Advertisement

ಮುಂಗಾರು ಚುರುಕು-ಬಿತ್ತನೆ ಜೋರು

09:46 AM Jun 30, 2019 | Naveen |

ಮಲ್ಲಿಕಾರ್ಜುನ ಹಿರೇಮಠ
ಅಫಜಲಪುರ:
ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನ ಮಳೆ ಆರಂಭದಲ್ಲಿ ಬಾರದೆ ಇದ್ದರೂ ನಂತರದ ಮಳೆ ಉತ್ತಮವಾಗಿ ಬಂದಿದ್ದು, ರೈತರು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ತಾಲೂಕಿನಾದ್ಯಂತ ರೈತರು ಬೀಜ, ಗೊಬ್ಬರ ಖರೀದಿಸಿ ಬಿತ್ತನೆಗೆ ಸಜ್ಜಾಗಿದ್ದಾರೆ.

Advertisement

ಬಿತ್ತನೆಗೆ ಕೂಲಿ ಆಳು ಸಮಸ್ಯೆ: ಮಳೆ ಬಂದಿದೆ, ರೈತರು ಬೀಜ, ಗೊಬ್ಬರ ತಂದಿಟ್ಟುಕೊಂಡಿದ್ದಾರೆ. ಆದರೆ ಬಿತ್ತನೆಗೆ ಕೂಲಿ ಕೆಲಸದವರು ಸಿಗುತ್ತಿಲ್ಲ. ಹೀಗಾಗಿ ರೈತರಿಗೆ ಸಮಸ್ಯೆ ಎದುರಾಗಿದೆ. ಸದ್ಯ ಬಿತ್ತನೆ ಸಂದರ್ಭದಲ್ಲಿ ಕೂಲಿ ಕೆಲಸಕ್ಕೆ ಜನ ಸಿಗದೆ ರೈತರು ಪರದಾಡುವಂತಾಗಿದ್ದು, ಕೆಲವರು ತಮ್ಮ ಮಕ್ಕಳನ್ನೇ ಬಿತ್ತನೆ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕೂಲಿ ಆಳುಗಳ ಸಮಸ್ಯೆ ರೈತರಿಗೆ ಆರಂಭದ ಹಂತದಲ್ಲೇ ಶುರುವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಎತ್ತುಗಳಿಲ್ಲದ್ದಕ್ಕೆ ಟ್ರ್ಯಾಕ್ಟರ್‌ ಬಳಕೆ: ತಾಲೂಕಿನಾದ್ಯಂತ ಕಳೆದ ವರ್ಷ ಬರಗಾಲದಿಂದ ನೀರು, ಮೇವು ಪೂರೈಕೆ ಮಾಡಲಾಗದ್ದಕ್ಕೆ ರೈತರು ದನ-ಕರುಗಳನ್ನು ಕಮ್ಮಿ ಬೆಲೆಗೆ ಮಾರಿದ್ದಾರೆ. ಈಗ ಬಿತ್ತನೆಗೆ, ಉಳುಮೆಗೆ ಎತ್ತುಗಳಿಲ್ಲದ್ದರಿಂದ ದುಬಾರಿ ಬಾಡಿಗೆ ನೀಡಿ ಟ್ರ್ಯಾಕ್ಟರ್‌ ಮೂಲಕ ಬಿತ್ತನೆ ಮಾಡುತ್ತಿದ್ದಾರೆ.

ಮಳೆ ಬಂದರೆ ಸುಗ್ಗಿ: ಸದ್ಯ ಇಲ್ಲಿಯವರೆಗೂ ಬಂದ ಮಳೆಯಿಂದ ಕೇವಲ ಬಿತ್ತನೆಗೆ ಆಗುವಷ್ಟು ಮಾತ್ರ ಭೂಮಿ ಹಸಿಯಾಗಿದೆ. ಉಳಿದಂತೆ ಅಂಜರ್ತಜಲ ಮಟ್ಟ ಹೆಚ್ಚಿಸುವಷ್ಟು ಮಳೆಯಾಗಿಲ್ಲ. ಹೀಗಾಗಿ ಬಿತ್ತನೆ ಬಳಿಕವೂ ಉತ್ತಮ ರೀತಿಯಲ್ಲಿ ಮಳೆಯಾದರೆ ರೈತರಿಗೆ ಸುಗ್ಗಿ ಕಾಲ ಬರಲಿದೆ.

ಅಫಜಲಪುರ ತಾಲೂಕಿನಾದ್ಯಂತ ಜೂನ್‌ ತಿಂಗಳಲ್ಲಿ 110 ಮಿ.ಮೀ ಮಳೆ ಬರಬೇಕಿತ್ತು. ಆದರೆ 140 ಮಿ.ಮೀ ಮಳೆ ಬಂದಿದ್ದು, ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಳೆ ಬರಬೇಕಾಗಿದೆ.
• ಅರವಿಂದ‌ ರಾಠೊಡ, ಕೃಷಿ ಅಧಿಕಾರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next