Advertisement

ಇಂದಿನಿಂದ ಸೂಪರ್‌ ಫೋರ್‌ ಕದನ; ಮೊದಲ ಪಂದ್ಯ ಶ್ರೀಲಂಕಾ-ಅಫ್ಘಾನಿಸ್ತಾನ

11:55 PM Sep 02, 2022 | Team Udayavani |

ಶಾರ್ಜಾ: ಲೀಗ್‌ ಹಂತದಲ್ಲಿ ಆಡಿದ ಎರಡು ಪಂದ್ಯದಲ್ಲಿ ಜಯಭೇರಿ ಬಾರಿಸಿರುವ ಅಫ್ಘಾನಿಸ್ತಾನ ತಂಡವು ಶನಿವಾರ ನಡೆಯುವ ಸೂಪರ್‌ ಫೋರ್‌ ಹಂತದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

Advertisement

ಸೂಪರ್‌ ಫೋರ್‌ ಹಂತದಲ್ಲಿ ಎರಡು ಬಣಗಳ ಅಗ್ರ ಎರಡು ತಂಡಗಳು ಆಡಲಿವೆ. ಇಲ್ಲಿ ಪ್ರತಿಯೊಂದು ತಂಡವು ಎದುರಾಳಿ ವಿರುದ್ಧ ಆಡಲಿದ್ದು ಅಗ್ರ ಎರಡು ತಂಡಗಳು ಫೈನಲಿಗೇರಲಿವೆ.

“ಬಿ’ ಬಣದಿಂದ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಸೂಪರ್‌ ಫೋರ್‌ ಹಂತಕ್ಕೇರಿದೆ. “ಎ’ ಬಣದಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಗೆದ್ದಿರುವ ಭಾರತ ಸೂಪರ್‌ ಫೋರ್‌ ಹಂತಕ್ಕೇರಿದೆ.

ಲೀಗ್‌ ಹಂತದಲ್ಲಿ ಅಫ್ಘಾನಿಸ್ತಾನ ತಂಡವು ಶ್ರೀಲಂಕಾ ತಂಡವನ್ನು ಅಮೋಘವಾಗಿ ಸೋಲಿಸಿತ್ತು. ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಅಮೋಘವಾಗಿ ಆಡಿದ್ದ ಅಫ್ಘಾನಿಸ್ತಾನ ಭರ್ಜರಿಯಾಗಿ ಜಯಭೇರಿ ಬಾರಿಸಿ ಲಂಕೆಯನ್ನು ಆಘಾತಗೊಳಿಸಿತ್ತು. ಅಫ್ಘಾನಿಸ್ತಾನದ ದಾಳಿಗೆ ತತ್ತರಿಸಿದ್ದ ಶ್ರೀಲಂಕಾ 19.4 ಓವರ್‌ಗಳಲ್ಲಿ ಕೇವಲ 105 ರನ್ನಿಗೆ ಆಲೌಟಾಗಿತ್ತು. ಇದಕ್ಕುತ್ತರವಾಗಿ ಅಘಾ^ನಿಸ್ಥಾನ ಕೇವಲ 2 ವಿಕೆಟಿಗೆ 106 ರನ್‌ ಗಳಿಸಿ ಅಮೋಘ ಗೆಲುವು ದಾಖಲಿಸಿತ್ತು.ಶನಿವಾರದ ಸೂಪರ್‌ ಫೋರ್‌ನಲ್ಲಿ ಯಾರು ಹೇಗೆ ಆಡುತ್ತಾರೆಂಬುದನ್ನು ನೋಡಬೇಕಾಗಿದೆ.

ಶ್ರೀಲಂಕಾ ತಂಡ ಈ ಕೂಟದಲ್ಲಿ ನೀರಸ ಪ್ರದರ್ಶನ ನೀಡಿದೆ. ಗುರುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಅದು ಬಾಂಗ್ಲಾದೆ‌àಶ ವಿರುದ್ಧ ಗೆಲುವು ದಾಖಲಿಸಲು ಬಹಳಷ್ಟು ಕಷ್ಟಪಟ್ಟಿದೆ. ಕೊನೆ ಹಂತದಲ್ಲಿ ಆಸಿತಾ ಫೆರ್ನಾಂಡೊ ಅವರ ಅಸಾಧಾರಣ ಆಟದ ಪ್ರದರ್ಶನದಿಂದಾಗಿ ಶ್ರೀಲಂಕಾ 2 ವಿಕೆಟ್‌ಗಳಿಂದ ಜಯ ಸಾಧಿಸಿ ಸೂಪರ್‌ ಫೋರ್ ಹಂತಕ್ಕೇರಿತ್ತು. ಶ್ರೀಲಂಕಾ ತಂಡವು 19.2 ಓವರ್‌ಗಳಲ್ಲಿ 8 ವಿಕೆಟಿಗೆ 184 ರನ್‌ ಗಳಿಸಿತ್ತು. ಈ ಮೊದಲು ಬಾಂಗ್ಲಾದೇಶವು 7 ವಿಕೆಟಿಗೆ 183 ರನ್‌ ಗಳಿಸಿತ್ತು.

Advertisement

ಇಂದಿನ ಪಂದ್ಯ
ಸೂಪರ್‌ ಫೋರ್‌
ಶ್ರೀಲಂಕಾ-ಅಫ್ಘಾನಿಸ್ತಾನ
ಸ್ಥಳ: ಶಾರ್ಜಾ
ಆರಂಭ: 7.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next