Advertisement

ಅಫಿಡವಿಟ್‌ ಸಲ್ಲಿಕೆ ಸ್ವಯಂಕೃತ ಅಪರಾಧ

02:36 PM Aug 22, 2017 | |

ಆಲಮಟ್ಟಿ: ಆಲಮಟ್ಟಿ ಜಲಾಶಯವನ್ನು 524.256 ಮೀ.ಗೆ ಎತ್ತರಿಸಲು ತಜ್ಞರ ಸಲಹೆ ಮೇರೆಗೆ ಕೇಂದ್ರಕ್ಕೆ ಅμಡವಿಟ್‌
ಸಲ್ಲಿಸಿದ್ದು ಸ್ವಯಂಕೃತ ಅಪರಾಧವಾಗಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅಭಿಪ್ರಾಯಪಟ್ಟರು. ಸೋಮವಾರ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಜಲಾಶಯ ವೀಕ್ಷಿಸಿ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲಮಟ್ಟಿ ಜಲಾಶಯವನ್ನು 512 ಮೀ.ಗೆ ಎತ್ತರಿಸಲು ತೀರ್ಮಾನಿಸಲಾಗಿತ್ತು. ನಂತರ ಈ ಭಾಗದ ಜಮೀನಿಗೆ ನೀರು ಒದಗಿಸಲು 519.60 ಮೀ.ಗೆ ಎತ್ತರಿಸಲು ತೀರ್ಮಾನಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಮೇಲೆ ಆಂಧ್ರ ಹಾಗೂ ಮಹಾರಾಷ್ಟ್ರ ರಾಜ್ಯಗಳು ತಕರಾರು ಮಾಡಿದವು ಎಂದರು. ಬಚಾವತ್‌ ಆಯೋಗದ ತೀರ್ಪಿನ ಪ್ರಕಾರ ನಮಗೆ ಮೊದಲು ಕೃಷ್ಣಾ ಕಣಿವೆಗೆ 698 ಟಿಎಂಸಿ ನೀರು ದೊರಕಿತ್ತು ಆದರೆ ನಾನು ವಿರೋ ಧಿಸಿದೆ. ಮುಂದೆ ಅದು 734 ಟಿಎಂಸಿಗೆ ನಿಗದಿಯಾಯಿತು. ಆ ವೇಳೆ ಮಹಾರಾಷ್ಟ್ರ ಹಾಗೂ ಆಂಧ್ರದಲ್ಲಿ ಕಾಂಗ್ರೆಸ್‌ ಆಡಳಿತವಿತ್ತು. ಸಿಕ್ಕಿರುವ ನೀರಿನಲ್ಲಿ ಚೆನ್ನೈಗೆ ಕುಡಿಯಲು 5 ಟಿಎಂಸಿ ನೀರು ಕೊಡಲು ಆಗಿನ ಪ್ರಧಾನಿ ಇಂದಿರಾಗಾಂಧಿ ಯವರ ಸಲಹೆ ಮೇರೆಗೆ ಒಪ್ಪಿಗೆ ನೀಡಲಾಗಿತ್ತು ಎಂದರು. ಎ ಸ್ಕಿಂ ಅಡಿ ನಮಗೆ ದೊರೆತ ನೀರನ್ನು 2000ನೇ ಇಸ್ವಿ ಜೂನ್‌ 30ರೊಳಗೆ ಉಪಯೋಗಿಸಲು ಷರತ್ತು ವಿಧಿಸಲಾಯಿತು. ಹೆಚ್ಚುವರಿಯಾಗಿ ದೊರೆತ 300 ಟಿಎಂಸಿ ನೀರು ಹಂಚಿಕೆಗೆ ಒತ್ತಾಯಿಸಿದಾಗ ತಾತ್ಕಾಲಿಕವಾಗಿ ಶೇ.50 ಕರ್ನಾಟಕಕ್ಕೆ, ಶೇ.25 ಆಂಧ್ರಕ್ಕೆ ಮತ್ತು ಶೇ.25 ಮಹಾರಾಷ್ಟ್ರಕ್ಕೆ ನಿಗದಿಗೊಳಿಸಲಾಗಿತ್ತು. ಆದರೆ ಅದಕ್ಕಾಗಿ ನ್ಯಾಯಾಧಿಕರಣ-2ನ್ನು ರಚಿಸಿ ಅದರ ಮೂಲಕ ನೀರು ಪಡೆಯುವಂತೆ ಬಚಾವತ್‌ ಆಯೋಗ ಹೇಳಿತು ಎಂದು ದೇವೇಗೌಡ ಹೇಳಿದರು. ಇನ್ನು ರಾಜ್ಯವು 2000ನೇ ಇಸ್ವಿ ಜೂನ್‌ 30ರೊಳಗೆ ರಾಜ್ಯಗಳ ಪಾಲಿನ ನೀರು ಬಳಸಿಕೊಳ್ಳುವಂತೆ ಮೂರು ರಾಜ್ಯಗಳಿಗೆ ಆದೇಶಿಸಲಾಗಿತ್ತು. ಇದರಿಂದ ವಿಜಯಪುರ ಜಿಲ್ಲೆಯ ಸುಮಾರು ಎರಡು ಲಕ್ಷ ಎಕರೆ ಜಮೀನು