ಕಾಸರಗೋಡು: ಮಂಜೇಶ್ವರ ತಾಲೂಕಿನ ಎಣ್ಮಕಜೆ ಗ್ರಾಮ ಪಂಚಾಯತ್‌ನ ಕಾಟುಕುಕ್ಕೆಯಲ್ಲಿ ಹಂದಿಗಳಿಗೆ ಬಾಧಿಸುವ ವೈರಸ್ ರೋಗವಾದ ಆಫ್ರಿಕನ್ ಜ್ವರ ಪತ್ತೆಯಾಗಿದೆ ಎಂದು ಜಿಲ್ಲಾ ಪಶು ಸಂರಕ್ಷಣೆ ಅಧಿಕಾರಿ ತಿಳಿಸಿದ್ದಾರೆ. ಕಾಟುಕುಕ್ಕೆಯ ಹಂದಿ ಫಾರ್ಮ್ ನಲ್ಲಿ ರೋಗವನ್ನು ಪತ್ತೆಹಚ್ಚಲಾಗಿದೆ. ರೋಗ ಹರಡುವುದನ್ನು ತಡೆಯಲು ತುರ್ತು ಕ್ರಮ ತೆಗೆದುಕೊಳ್ಳುವುದಾಗಿ ಪ್ರಭಾರ ಜಿಲ್ಲಾಧಿಕಾರಿ ಎಡಿಎಂ ಎ.ಕೆ. ರಮೇಂದ್ರನ್ ತಿಳಿಸಿದ್ದಾರೆ.
ಸಾಕು ಹಂದಿಗಳಲ್ಲೋ, ಕಾಡು ಹಂದಿಗಳಲ್ಲೋ ಕಾಣಿಸಿಕೊಂಡು ತೀವ್ರವಾಗಿ ಹರಡುವ ಸಾಧ್ಯತೆಯಿರುವ ವೈರಸ್ ರೋಗವಾಗಿದೆ ಆಫ್ರಿಕನ್ ಹಂದಿ ಜ್ವರ. ಸಂಪರ್ಕದಿಂದ ಅಥವಾ ಅಲ್ಲದೆಯೋ ರೋಗ ಹರಡಬಹುದು. ಮಾನವನಿಗೆ ಅಥವಾ ಸಾಕು ಪ್ರಾಣಿಗಳಿಗೆ ಹರಡುವುದಿಲ್ಲ. ನ್ಯಾಶನಲ್ ಆ್ಯಕ್ಷನ್ ಪ್ಲಾನ್ ಪ್ರಕಾರ ರೋಗ ಕಾಣಿಸಿಕೊಂಡಿರುವ ಪ್ರದೇಶದಿಂದ 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಂದಿಗಳನ್ನು ನಾಶಗೊಳಿಸಬೇಕು. ಅಲ್ಲದೆ ಹಂದಿ ಮಾಂಸ ಮಾರಾಟ ಮಾಡುವಂತಿಲ್ಲ. ನಾಶಗೊಳಿಸಿದ ಹಂದಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಬೇಕು.
ದೇಶದಲ್ಲಿ 2020ರ ಜನವರಿಯಲ್ಲಿ ಅಸ್ಸಾಂ, ಅರುಣಾಚಲ ಪ್ರದೇಶದಲ್ಲಿ ಈ ರೋಗ ಪತ್ತೆಯಾಗಿತ್ತು.