Advertisement

ಪಕ್ಷದ ನಿರ್ಧಾರಕ್ಕೆ ಬದ್ದರಾಗಿ ಪ.ಪಂ ಚುನಾವಣೆ ಎದುರಿಸಲು ಯಾಳಗಿ ಸಲಹೆ

06:00 PM Dec 06, 2021 | Shwetha M |

ದೇವರಹಿಪ್ಪರಗಿ: ಪಕ್ಷದ ನಿರ್ಧಾರಕ್ಕೆ ಬದ್ಧರಾಗಿ ಹೊಂದಾಣಿಕೆ, ಸಹಕಾರ ಮನೋಭಾವದಿಂದ ಬರುವ ಪಪಂ ಚುನಾವಣೆ ಎದುರಿಸೋಣ ಎಂದು ಕೆಪಿಸಿಸಿ ಸದಸ್ಯ ಬಿ.ಎಸ್‌. ಪಾಟೀಲ (ಯಾಳಗಿ) ಹೇಳಿದರು.

Advertisement

ಪಟ್ಟಣದ ಬಷೀರ್‌ ಅಹ್ಮದ್‌ ಕಸಾಬ್‌ (ಬೇಪಾರಿ) ಕಾಂಪ್ಲೆಕ್ಸ್‌ ನಲ್ಲಿ ಪಪಂ ಚುನಾವಣೆ ನಿಮಿತ್ತ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಿಂದ ರವಿವಾರ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಅಂತೆಯೇ ಟಿಕೆಟ್‌ಗಾಗಿ ಪೈಪೋಟಿ ಕೂಡ ಜೋರಾಗಿದೆ. ಈ ಸಮಯದಲ್ಲಿ ಟಿಕೆಟ್‌ ಸಿಗದವರು ಯಾವುದೇ ಕಾರಣಕ್ಕೂ ವಿಚಲಿತರಾಗದೇ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು ಎಂದರು.

ಗಡಿನಾಡು ಪ್ರಾ ಧಿಕಾರದ ಮಾಜಿ ಅಧ್ಯಕ್ಷ ಸುಭಾಸ ಛಾಯಾಗೋಳ, ಕೆಪಿಸಿಸಿ ವಕ್ತಾರ ಎಸ್‌.ಎಂ. ಪಾಟೀಲ (ಗಣಿಯಾರ), ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ನಿಂಗನಗೌಡ ಪಾಟೀಲ (ಯರನಾಳ), ಸುರೇಶ ನಾಡಗೌಡ, ಎಸ್‌.ಎಸ್‌. ಪಾಟೀಲ, ಯೂತ್‌ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶ್ರೀಕಾಂತ ಛಾಯಾಗೋಳ, ಮಹಿಬೂಬ್‌ ಹುಂಡೇಕಾರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಷೀರ್‌ ಅಹ್ಮದ್‌ ಬೇಪಾರಿ ಮಾತನಾಡಿ, ಪಟ್ಟಣದ 17 ವಾರ್ಡ್‌ಗಳಲ್ಲಿ ಕನಿಷ್ಟ 12-13 ಸ್ಥಾನ ಪಡೆಯಲು ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಟಿಕೆಟ್‌ ವಂಚಿತರು ನಿರಾಶೆ ಪಡದೇ ನಿಷ್ಠೆಯಿಂದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲು ಮುಂದಾಗಬೇಕು ಎಂದರು.

ಈ ವೇಳೆ ಕಾಂಗ್ರೆಸ್‌ ಜಿಲ್ಲಾ ಉಪಾಧ್ಯಕ್ಷ ಸಂಗನಗೌಡ ಹರನಾಳ, ಸರಿತಾ ನಾಯಿಕ್‌, ರಮೀಜಾ ನದಾಫ್‌, ಪ್ರಕಾಶ ಗುಡಿಮನಿ, ಗುರುರಾಜ್‌ ಆಕಳವಾಡಿ, ಮುನೀರ್‌ ಬಿಜಾಪೂರ, ಮುರ್ತುಜಾ ತಾಂಬೋಳಿ, ಕಾಶೀನಾಥ ತಳಕೇರಿ, ಅಮೀರ್‌ಹಮ್ಜಾ ಚೌಧರಿ, ಆನಂದ ಚಟ್ಟರಕಿ, ಡಾ| ಭೈರಿ, ಮಲ್ಲು ಜಮಾದಾರ, ಕಾಶೀನಾಥ ಜಮಾದಾರ ಸೇರಿದಂತೆ ಕಾರ್ಯಕರ್ತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next