ಕೃಷ್ಣೆ ಹಿನ್ನೀರಿನಲ್ಲಿ ಮುಳುಗಡೆ ಹೊಂದುವಂತಾಯಿತು. ಆ ವೇಳೆ ಹಣಕಾಸು ಕೊರತೆಯಿತ್ತು. ಇಂಥ ಸಂದಿಗ್ದ ಸ್ಥಿತಿಯಲ್ಲಿ ಸರ್ಕಾರ ಸಿಲುಕಿತ್ತು ಎಂದರು. ಗೇಟುಗಳ ಅಳವಡಿಕೆ ನಂತರ ಎರಡೂ ರಾಜ್ಯಗಳು ನ್ಯಾಯಾಲಯಕ್ಕೆ ಹೋಗಿದ್ದರಿಂದ ಅಳವಡಿಸಿದ್ದ ಗೇಟುಗಳನ್ನು ಕತ್ತರಿಸುವಂತಾಯಿತು. ನ್ಯಾ| ಬೃಜೇಶಕುಮಾರ ನೇತೃತ್ವದ ಎರಡನೇ ಕೃಷ್ಣಾ ನ್ಯಾಯಾಧಿಕರಣವು ಆಲಮಟ್ಟಿ ಜಲಾಶಯವನ್ನು 519.600 ಮೀ.ದಿಂದ 524.256 ಮೀ.ಗೆ ಎತ್ತರಿಸಲು ಅನುಮತಿ ನೀಡಿದ್ದರೂ ಅದರಲ್ಲಿ ಕೆಲವು ಷರತ್ತು ಹಾಕಿದೆ. ಇದರಿಂದ ನಮ್ಮ ಹಣ ಖರ್ಚು ಮಾಡಿ ನಮ್ಮ ಅಧಿಕಾರಿಗಳು ಕೆಲಸ ಮಾಡಿ ಇನ್ನೊಂದು ರಾಜ್ಯಕ್ಕೆ ನೀರು ಕೊಡುವಂತಾಗಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು. ಆಲಮಟ್ಟಿ ಜಲಾಶಯವನ್ನು 524.256 ಮೀ.ಗೆ ಎತ್ತರಿಸಬೇಕೆಂಬ ಸುಪ್ರಿಂಕೋರ್ಟ್‌ ಷರತ್ತು ಹಾಕಿದ್ದರಿಂದ ನಾನು ಮುಖ್ಯಮಂತ್ರಿಯಾದ ಕಾಲದಲ್ಲಿ ಜಲಾಶಯ ಎತ್ತರಕ್ಕೆ ಕೈ ಹಾಕಲಿಲ್ಲ. ಜಲಾಶಯ ಎತ್ತರದಿಂದ ಸಂಗ್ರಹವಾಗುವ ನೀರಿನಲ್ಲಿ ಕೇವಲ ವಿದ್ಯುತ್‌ ಉತ್ಪಾದಿಸಿ ಹೆಚ್ಚುವರಿ ನೀರನ್ನು ನದಿ ಪಾತ್ರಕ್ಕೆ ಹರಿಸುವುದಾಗಿ ಪಿ.ವಿ. ನರಸಿಂಹರಾವ್‌ ಪ್ರಧಾನಿಯಾದ ವೇಳೆ ಕೇಂದ್ರ ಯೋಜನಾ ಆಯೋಗ ಹಾಗೂ ಕೇಂದ್ರ ಜಲ ಆಯೋಗಕ್ಕೆ ಆಗಿನ ಜಲ ಸಂಪನ್ಮೂಲ ಕಾರ್ಯದರ್ಶಿಯಾಗಿದ್ದ ಚಿಕ್ಕಣ್ಣ ಅವರ ಸಲಹೆ ಮೇರೆಗೆ ಸಲ್ಲಿಸಿದ್ದ ಅμಡೆವಿಟ್‌ನಲ್ಲಿ ರಾಜ್ಯ ಸರ್ಕಾರ ತಿಳಿಸಿ ಜಲಾಶಯ ಎತ್ತರಕ್ಕೆ ಅನುಮತಿ ಪಡೆಯುವ ಕ್ರಿಯೆಗಳು ಆರಂಭಗೊಂಡಿದ್ದವು ಎಂದು ಹೇಳಿದರು. ಆದರೆ ಕೃಷ್ಣಾ ಮೇಲ್ದಂಡೆ ಯೋಜನೆ ಮುಕ್ತಾಯಗೊಳಿಸಲು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದ ಅವರು, ನಾರಾಯಣಪುರ ಜಲಾಶಯದಿಂದ ಇಂಡಿ ಶಾಖಾ ಕಾಲುವೆ ರಚನೆ, ಸಿಂದಗಿ ತಾಲೂಕು ನೀರಾವರಿಗಾಗಿ ಗುತ್ತಿ ಬಸವಣ್ಣ ಯೋಜನೆ ನಾನೆ ಜಾರಿ ತಂದಿದ್ದೇನೆ. ಕರ್ನಾಟಕದ ನೀರಾವರಿ ಯೋಜನೆಗಳಿಗೆ ತೊಂದರೆಯಾದಾಗಲೆಲ್ಲಾ ಅವಿರತ ಹೋರಾಟ ನಡೆಸಿದ್ದೇನೆ. ಇದರಲ್ಲಿ ಯಾವುದೇ ಪ್ರದೇಶವಾರು ಭೇದಭಾವ ಮಾಡಿಲ್ಲ ಎಂದರು. ಮಾಜಿ ಸಚಿವ ಬಸವರಾಜ ಹೊರಟ್ಟಿ, ಘನಶ್ಯಾಂ ಭಾಂಡಗೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next