌ ಗಳು ತಮ್ಮ ಕೆಲಸಗಳಿಗೆ ಹಿಂದಿರುಗುತ್ತಿದ್ದಾರೆ. ಮುಂಬರುವ ವಾರದಿಂದ ಶಾಲಾ ಕಾಲೇಜುಗಳು ಮತ್ತೆ ತೆರೆಯಲಿದ್ದು, ಈ ಕುರಿತಂತೆ ಶಿಕ್ಷಣ ಸಂಸ್ಥೆಗಳು ಸಭೆ ಸೇರಿ ಚರ್ಚಿಸಲು ನಿರ್ಧರಿಸಿವೆ. ಹಾಗೆಂದು ಎಲ್ಲರೂ ರಸ್ತೆಗೆ ಬರುತ್ತಿಲ್ಲ, ಕೆಲವರು ಇನ್ನೂ ಭಯದಲ್ಲೇ ಇದ್ದಾರೆ. ಪ್ರತಿದಿನ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ, ಬಸ್‌ ಗಳಿಗೆ ಸ್ಯಾನಿಟೈಸರ್‌ಗಳನ್ನು ಸಿಂಪಡಿಸಲಾಗುತ್ತಿದೆ.

ಸುರಕ್ಷೆ ಗೆ ಮೊದಲ ಪ್ರಾಶಸ್ತ್ಯ
ಪ್ರತಿ ಬಸ್‌ ಗಳಲ್ಲಿ ಡ್ರೈವರ್‌ನೊಂದಿಗೆ ಒಬ್ಬ ಮೇಲ್ವಿàಚಾರಕ ಇರಲಿದ್ದಾನೆ. ಬಸ್‌ ನಿಲ್ದಾಣಗಳಲ್ಲಿ ಎಲ್ಲರನ್ನೂ ತಪಾಸಣೆಗೆ ಒಳಪಡಿಸಿಯೇ ಒಳಗೆ ಪ್ರವೇಶಿಸಬೇಕು. ಸೂಪರ್‌ವೈಸರ್‌ಅವರು ಪ್ರಯಾಣಿಕರ ಹೆಸರನ್ನು ನೋಂದಾಯಿಸಿಕೊಳ್ಳುತ್ತಿದ್ದು, ಸ್ಕ್ಯಾನ್‌ ಮಾಡುತ್ತಾರೆ. ಟೆಂಪರೇಚರ್‌ ಟೆಸ್ಟ್‌ ನಲ್ಲಿ ಪಾಸ್‌ ಆದವರಿಗೆ ಮಾತ್ರ ಪ್ರಯಾಣ ಮಾಡಲು ಅವಕಾಶ. ಇಂಥ ಸಂದರ್ಭಗಳಲ್ಲಿ ಯಾರಲ್ಲಾದರೂ ರೋಗ ಲಕ್ಷಣ ಕಂಡುಬಂದರೆ ತುರ್ತು ಸೇವೆಯ ವಾಹನಗಳ ಮೂಲಕ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಪ್ರತಿ ಆಂಬುಲೆನ್ಸ್‌ ಗಳಲ್ಲಿ ವೈದ್ಯರು ಹಾಗೂ ವೆಂಟಿಲೇಟರ್‌ಗಳಿರಲವೆ. ಪ್ರತಿ ಬಸ್‌ ನಿಲ್ದಾಣಗಳಲ್ಲಿ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ರಸ್ತೆ ಬಳಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ. ಪ್ರಯಾಣಿಕರು ಬಸ್‌ ಹತ್ತುವ ಸಂದರ್ಭದಲ್ಲೂ ಮಾಸ್ಕ್ ಬಳಸುವುದು ಕಡ್ಡಾಯ.

ನಗರಾದ್ಯಂತ ಕೋವಿಡ್ ವೈರಸ್‌ ವ್ಯಾಪಕವಾಗಿ ಹಬ್ಬಿದ ಪರಿಣಾಮ ಜನವರಿ ತೃತೀಯ ವಾರದ ಬಳಿಕ ವುಹಾನ್‌ ನಗರವನ್ನು ಸಂಪೂರ್ಣ ಲಾಕ್‌ ಡೌನ್‌ ಮಾಡಲಾಗಿತ್ತು. ಜನಜೀವನ ಸ್ತಬ್ಧವಾಗಿತ್ತು. ಈ ಮೂಲಕ ಕೊರೊನಾ ಹರಡದಂತೆ ತಡೆಗಟ್ಟಲು ಪ್ರಯತ್ನಿಸಲಾಗಿತ್ತು.

ಬಸ್‌ ಪ್ರಯಾಣ
ಕೋವಿಡ್ ವೈರಸ್‌ ಹೆಚ್ಚಾಗಿ ಹಿರಿಯ ನಾಗರಿಕರನ್ನು ಕಾಡುವ ಕಾರಣ ಅಂತಹವರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಕಾರಣಕ್ಕಾಗಿ 65 ವರ್ಷ ಮೇಲ್ಪಟ್ಟವರು ಯಾವುದೇ ಕಾರಣಕ್ಕೆ ರಸ್ತೆಗಿಳಿಯದಂತೆ ತಾಕೀತು ಮಾಡಲಾಗಿದೆ. ಯಾರಾದರೂ ಪೊಲೀಸರ ಕಣ್ತಪ್ಪಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ ಬಂಧಿಸಲಾಗುತ್ತದೆ. ಇನ್ನು ಸಾರ್ವಜನಿಕ ಬಸ್‌ ಗಳಲ್ಲೂ ಅವರು ಪ್ರಯಾಣಿಸುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next