Advertisement
ಪ್ಯಾಟ್ಸನ್, ವಿಶ್ವ ಪ್ರಸಿದ್ಧ ಆಹಾರ ಸರಬರಾಜು ಕಂಪನಿ ಸೊಡೆಕೊದಲ್ಲಿ ಬಾಣಸಿಗ ಹಾಗೂ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಕಾಬೂಲ್ ಸಮೀಪದ ಮನೆಯಿಂದ ಕೆಲಸದ ಸ್ಥಳಕ್ಕೆ ಮಲೇಷ್ಯಾ ಹಾಗೂ ಮೆಕಡೋನಿಯಾದ ಮತ್ತೂಬ್ಬ ಯುವಕನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಹತ್ಯೆ ಮಾಡಲಾಗಿದೆ.
Related Articles
Advertisement
ಯಾರು ಈ ಪ್ಯಾಟ್ಸನ್?:ಪ್ಯಾಟ್ಸನ್ ರೊಡ್ರಿಗಸ್ ಕಾರವಾರ ತಾಲೂಕು ಕಡವಾಡ ಗ್ರಾಮದ ಯುವಕ. ಇಲ್ಲಿನ ಸುಂಕೇರಿಯ ನಿರ್ಮಲ ರಾಣೆ ಕಾನ್ವೆಂಟ್‌ನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದವರು. ಕಾರವಾರದಲ್ಲಿ ಕಾಲೇಜು ಕಲಿತು, ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮುಗಿಸಿ ಗಲ್ಫ್ ರಾಷ್ಟ್ರಗಳಲ್ಲಿ ದಶಕದಿಂದ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಎರಡು ವರ್ಷಗಳ ಹಿಂದಷ್ಟೇ ಅಪಾ^ನಿಸ್ತಾನದ ಕಾಬೂಲ್‌ನಲ್ಲಿ ಸೊಡೆಕೊÕà ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಕಾರವಾರಕ್ಕೆ ಎರಡು ತಿಂಗಳ ಹಿಂದಷ್ಟೇ ಬಂದು ತಾಯಿ, ಪತ್ನಿ ಹಾಗೂ ಮಗುವನ್ನು ಭೇಟಿಯಾಗಿ ಮರಳಿದ್ದರು. ತಾಯಿ ಕಡವಾಡದಲ್ಲಿ ವಾಸವಾಗಿದ್ದಾರೆ. ಪತ್ನಿ ಪಿಲ್ಲಾ ಹಾಗೂ ಮಗ ಕಾರವಾರ ನಗರದ ಕಾಜೂಭಾಗದಲ್ಲಿ ವಾಸವಿದ್ದಾರೆ. ಅಪಹರಣವಾಗುವ ಸ್ವಲ್ಪ ಹೊತ್ತಿನ ಮುಂಚೆ ಪ್ಯಾಟ್ಸನ್ ಮನೆಯವರೊಂದಿಗೆ ಮಾತನಾಡಿದ್ದರು. ರವಿವಾರ ಮೃತದೇಹ ಕಡವಾಡಕ್ಕೆ:
ಪ್ಯಾಟ್ಸನ್ ರೊಡ್ರಿಗಸ್‌ರ ಮೃತದೇಹ ರವಿವಾರ ಕಡವಾಡ ಗ್ರಾಮ ತಲುಪುವ ಸಾಧ್ಯತೆಗಳಿವೆ. ಅಫ್ಘಾನಿಸ್ತಾನದ ಕಾನೂನು ಪ್ರಕ್ರಿಯೆಗಳು ಮುಗಿದ ನಂತರ ಬಾಣಸಿಗ ಪ್ಯಾಟ್ಸನ್ ಅವರ ಪಾರ್ಥೀವ ಶರೀರವನ್ನು ಕಾರವಾರಕ್ಕೆ ಕಳುಹಿಸಲು ಸೊಡೆಕೊ ಕಂಪನಿ ಪ್ರಯತ್ನ ನಡೆಸಿದೆ. ಈ ಸಂಬಂಧ ಭಾರತದ ರಾಯಭಾರ ಕಚೇರಿಯೊಂದಿಗೆ ಮಾತುಕತೆಗಳು ನಡೆಯುತ್ತಿವೆ.