Advertisement

ಕೋವಿಡ್‌ ಲಸಿಕೆ ಪಡೆದು ಮುಂಜಾಗ್ರತೆ ವಹಿಸಲು ಸಲಹೆ

07:36 PM Jun 30, 2021 | Team Udayavani |

ತಾಳಿಕೋಟೆ: ಕೋವಿಡ್‌ ರೋಗದ ಭೀಕರತೆ ಈಗಾಗಲೇ ಎದುರಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿ ಲಸಿಕೆ ಪಡೆಯು ವುದರೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೆಂದು ತಹಶೀಲ್ದಾರ್‌ ಅನಿಲಕುಮಾರ ಢವಳಗಿ ಹೇಳಿದರು. ಜಿಲ್ಲಾ ಧಿಕಾರಿಗಳ ಕಾರ್ಯಾಲಯ ನಿರ್ದೇಶನ ಮೇರೆಗೆ ತಹಶೀಲ್ದಾರ್‌ ಕಾರ್ಯಾಲಯ, ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಎಸ್‌.ಕೆ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸಭಾಭವನದಲ್ಲಿ ಆಯೋಜಿಸಿದ್ದ ಲಸಿಕಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕೊರೊನಾ ಎರಡನೇ ಅಲೆ ಕಡಿಮೆಯಾಗಿದ್ದರೂ ನಾವು ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಮಾಸ್ಕ್ ಕಡ್ಡಾಯವಾಗಿ ಧರಿಸಿಕೊಂಡು ಹೊರಗಡೆ ಬರಬೇಕು. ಲಸಿಕೆ ಬಗ್ಗೆ ಅನುಮಾನ ಬೇಡ, ಯಾವುದೇ ರೀತಿಯ ತೊಂದರೆಗಳಿಲ್ಲ. ಲಸಿಕೆ ಪಡೆದುಕೊಂಡವರಿಗೆ ಕೊರೊನಾ ತಗುಲಿದರೂ ಯಾವುದೇ ತೊಂದರೆಗಳಾಗಿಲ್ಲ. ಕಾಲೇಜುಗಳು ಆರಂಭ ಹಂತದಲ್ಲಿರುವುದರಿಂದ ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕೆಂದು ಹೇಳಿದರು. ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾ ಧಿಕಾರಿ ಡಾ| ಎಸ್‌.ಬಿ. ಪಾಟೀಲ ಮಾತನಾಡಿ, ಕೋವಿಡ್‌ ತಡೆಗಟ್ಟಲು ಪ್ರತಿಯೊಬ್ಬರು ಲಸಿಕೆ ಪಡೆಯಬೇಕು. ಮತ್ತೂಬ್ಬರನ್ನು ಪ್ರೇರೇಪಿಸಿ ಲಸಿಕೆ ಪಡೆದುಕೊಳ್ಳಲು ತಿಳಿ ಹೇಳುವಂತಹ ಕಾರ್ಯವಾಗಲಿ ಎಂದರು.

ತಾಳಿಕೋಟೆ ತಾಲೂಕಿನ ಲಸಿಕಾ ಅಭಿಯಾನದ ನೋಡಲ್‌ ಅಧಿ ಕಾರಿ ಎಸ್‌.ಜಿ. ಕುಂಬಾರ ಮಾತನಾಡಿ, ಲಸಿಕೆ ಪಡೆಯುವುದರ ಮೂಲಕ ಕೊರೊನಾ ಹೊಡೆದೊಡಿಸೋಣ. ಲಸಿಕೆ ಪಡೆದ ಶೇ. 99 ಜನರಿಗೆ ತೊಂದರೆಗಳಾಗಿಲ್ಲ. ಲಸಿಕೆ ಪಡೆದ ವಿದ್ಯಾರ್ಥಿಗಳು ಮತ್ತೂಬ್ಬರನ್ನು ಪ್ರೇರೇಪಿಸಿ ಎಂದು ಹೇಳಿದರು. ಮಹಾ ವಿದ್ಯಾಲಯದ ಪ್ರಾಚಾರ್ಯ ಆರ್‌.ವಿ. ಜಾಲವಾದಿ ಅಧ್ಯಕ್ಷತೆ ವಹಿಸಿ ದ್ದರು. ಲಸಿಕಾ ಅಭಿಯಾನದಲ್ಲಿ ಸ್ಥಳೀಯ ಖಾಸYತೇಶ್ವರ ಶಿಕ್ಷಣ ಹಾಗೂ ಘನಮಠೇಶ್ವರ ಶಿಕ್ಷಣ ಮಹಾವಿದ್ಯಾಲಯ ಹಾಗೂ ಎಚ್‌.ಎಸ್‌. ಪಾಟೀಲ ಪದವಿ ಮಹಾವಿದ್ಯಾಲಯದ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ 200ಕ್ಕೂ ಅ ಧಿಕ ವಿದ್ಯಾರ್ಥಿಗಳು ಲಸಿಕೆ ಪಡೆದರು. ರಮೇಶ ಜಾಧವ ಸ್ವಾಗತಿಸಿದರು. ಡಾ| ದೀಪಾ ಮಾಳಗೆ ನಿರೂಪಿಸಿದರು. ಕೆ.ಬಿ. ದೇಸಾಯಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next