Advertisement

ಗಗನಯಾನ: ಪ್ಯಾರಚೂಟ್‌ ಪರೀಕ್ಷೆ ನಡೆಸಿದ ಇಸ್ರೋ !

09:13 PM Mar 07, 2023 | Team Udayavani |

ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಬಹುನಿರೀಕ್ಷಿತ ಯೋಜನೆ ಗಗನಯಾನಕ್ಕೆ ಪೂರಕವಾದ ಪ್ಯಾರಚೂಟ್‌ ಕ್ಲಸ್ಟರ್ಡ್‌ ಡಿಪ್ಲಾಯ್‌ಮೆಂಟ್‌ ಪರೀಕ್ಷೆಯನ್ನು ಇಸ್ರೋ ನಡೆಸಿದೆ. ಮಾನವಸಹಿತ ಗಗನಯಾನದಲ್ಲಿ ಅಂತರಿಕ್ಷಕ್ಕೆ ತಲುಪಿದ ನೌಕೆಯನ್ನು ಮತ್ತೆ ಭೂಮಿಗೆ ಇಳಿಸಲು ಈ ಪ್ಯಾರಚೂಟ್‌ ಪರೀಕ್ಷೆ ಅತ್ಯಗತ್ಯವಾಗಿದೆ.

Advertisement

ಚಂಡೀಗಢದ ಟರ್ಮಿನಲ್‌ ಬ್ಯಾಲಿಸ್ಟಿಕ್ಸ್‌ ಸಂಶೋಧನಾ ಪ್ರಯೋಗಾಲಯದಲ್ಲಿ ಪೈಲಟ್‌ ಹಾಗೂ ಎಸಿಎಸ್‌ ಪ್ಯಾರಚೂಟ್‌ಗಳ ” ರೈಲ್‌ ಟ್ರ್ಯಾಕ್‌-ರಾಕೆಟ್‌ ಸ್ಲೆಡ್‌ ನಿಯೋಜನೆಗಳ ಪರೀಕ್ಷೆ ನಡೆಸಲಾಗಿದೆ.

ಗಗನಯಾನ ಸಮಯದಲ್ಲಿ ಎದುರಾಗಬಹುದಾದ ಸಾಮಾನ್ಯ ಹಾಗೂ ಅಸಮಾನ್ಯ ಪರಿಸ್ಥಿತಿಗಳಲ್ಲಿ ಪ್ಯಾರಚೂಟ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ. ಅವುಗಳ ಸಾಮರ್ಥ್ಯವೇನು ಎಂಬುದನ್ನು ಪರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಹು ನಿರೀಕ್ಷಿತ ಗಗನಯಾನವನ್ನು 2024ರ 3ನೇ ತ್ತೈಮಾಸಿಕದಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next