Advertisement
4.4 ಕೋಟಿ ಜನರಿಗೆ ಸೋಂಕುಸೋಂಕಿನ ವಿರುದ್ಧ ಕಟ್ಟುನಿಟ್ಟಿನ ಮತ್ತು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳದೆ ಹೋದರೆ ಮತ್ತು ಆರೋಗ್ಯ ಸೌಲಭ್ಯಗಳನ್ನು ಸುಧಾರಿಸದಿದ್ದರೆ ಮುಂದಿನ ಒಂದು ವರ್ಷದಲ್ಲೇ ಸುಮಾರು 4.4 ಕೋಟಿಯಷ್ಟು ಜನರು ಈ ಖಂಡವೊಂದರಲ್ಲೇ ಸೋಂಕಿಗೆ ತುತ್ತಾಗಲಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.
ನೈಜೀರಿಯ, ಟಾಂಜೇನಿಯ ಮತ್ತು ಘಾನಾ ಸೇರಿದಂತೆ ಪ್ರಮುಖ ದೇಶಗಳಲ್ಲಿ ಏಕಾಏಕಿ ಸೋಂಕು ಹೆಚ್ಚಾಗುತ್ತಿದೆ. ಟಾಂಜಾನಿಯದಲ್ಲಿ ಸುಮಾರು 480 ಸೋಂಕು ಪ್ರಕರಣಗಳನ್ನು ದಾಖಲಾಗಿದ್ದು, 18 ಮಂದಿ ಮೃತಪಟ್ಟಿದ್ದಾರೆ. ಹಾಗೇ ಮತ್ತೂಂದೆಡೆ ಘಾನಾದಲ್ಲಿ ಐದು ದಿನಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸೋಂಕು ದಾಖಲಾಗಿದ್ದು,ಶೇ. 42.5ರಷ್ಟು ಹೆಚ್ಚಳವಾಗಿದೆ ಎಂದು ವರದಿಯೊಂದು ಹೇಳಿದೆ.
Related Articles
ಪರೀಕ್ಷಾ ಕಿಟ್‌ಗಳ ಅಭಾವವಿರುವುದರಿಂದ ಸೋಂಕು ಪರೀಕ್ಷಾ ವಿಧಾನವನ್ನು ಪಾಲಿಸುವಲ್ಲಿ ಕೆಲ ದೇಶಗಳು ವಿಫಲವಾಗಿವೆ.
ಆಫ್ರಿಕಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್‌ಷನ್ ಮುಖ್ಯಸ್ಥ ಡಾ| ಜಾನ್ ಎನ್ಕೆನ್ಗಾಸೊಂಗ್ ಆಫ್ರಿಕ ದೇಶಗಳು ಲಕ್ಷಕ್ಕೆ ಕೇವಲ 685 ಪರೀಕ್ಷೆಗಳನ್ನು ನಡೆಸುತ್ತಿವೆ ಎಂದು ದಿ ಗಾರ್ಡಿಯನ್‌ಗೆ ತಿಳಿಸಿದ್ದಾರೆ. ಪೂರ್ವ ಆಫ್ರಿಕದ ದೇಶಗಳಲ್ಲಿ ಸೋಂಕಿಗೆ ಬಲಿಯಾಗಿರುವವರ ಸರಿಯಾದ ಅಂಕಿಅಂಶ ಲಭ್ಯವಾಗಿಲ್ಲ.
Advertisement
ಸೊಮಾಲಿಯ ಸೇರಿ ಕೆಲವು ದೇಶಗಳ ಸೋಂಕಿತ ಪ್ರಕರಣಗಳ ಅಧಿಕೃತ ಅಂಕಿಅಂಶಗಳು ಇನ್ನೂ ದೊರೆತಿಲ್ಲ.
ತಜ್ಞರು ಏನು ಹೇಳುತ್ತಾರೆ?ಹಾಟ್‌ಸ್ಪಾಟ್‌ಗಳೆಂದು ಗುರುತಿಸಿಕೊಂಡಿರುವ ಕೆಲವು ಪ್ರದೇಶಗಳಲ್ಲಿ ಸೋಂಕು ಪ್ರಸರಣ ಕೆಲ ವರ್ಷಗಳ ಕಾಲ ಅವ್ಯಾಹತವಾಗಿ ಮುಂದುವರೆಯಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕ ಪ್ರದೇಶದ ನಿರ್ದೇಶಕ ಡಾ| ಮಾಟಿÏಡಿಸೊ ಮೊಯೆಟಿ ಹೇಳಿದ್ದಾರೆ. ಈಗಾಗಲೇ ಕೆಲವು ದೇಶಗಳಲ್ಲಿ ಸಮುದಾಯ ಮಟ್ಟದಲ್ಲಿ ಸೋಂಕು ಹರಡುತ್ತಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಇನ್ನು ನಾಲ್ಕರಿಂದ ಆರು ವಾರಗಳಲ್ಲಿ ಸೋಂಕಿತರ ಪ್ರಮಾಣ ಗರಿಷ್ಠವಾಗಲಿದೆ
ಎಂದು ಎಚ್ಚರಿಸಿದ್ದಾರೆ. ಬಡರಾಷ್ಟ್ರಗಳಿಗೆ ಅಸಾಧ್ಯ
ಸೋಂಕು ಪ್ರಸರಣವನ್ನು ತಡೆಗಟ್ಟಲು ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಕೋವಿಡ್ ಜನ ಜೀವನದ ಒಂದು ಭಾಗವಾಗಿ ಇರಲಿದೆ. ನಿರಂತರವಾಗಿ ಪರೀಕ್ಷೆ ನಡೆಸುವುದು, ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆಯನ್ನು ನೀಡುವುದೇ ಇದಕ್ಕಿರುವ ಪರಿಹಾರ. ಆದರೆ ಆಫ್ರಿಕದ ಬಡರಾಷ್ಟ್ರಗಳಿಗೆ ಇದು ಸಾಧ್ಯವಾದೀತೇ ಎನ್ನುವುದು ಪ್ರಶ್ನೆ.