Advertisement

ಕೋಮುಗಲಭೆ ಸೃಷ್ಟಿಗೆ ಡ್ರಗ್ಸ್‌ ದಂಧೆಯ ಲಾಭದ ಮೊತ್ತ

12:36 PM May 03, 2022 | Team Udayavani |

ನವದೆಹಲಿ:ಅಫ್ಘಾನಿಸ್ತಾನ ಮತ್ತು ರಾವಲ್ಪಿಂಡಿಯಲ್ಲಿ “ಮಾದಕದ್ರವ್ಯಗಳ ಭಯೋತ್ಪಾದನೆ’ ನಿಯಂತ್ರಿಸಲಾಗುತ್ತಿದ್ದು, ಅದರಿಂದ ಬಂದ ಲಾಭವನ್ನು ಕೋಮುಗಲಭೆಗೆ ಕುಮ್ಮಕ್ಕು ನೀಡಲು ಬಳಸಲಾಗುತ್ತದೆ.

Advertisement

ಇಂಥದ್ದೊಂದು ಸ್ಫೋಟಕ ಮಾಹಿತಿಯು ಭಾರತಕ್ಕೆ ಮಾದಕವಸ್ತುಗಳ ಕಳ್ಳಸಾಗಣೆ ಕುರಿತ ತನಿಖೆಯಿಂದ ಬಹಿರಂಗಗೊಂಡಿದೆ. ಕಳೆದ ಶುಕ್ರವಾರ ಎನ್‌ಸಿಬಿ ಭೋಗಾಲ್‌ನಿಂದ ಇಬ್ಬರು ಆಫ್ಘನ್‌ ಪ್ರಜೆಗಳನ್ನು ಬಂಧಿಸಿತ್ತು.

ಶಹೀನ್‌ಬಾಘ ನಲ್ಲಿ ಬಂಧಿತನಾದ ವ್ಯಕ್ತಿಯು ವಿಚಾರಣೆ ವೇಳೆ ಬಾಯ್ಬಿಟ್ಟ ಮಾಹಿತಿಯ ಮೇರೆಗೆ ನವದೆಹಲಿಯಲ್ಲಿ ಮತ್ತಿಬ್ಬರನ್ನು ಬಂಧಿಸಲಾಗಿತ್ತು.

ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, “ಇಡೀ ಮಾದಕದ್ರವ್ಯ ಜಾಲವನ್ನು ಆಫ್ಘನ್‌ ನಲ್ಲಿ ನಿಯಂತ್ರಿಸಲಾಗುತ್ತಿದೆ. ಆಫ‌^ನ್‌ನಿಂದ ಮೆಡಿಕಲ್‌ ವೀಸಾ ಪಡೆದು ಭಾರತಕ್ಕೆ ಬಂದಿದ್ದೇವೆ’ ಎಂದಿದ್ದಾರೆ.

10 ಕೋಟಿ ರೂ. ಸಂಗ್ರಹ:
“ಕಳೆದ 2 ತಿಂಗಳಲ್ಲಿ ಡ್ರಗ್ಸ್‌ ಸಂಸ್ಕರಣೆ ಮಾಡಿದ್ದಕ್ಕಾಗಿ ನಮಗೆ 4 ಲಕ್ಷ ರೂ.ಗಳನ್ನು ನೀಡಲಾಗಿದೆ. ಡ್ರಗ್ಸ್‌ ಸಂಸ್ಕರಣೆ ಪ್ರಕ್ರಿಯೆ ಮುಗಿಸಿದ ಬಳಿಕ, ಭಾರತದ ವಿವಿಧ ಭಾಗಗಳಿಗೆ ಅದನ್ನು ಒಯ್ದು ಮಾರಾಟ ಮಾಡಲಾಗುತ್ತದೆ. ಅದರಿಂದ ಬರುವ ಹಣವನ್ನು ಹವಾಲಾ ಮೂಲಕ ದುಬೈಗೆ ಕಳುಹಿಸಲಾಗುತ್ತದೆ. ಈವರೆಗೆ ನಾನು 10 ಕೋಟಿ ರೂ.ಗಳನ್ನು ಡ್ರಗ್ಸ್‌ ಮಾರಾಟ ಮಾಡಿ ಸಂಗ್ರಹಿಸಿ ಕೊಟ್ಟಿದ್ದೇನೆ’ ಎಂದು ಶಹೀನ್‌ಬಾಗ್‌ನಲ್ಲಿ ಸೆರೆಸಿಕ್ಕ ಆರೋಪಿ ಹೇಳಿದ್ದಾನೆ.

Advertisement

ಒಟ್ಟು ಹಣದಲ್ಲಿ ಒಂದು ಭಾಗವಷ್ಟೇ ದುಬೈಗೆ ಹೋಗುತ್ತದೆ ಎಂದ ಮೇಲೆ ಉಳಿದ ಮೊತ್ತವನ್ನು ಸ್ಲೀಪರ್ ಸೆಲ್‌ಗ‌ಳಿಗೆ ರವಾನಿಸಲಾಗುತ್ತದೆ. ಅವರು ಅದನ್ನು ದೇಶದಲ್ಲಿ ಕೋಮುಗಲಭೆ ಸೃಷ್ಟಿಸಲು, ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸುತ್ತಿರಬಹುದು ಎಂದು ಎನ್‌ಸಿಬಿ ಅಂದಾಜಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next