Advertisement

ಅಫ್ಘಾನಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಭರ್ಜರಿ ಶತಕ

09:10 PM Sep 08, 2022 | Team Udayavani |

ದುಬೈ: ಏಷ್ಯಾ ಕಪ್ ಕ್ರಿಕೆಟ್ ನ ನಿರ್ಣಯಾಯಕವಲ್ಲದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ನವೆಂಬರ್ 2019 ರ ನಂತರ ಇದು ಅವರ ಮೊದಲ ಶತಕವಾಗಿದೆ. ಕೊಹ್ಲಿ 122(61 ಎಸೆತ) ಅಜೇಯ ರಾಗಿ ಉಳಿದರು.

Advertisement

ಭಾರತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 212 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಕೊಹ್ಲಿಗೆ ಸಾಥ್ ನೀಡಿದ ನಾಯಕ ರಾಹುಲ್ 62, ಸೂರ್ಯ ಕುಮಾರ್ 06 ಮತ್ತು ರಿಷಬ್ ಪಂಥ್ 20 ರನ್ ಕೊಡುಗೆ ಸಲ್ಲಿಸಿದರು.

ಅಫ್ಘಾನಿಸ್ತಾನದ ನಾಯಕ ಮೊಹಮ್ಮದ್ ನಬಿ ಕೊನೆಯ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಭಾರತದ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ಕೆಎಲ್ ರಾಹುಲ್ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ.

ಅಫ್ಘಾನಿಸ್ತಾನಕ್ಕೆ ಗೆಲ್ಲಲು 213 ರನ್‌ಗಳ ಬೃಹತ್ ಸವಾಲು ಮುಂದಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next