Advertisement

ನ್ಯಾಯಬದ್ಧ ಕರ್ತವ್ಯ ನಿರ್ವಹಣೆಗೆ ಸಲಹೆ

07:10 PM Mar 17, 2021 | Girisha |

ವಿಜಯಪುರ : ಪೊಲೀಸರು ಕರ್ತವ್ಯದ ಸಂದರ್ಭದಲ್ಲಿ ಎಷ್ಟೇ ಪ್ರಬಲ ರಾಜಕೀಯ ಪ್ರಭಾವ, ಸಮುದಾಯಗಳ ಒತ್ತಡಗಳಿದ್ದರೂ ನಿಷ್ಪಕ್ಷಪಾತ ಕರ್ತವ್ಯ ನಿಭಾಯಿಸಬೇಕು ಎಂದು ಬೆಳಗಾವಿ ಉತ್ತರ ವಲಯದ ಐಜಿಪಿ ಎಚ್‌.ಜಿ. ರಾಘವೇಂದ್ರ ಸುಹಾಸ್‌ ಹೇಳಿದರು.

Advertisement

ಮಂಗಳವಾರ ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ವಿಜಯಪುರ ಮತ್ತು ಬಾಗಲಕೋಟೆ ತಾತ್ಕಾಲಿಕ ಪೊಲೀಸ್‌ ತರಬೇತಿ ಶಾಲೆಯ 5ನೇ ತಂಡದ ಸಶಸ್ತ್ರÅ ಪೊಲೀಸ್‌ ಕಾನ್‌ ಸ್ಟೇಬಲ್‌ ಪ್ರಶಿಕ್ಷಣಾರ್ಥಿಗಳ ಮತ್ತು ಒಂದನೇ ತಂಡದ ಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ವಂದನೆ ಸ್ವೀಕರಿಸಿ ಪಥಸಂಚಲ ಪರಿವೀಕ್ಷಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ದಕ್ಷ, ಪ್ರಾಮಾಣಿಕ ಸೇವೆಗೆ ಪ್ರಶಿಕ್ಷಣಾರ್ಥಿ ಪೊಲೀಸ್‌ ಪೇದೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಪೊಲೀಸ್‌ ಪ್ರಶಿಕ್ಷಣಾರ್ಥಿಗಳ ತರಬೇತಿ ಪಡೆಯುವುದು ತಾತ್ಕಾಲಿಕವಾದರೂ ಅದು ಶಾಶ್ವತ. ಇಲ್ಲಿ ಕಲಿತದ್ದನ್ನು ಕರ್ತವ್ಯ ನಿರ್ವಹಣೆಯಲ್ಲಿ ಅನುಷ್ಠಾನಕ್ಕೆ ತರಬೇಕು. ಪೊಲೀಸ್‌ ಕರ್ತವ್ಯ ಎಂದರೆ ಜನತೆಗೆ ರಕ್ಷಣೆ ಹಾಗೂ ಭದ್ರತೆಯ ಸೇವೆ ನೀಡುವುದು. ಕರ್ತವ್ಯದ ವೇಳೆ ದರ್ಪ, ದೌರ್ಜನ್ಯ ತೋರದೆ ನ್ಯಾಯಬದ್ಧವಾಗಿ ನಿರ್ವಹಿಸಬೇಕು. ಯಾವುದೇ ರಾಗದ್ವೇಷ ಇಲ್ಲದೆ ಪ್ರಾಮಾಣಿಕ ಸೇವೆ ಸಲ್ಲಿಸಿ, ಪೊಲೀಸ್‌ ಇಲಾಖೆ, ಕುಟುಂಬಕ್ಕೆ ಹಾಗೂ ಸಮಾಜಕ್ಕೆ ಉತ್ತರ ಹೆಸರು ತರಬೇಕು ಎಂದು ಕಿವಿಮಾತು ಹೇಳಿದರು. ಬಿಇ, ಬಿ.ಎಸ್‌ಸಿ, ಡಿಪ್ಲೊಮಾ, ಎಂಬಿಎ ಹೀಗೆ ವಿವಿಧ ಉತ್ತನ ಶಿಕ್ಷಣ ಪಡೆದ ಯುವ ಸಮೂಹ ಪೊಲೀಸ್‌ ಸೇವೆಗೆ ಬರುತ್ತಿರುವುದು ಹೆಮ್ಮೆಯ ಸಂಗತಿ. ಹೆಚ್ಚು ಓದಿರುವ ನಾವು ಕಡಿಮೆ ದರ್ಜೆಯ ಸೇವೆಗೆ ಸೇರಿದ್ದೇವೆ ಎಂಬ ಭಾವನೆ ಬೇಡ. ನಿಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಪೊಲೀಸ್‌ ಇಲಾಖೆ ನಿಮ್ಮ ಸೇವೆಯನ್ನು ಬಳಸಿಕೊಳ್ಳುವ ಜೊತೆಗೆ ಉನ್ನತ ಹುದ್ದೆಗೆ ಆಯ್ಕೆಯಾಗಲು ಅವಕಾಶ ಕಲ್ಪಿಸುತ್ತದೆ. ಹೆಚ್ಚಿನ ಅಧ್ಯಯನಕ್ಕೂ ಇಲಾಖೆ ಸಹಕಾರ ನೀಡಲಿದ್ದು ಇಂಥ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಹೇಳಿದರು. ಸರ್ಕಾರಿ ಕೆಲಸ ದೇವರ ಕೆಲಸ.

ಕಾರಾಗೃಹ ಇಲಾಖೆಗೆ ನೇಮಕವಾದವರು ಕರ್ತವ್ಯದ ವೇಳೆ ಕಾರಾಗೃಹ ಜೈಲು ಕೈದಿ ಗಳ ಮನಪರಿವರ್ತನೆ ಮಾಡಿ, ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದು ಕರೆ ನೀಡಿದರು. ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಶಾಲೆ ಪ್ರಾಂಶುಪಾಲರಾದ ಬಾಗಲಕೋಟೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ್‌ ಜಗಲಾಸರ್‌ ಪ್ರಮಾಣ ವಚನ ಬೋಧಿಸಿದರು.

ತರಬೇತಿ ಅವಧಿ ಯಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದವರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ಸಶಸ್ತ್ರ ಪೊಲೀಸ್‌ ಕಾನ್‌ ಸ್ಟೇಬಲ್‌ ಪ್ರಶಿಕ್ಷಣಾರ್ಥಿಗಳ ಮತ್ತು ಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿಗಳ ಆಕರ್ಷಕ ಪಥಸಂಚಲನ ನಡೆಸಿದರು. ಎಸ್ಪಿ ಅನುಪಮ್‌ ಅಗರವಾಲ್‌, ಟಿಪಿಟಿಎಸ್‌ ಪ್ರಾಂಶುಪಾಲ ಡಾ| ರಾಮ ಅರಸಿದ್ದಿ ಸೇರಿದಂತೆ ಅವಳಿ ಜಿಲ್ಲೆಗಳ ಪೊಲೀಸ್‌ ಅ ಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next