ಭಟ್ಕಳ: ಕೇಂದ್ರ ಸರಕಾರದ ಆತ್ಮನಿರ್ಭರ ಯೋಜನೆಯಡಿ ಬೀದಿಬದಿ ವ್ಯಾಪಾರಮಾಡುವವರಿಗೆ ಹತ್ತು ಸಾವಿರ ರೂ. ಸಾಲನೀಡಲಾಗುತ್ತಿದ್ದು ಆದನ್ನು ಸದುಪಯೋಗಪಡಿಸಿಕೊಂಡು ಮರುಪಾವತಿ ಮಾಡಿದವರಿಗೆಮುಂದೆ ದುಪ್ಪಟ್ಟು ಸಾಲ ದೊರೆಯುವುದು ಎಂದು ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸಂಜೀತ್ ಸಿಂಗ್ ಹೇಳಿದರು.
ಆವರು ಇಲ್ಲಿನ ಕರ್ನಾಟಕ ಬ್ಯಾಂಕ್‌ನಲ್ಲಿ ನಡೆದ ಬೀದಿ ಬದಿ ವ್ಯಾಪಾರ ವೃದ್ಧಿಗಾಗಿ ಸಾಲ ನೀಡುವಯೋಜನೆಯ ಫಲಾನುಭವಿಗಳಿಗೆ ಮಾಹಿತಿ ಹಾಗೂಸಾಲ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಮುದಾಯ ಸಂಘಟನಾ ಅಧಿಕಾರಿ ವೇಣುಗೋಪಾಲ ಶಾಸ್ತ್ರಿ, ಪುರಸಭೆ ವತಿಯಿಂದ ಈಗಾಗಲೇ ಫಲಾನುಭವಿಗಳನ್ನುಗುರುತಿಸಿ ಲೈಸನ್ಸ್ ಸೇರಿದಂತೆ ಅಗತ್ಯ ದಾಖಲೆಗಳನ್ನುಮಾಡಿಕೊಟ್ಟಿದ್ದು ಸಾಲ ಸೌಲಭ್ಯ ನೀಡುವಂತೆಬ್ಯಾಂಕುಗಳಿಗೆ ಮಾಹಿತಿ ರವಾನಿಸಲಾಗಿದ್ದು ಹೆಚ್ಚಿನಬ್ಯಾಂಕುಗಳು ತಮಗೆ ಬಂದಿರುವ ಪಟ್ಟಿಯಂತೆಈಗಾಗಲೇ ಸಾಲ ನೀಡಿದ್ದಾರೆ. ಕೆಲವರುದಾಖಲೆಗಳನ್ನು ಒದಗಿಸಿಲ್ಲವಾದ್ದರಿಂದ ಸಾಲ ನೀಡುವುದಕ್ಕೆ ವಿಳಂಬವಾಗಿದೆ. ಆದಷ್ಟು ಶೀಘ್ರದಲ್ಲಿತಮ್ಮ ದಾಖಲೆಗಳನ್ನು ಬ್ಯಾಂಕುಗಳಿಗೆ ನೀಡಿ ಸಾಲ ಪಡೆದುಕೊಂಡು ಸಕಾಲದಲ್ಲಿ ಮರು ಪಾವತಿ ಮಾಡುವಂತೆ ಕರೆ ನೀಡಿದರು.
ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ವಿನಾಯಕ ಮೊಗೇರ ಮಾತನಾಡಿ, ಸಾಲ ಪಡೆಯುವವರ ಪಟ್ಟಿ ನಮಗೆ ಬಂದಿದ್ದರೂ ಕೂಡಾ ನಾವು ಅವರನ್ನುಸಂಪರ್ಕ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಕೆಲವರು ಮಾತ್ರ ಬ್ಯಾಂಕಿಗೆ ಬಂದಿದ್ದು ಅವರಿಗೆ ಸಾಲ ನೀಡಿದ್ದೇವೆ ಎಂದರು. ಪ್ರತಿಯೊಬ್ಬರೂ ಕೂಡಾ ಬ್ಯಾಂಕ್‌ನೊಂದಿಗೆ ಉತ್ತಮ ಸಂಪರ್ಕ ಸಾಧಿಸಿ ನೀವು ಈಗ ಪಡೆದ ಸಾಲವನ್ನು ಸದುಪಯೋಗ ಪಡಿಸಿಕೊಂಡು ಮತ್ತೆ ಇದಕ್ಕಿಂತ ಹೆಚ್ಚಿನ ಸಾಲ ಪಡೆಯುವಂತಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ಈ ಯೋಜನೆ ತಂದಿದೆ. ಈ ಯೋಜನೆಯ ಲಾಭ ಪಡೆದು ವ್ಯಾಪಾರ ವೃದ್ಧಿಸಿಕೊಳ್ಳುವಲ್ಲಿ ಇದೊಂದು ಉತ್ತಮ ಅವಕಾಶ ಎಂದರು.
ಕರ್ಣಾಟಕ ಬ್ಯಾಂಕ್ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ಫಲಾನುಭವಿಗಳಿಗೆ ಸಾಲ ಮಂಜೂರಿ ಪತ್ರ ವಿತರಿಸಲಾಯಿತು. ಭಾರತೀಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕಅನೂಪ್ ಪೈ, ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕಪ್ರಶಾಂತ ಪ್ರಭು, ಬ್ಯಾಂಕ್ ಆಫ್ ಬರೋಡಾದ ಅಮೋಲ್ ರಿಚಾಲೆ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ನಾಗರಾಜ ನಾಯ್ಕ ಕರ್ಣಾಟಕ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.