Advertisement

ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಲಂಕೆಗೆ ಜಯ: ಬೀದಿಗಳಲ್ಲಿ ಹಾಡಿ ಕುಣಿದ ಅಫ್ಘಾನಿಗರು

10:01 AM Sep 12, 2022 | Team Udayavani |

ದುಬೈ: ಏಷ್ಯಾ ಕಪ್ ಕೂಟದ ಫೈನಲ್ ಪಂದ್ಯದಲ್ಲಿ ಫೇವರೇಟ್ ಪಾಕಿಸ್ಥಾನ ವಿರುದ್ಧ ಅಂಡರ್ ಡಾಗ್ಸ್ ಎನಿಸಿದ್ದ ಶ್ರೀಲಂಕಾ ಜಯ ಸಾಧಿಸಿದೆ. ಈ ಮೂಲಕ ಆರನೇ ಬಾರಿಗೆ ಏಷ್ಯಾ ಕಪ್ ಎತ್ತಿ ಹಿಡಿದಿದೆ.

Advertisement

ಭಾನುಕ ರಾಜಪಕ್ಸಾ ಅವರ ಸ್ಫೋಟಕ ಅರ್ಧ ಶತಕ ಮತ್ತು ವಾನಿಂದು ಹಸರಂಗರ ಮಿಂಚಿನ ದಾಳಿಯಿಂದ ದ್ವೀಪ ರಾಷ್ಟ್ರ ಶ್ರೀಲಂಕಾ ಜಯ ಸಾಧಿಸಿತು. ಬಾಬರ್ ಹುಡುಗರನ್ನು ಕಟ್ಟಿ ಹಾಕಿದ ಶನಕ ಪಡೆ 24 ರನ್ ಅಂತರದ ಜಯ ಗಳಿಸಿತು.

ಶ್ರೀಲಂಕಾ ಏಷ್ಯಾಕಪ್ ಜಯಿಸಿದ ಸಂದರ್ಭ ಅಫ್ಘಾನಿಸ್ಥಾನದಲ್ಲಿ ಸಂಭ್ರಮಿಸಲಾಯಿತು. ಅಫ್ಘಾನ್ ನ ಬೀದಿಗಳಲ್ಲಿ ಸೇರಿದ ಜನಸ್ತೋಮವು ದ್ವೀಪ ರಾಷ್ಟ್ರದ ಗೆಲುವನ್ನು ಸಂಭ್ರಮಿಸಿದರು.

ಅಫ್ಘಾನ್ ಪತ್ರಕರ್ತ ಅಬ್ದುಲ್ಹಾಕ್ ಒಮೆರಿ ಈ ಬಗ್ಗೆ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಬೀದಿಯಲ್ಲಿ ಸೇರಿದ ಭಾರಿ ಸಂಖ್ಯೆಯ ಜನರು ಕುಣಿದು ಸಂಭ್ರಮಿಸುತ್ತಿರುವುದನ್ನು ಕಾಣಬಹುದು. ಶ್ರೀಲಂಕಾದ ಗೆಲುವಿನ ಬಗ್ಗೆ ಅಭಿನಂದಿಸಲು ಜನರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಗಳನ್ನು ಮಾಡಿದ್ದಾರೆ. ಅಲ್ಲದೆ ಪಾಕಿಸ್ತಾನ ತಂಡದ ಪ್ರದರ್ಶನವನ್ನು ವಿಶೇಷವಾಗಿ ಫೀಲ್ಡಿಂಗನ್ನು ತಮಾಷೆ ಮಾಡುವ ಮೀಮ್ ಗಳನ್ನು ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಕಾರನ್ನೇ ಎರಡು ಕಿ.ಮೀ ದೂರ ಎಳೆದೊಯ್ದ ಟ್ರಕ್ : ವಿಡಿಯೋ ನೋಡುವಾಗಲೇ ಮೈ ಜುಂ ಅನ್ನುತ್ತೆ

Advertisement

“ನಮ್ಮನ್ನು ತುಂಬಾ ಸಂತೋಷಪಡಿಸಿದ್ದಕ್ಕಾಗಿ ಅಭಿನಂದನೆಗಳು ಶ್ರೀಲಂಕಾಕ್ಕೆ ಧನ್ಯವಾದಗಳು. ಅಫ್ಘಾನಿಸ್ತಾನವು ಶ್ರೀಲಂಕಾ ಗೆಲುವನ್ನು ಸಂಭ್ರಮಿಸುತ್ತಿದೆ” ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ.

“ನಾವು ಏಷ್ಯಾ ಕಪ್ ಚಾಂಪಿಯನ್‌ ಗಳನ್ನು ಸೋಲಿಸಿದ್ದೇವೆ. ಆದರೆ ನೀವು 2 ಬಾರಿ ಸೋತಿದ್ದೀರಿ” ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಅದೇ ಪೋಸ್ಟ್‌ನ ಅಡಿಯಲ್ಲಿ, ಮತ್ತೊಬ್ಬ ಬಳಕೆದಾರರು ಅಫ್ಘಾನಿಸ್ತಾನದ ಅಭಿಮಾನಿಗಳು ಬೀದಿಗಳಲ್ಲಿ ನೃತ್ಯ ಮಾಡುವ ಮೂಲಕ ಲಂಕಾ ವಿಜಯವನ್ನು ಆಚರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next