Advertisement

5 ದಿನದ ಶಿಶು ಜತೆ ಹುತಾತ್ಮ ಪತಿ ಅಂತ್ಯಕ್ರಿಯೆಗೆ ಬಂದ ಪತ್ನಿ

08:15 AM Feb 25, 2018 | Team Udayavani |

ಹೊಸದಿಲ್ಲಿ: ಪ್ರೀತಿ ಪಾತ್ರರ ಸಾವು ಎಂಥ ವರನ್ನೂ ದಿಕ್ಕೆಡಿಸುವಂತೆ ಮಾಡಿಬಿಡುತ್ತದೆ. ನೋವಿನಿಂದ ಹೊರಬರಲಾರದೆ ಒದ್ದಾಡುವ ಸಾಕಷ್ಟು ಘಟನೆಗಳನ್ನು ನೋಡುತ್ತಿರುತ್ತೇವೆ. ಆದರೆ ಸೇನೆಯ ಮಹಿಳಾ ಅಧಿಕಾರಿಯೊಬ್ಬರು ವಾಯುಪಡೆಯ ಅಧಿಕಾರಿಯಾದ ಪತಿಯ ಅಂತಿಮ ಸಂಸ್ಕಾರವನ್ನು ನೆರವೇರಿಸಲು 5 ದಿನಗಳ ಶಿಶುವನ್ನು ಎತ್ತಿಕೊಂಡು ಸೇನಾ ಉಡುಗೆಯಲ್ಲೇ ನಡೆದಿರುವುದು ಇಡೀ ದೇಶದ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಕಣ್ಣಂಚಿನಲ್ಲಿ ನೀರು ತುಂಬಿಕೊಂಡಿದ್ದರೂ ಸೇನಾ ಸಮವಸ್ತ್ರ  ಧರಿಸಿ ಮೇಜರ್‌ ಕುಮುದಾ ಡೋಗ್ರಾ ಅವರು ಪುಟ್ಟ ಮಗುವನ್ನು ಎತ್ತಿಕೊಂಡು ನಡೆಯುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಣ ತಾಣಗಳಲ್ಲಿ ವೈರಲ್‌ ಆಗಿವೆ. ವೀರ ಸೇನಾ ನಿಯ ಪತ್ನಿಯ ದಿಟ್ಟತನವನ್ನು ಜಾಲತಾಣಿಗರು ಕೊಂಡಾಡಿದ್ದಾರೆ.

ಫೆ. 15ರಂದು ಅಸ್ಸಾಂನ ಜೋರ್ಹಾಟ್‌ನಿಂದ ಟೇಕ್‌ ಆಫ್ ಆಗಿದ್ದ ಯುದ್ಧ ವಿಮಾನವು ತಾಂತ್ರಿಕ ದೋಷದಿಂದಾಗಿ ಮಾಜುಲಿ ಎಂಬಲ್ಲಿ ಪತನ ಗೊಂಡಿತ್ತು. ಪರಿಣಾಮ ಅದರಲ್ಲಿದ್ದ ಭಾರತೀಯ ವಾಯುಪಡೆ ವಿಂಗ್‌ ಕಮಾಂಡರ್‌ ಡಿ. ವತ್ಸ್ ಹುತಾತ್ಮ ರಾದರು. 5 ದಿನಗಳ ಹಿಂದಷ್ಟೇ ವತ್ಸ್ ಅವರ ಪತ್ನಿ, ಮೇಜರ್‌ ಕುಮುದಾ ಅವರು ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದರು. ಪತಿಯ ಸಾವಿನ ಆಘಾತದ ನಡುವೆಯೂ ಅವರು ತಮ್ಮ ಹಸುಗೂಸನ್ನು ಎತ್ತಿಕೊಂಡು, ಸಮವಸ್ತ್ರಧಾರಿಯಾಗಿಯೇ ಅಂತ್ಯ ಸಂಸ್ಕಾರದ ಸ್ಥಳಕ್ಕೆ ಹೋಗುತ್ತಿದ್ದ ದೃಶ್ಯ ಎಂಥವರ ಮನಸ್ಸನ್ನೂ ಕರಗಿಸುವಂತಿತ್ತು. ಅವರ ಧೈರ್ಯ, ಕರ್ತವ್ಯದೆಡೆಗಿನ ಶ್ರದ್ಧೆಯನ್ನು ಜನ ಸಾಮಾಜಿಕ ಜಾಲತಾಣಗಳಲ್ಲಿ ಗುಣಗಾನ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next