ಕಾಸರಗೋಡು: ಎಣ್ಮಕಜೆ ಪಂ.ನ ಕಾಟುಕುಕ್ಕೆಯ ಬಾಳೆಮೂಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿರುವ ಫಾರ್ಮ್ ನ ಹಂದಿಗಳನ್ನು ಕೊಲ್ಲಲಾಗುತ್ತದೆ.
Advertisement
ರೋಗ ಹರಡುವುದನ್ನು ತಡೆಯಲು ಫಾರ್ಮ್ ನ ಹಂದಿಗಳನ್ನು ನಾಶಪಡಿಸಿ ವೈಜ್ಞಾನಿಕವಾಗಿ ಸಂಸ್ಕರಿಸಲಾಗುವುದು.
ಜಿಲ್ಲಾ ಮೃಗ ಸಂರಕ್ಷಣ ಇಲಾಖೆಯ ನೌಕರರು, ಪಶು ವೈದ್ಯರನ್ನೊಳಗೊಂಡ ಕ್ಷಿಪ್ರ ಕಾರ್ಯಾಚರಣೆ ತಂಡ ಹಂದಿಗಳನ್ನು ಕೊಂದು ಸಂಸ್ಕರಿಸಲಿದೆ.