Advertisement
ತಾಲೂಕಿನ ಅಂಕಲಗಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದ 21ನೇ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಿಮ್ಮ ಚಟಗಳನ್ನು ನಮ್ಮ ಜೋಳಿಗೆಯಲ್ಲಿ ಹಾಕಿ ಎನ್ನುವ ವಿನೂತನ ಅಭಿಯಾನ ನಡೆಸಿದರು.
ದೇಶದ ಸಂಪತ್ತು. ಜಗತ್ತಿನ ಅತಿ ಹೆಚ್ಚು ಯುವಕರು ಹೊಂದಿರುವ ದೇಶ ನಮ್ಮದು. ಆದರೆ ಅನೇಕ ಚಟಗಳಿಗೆ ದಾಸರಾಗಿ ಯುವಕರು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುಗಾದಿ ಹೊಸ
ವರ್ಷದ ಶುಭ ಸಂದರ್ಭದಲ್ಲಿ ಅಂಕಲಗಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯ ಸಮಯದಲ್ಲಿ ಗ್ರಾಮಸ್ಥರು ಚಟ ಮುಕ್ತರಾಗಿ
ಉತ್ತಮ ಜೀವನ ನಡೆಸಬೇಕು. ಯಾರು ಚಟ ಬಿಡುತ್ತೇವೆಂದು ಜೋಳಿಗೆಗೆ ಹಾಕಿ ಪ್ರಮಾಣ ಮಾಡಿದ್ದಿರಿ ಅವರ ಭವಿಷ್ಯ
ಉಜ್ವಲವಾಗಲಿದೆ, ಒಂದು ವೇಳೆ ಕದ್ದು ಪುನಃ ಅದೇ ಚಟಕ್ಕೆ ದಾಸರಾದರೆ ಅದಕ್ಕಿಂತ ದೊಡ್ಡ ಪಾಪ ಮತ್ತೂಂದಿಲ್ಲ ಎಂದರು. ಈಗಿನ ಬಿಸಿಲು ನೋಡಿದಾಗ ಎಲ್ಲರಿಗೂ ಭಯ ಶುರುವಾಗಿದೆ. ಎಲ್ಲಿ ನೋಡಿದರಲ್ಲಿ ಗಿಡ, ಮರಗಳನ್ನು ದುರಾಸೆಗಾಗಿ ಕಡಿದು
ಮಾರಲಾಗುತ್ತಿದೆ. ಹೀಗಿ ಮುಂದುವರಿದರೆ ಬರುವ ವರ್ಷಗಳಲ್ಲಿ ಹನಿ ನೀರಿಗಾಗಿಯೂ ಎಲ್ಲರೂ ಪರದಾಡಬೇಕಾಗುತ್ತದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಒಳ್ಳೆಯ ಮಳೆ-ಬೆಳೆಯಾಗಿ ನಾಡು
ಸಮೃದ್ಧವಾಗಿರಬೇಕಾದರೆ ಗಿಡ-ಮರಗಳನ್ನು ನೆಟ್ಟು ಬೆಳೆಸಬೇಕು. ಈ ನಿಟ್ಟಿನಲ್ಲಿ ಈ ಬಾರಿಯ ಮಳೆಗಾಲ ಆರಂಭದಲ್ಲಿ ಮಠದ ವತಿಯಿಂದ ಪ್ರತಿ ಮನೆಗೂ ಸಸಿಗಳನ್ನು ವಿತರಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಎಲ್ಲರೂ ಸಸಿ ನೆಟ್ಟು ಅವುಗಳನ್ನು ಮಕ್ಕಳಂತೆ
ಬೆಳೆಸಬೇಕು ಎಂದು ಹೇಳಿದರು.
Related Articles
ಬಾಗಿಲಿಗೆ ಬಂದು ದುಶ್ಚಟ ಬಿಟ್ಟು ಸಜ್ಜನರಾಗಿ ಎಂದು ಸಲಹೆ ನೀಡುತ್ತಿರುವಾಗ, ನಾವೆಲ್ಲ ಚಟ ಬಿಟ್ಟು ಸಜ್ಜನರಾಗದಿದ್ದರೆ ದೇವರು ಮೆಚ್ಚುವುದಿಲ್ಲ ಎಂದರು.
Advertisement
ಮುಖಂಡರಾದ ಚಂದ್ರಕಾಂತ ಪೊಲೀಸ ಪಾಟೀಲ, ಸಾಹೇಬಗೌಡ ಮೂಲಗೆ, ವಿಠ್ಠಲ ರಾವ್ ಪಡಶೆಟ್ಟಿ, ಘೋಷಯ್ಯ ಸ್ವಾಮಿ, ಗುರು ಸ್ವಾಮಿ ಹಿರೇಮಠ, ಅಣ್ಣಾರಾವ ಪಡಶೆಟ್ಟಿ, ಏಸಣ್ಣ, ಶಿವರಶಣ ಪಾಟೀಲ, ಬಸಣ್ಣ ಕುಂಬಾರ, ಕಾಶಿರಾಯ ಮೂಲಗೆ, ಬಸಪ್ಪ ಪಾಟೀಲ ಹಾಗೂ ಇತರರು ಇದ್ದರು. ತಬಲಾ ವಾದಕ ಮಹಾಂತೇಶ ಸುತಾರ ನಿರೂಪಿಸಿ, ವಂದಿಸಿದರು.