ಕಾಸರಗೋಡು : ಮಂಜೇಶ್ವರ ತಾಲೂಕು ಎಣ್ಮಕಜೆ ಗ್ರಾ.ಪಂ.ನ ಕಾಟುಕುಕ್ಕೆ ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾದ ಫಾರ್ಮ್ನ 491 ಹಂದಿಗಳನ್ನು ಹತ್ಯೆಗಯ್ಯಲಾಯಿತು.
Advertisement
ರೋಗ ಹರಡುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲಾ ಪ್ರಾಣಿ ಸಂರಕ್ಷಣೆ ಇಲಾಖೆಯ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ಸೇನೆ ಈ ಪ್ರಕ್ರಿಯೆಗೆ ನೇತೃತ್ವ ನೀಡಿತು. ವಿಶೇಷ ತರಬೇತಿ ಪಡೆದ ಇಲಾಖೆಯ ಟಾಸ್ಕ್ ಫೋರ್ಸ್ ನೇತೃತ್ವದಲ್ಲಿ 491 ಹಂದಿಗಳನ್ನು ಹತ್ಯೆಗೈದು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲಾಯಿತು. ಹಂದಿಗಳ ಗೂಡು ಹಾಗು ಪರಿಸರ ಪ್ರದೇಶವನ್ನು ಅಗ್ನಿಶಾಮಕ ದಳ ರೋಗಾಣುಮುಕ್ತಗೊಳಿಸಿತು.