Advertisement

ಅಫ್ಘಾನ್ ನೆಲದಲ್ಲಿ ಉಗ್ರ ಚಟುವಟಿಕೆ ಮಾಡುವಂತಿಲ್ಲ: ತಾಲಿಬಾನ್ ಗೆ ಭಾರತ-ಆಸೀಸ್‌ ಎಚ್ಚರಿಕೆ

08:43 AM Sep 12, 2021 | Suhan S |

ಹೊಸದಿಲ್ಲಿ: ಅಫ್ಘಾನಿಸ್ಥಾನ ತನ್ನ ನೆಲವನ್ನು ಯಾವುದೇ ರೀತಿಯಲ್ಲೂ ಭಯೋತ್ಪಾದನ ಚಟುವಟಿಕೆಗಳಿಗೆ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಭಾರತ ಮತ್ತು ಆಸ್ಟ್ರೇಲಿಯಾ ಜಂಟಿಯಾಗಿ ತಾಲಿಬಾನ್‌ ಆಡಳಿತಕ್ಕೆ ಎಚ್ಚರಿಸಿವೆ.

Advertisement

ಕಾಬೂಲ್‌, ತಾಲಿಬಾನಿಗಳ ಕೈವಶವಾದ ಕೆಲವೇ ದಿನಗಳಲ್ಲಿ ಉಭಯ ರಾಷ್ಟ್ರಗಳು  ಶನಿವಾರ “2 ಪ್ಲಸ್‌ 2′ ಶೃಂಗದಲ್ಲಿ ಪಾಲ್ಗೊಂಡಿದ್ದವು. ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಮತ್ತು ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಆಸ್ಟ್ರೇಲಿಯಾದ ಮರೈಸ್‌ ಪೇಯ್ನ ಮತ್ತು ಪೀಟರ್‌ ಡಟ್ಟನ್‌ ಜತೆ ಮಹತ್ವದ ಮಾತುಕತೆ ನಡೆಸಿದರು.

ಜಂಟಿ ನಿರ್ಣಯ: ಅಫ್ಘಾನಿಸ್ಥಾನ ತನ್ನ ನೆಲದಲ್ಲಿ ಉಗ್ರ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ. ಉಭಯ ರಾಷ್ಟ್ರಗಳು ಉಗ್ರವಾದದೊಂದಿಗೆ ರಾಜಿ ಮಾಡಿಕೊಳ್ಳುವಂತಿಲ್ಲ. “ಯುಎನ್‌ಎಸ್ಸಿ ರೆಸಲ್ಯೂಷನ್‌ 2593′ ಮಾರ್ಗದರ್ಶನದಲ್ಲಿ ಉಗ್ರವಾದ ನಿಯಂತ್ರಣಕ್ಕೆ ಜಾಗತಿಕ ಸಮುದಾಯ ಒಗ್ಗಟ್ಟಾಗಬೇಕು. ಇಂಡೋ- ಪೆಸಿಫಿಕ್‌ ಸಾಗರ ವಲಯದಲ್ಲಿ ಪರಸ್ಪರ ಸ್ವತಂತ್ರ, ಮುಕ್ತ, ಸಹಬಾಳ್ವೆಯಿಂದ ಕಾರ್ಯನಿರ್ವಹಿಸಬೇಕು ಹಾಗೂ  ಉಭಯ ರಾಷ್ಟ್ರಗಳು ಪರಸ್ಪರ ರಕ್ಷಣ, ವಾಣಿಜ್ಯ ಒಪ್ಪಂದಗಳಿಗೆ ಬದ್ಧವಾಗಿರಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next