Advertisement

ಸಾಮಾಜಿಕ ಜಾಲದಲ್ಲಿ ಪ್ರಚಾರ ಭರಾಟೆ

07:43 AM Mar 14, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆ ಪ್ರಚಾರದ ಕಾವು ಸಾಮಾಜಿಕ ಜಾಲತಾಣಗಳಲ್ಲಿ ಕಾವೇರಿದ್ದು, ಮತದಾರರ ಗಮನ ಸೆಳೆಯುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಜಾಲತಾಣಗಳಾದ
ಫೇಸ್‌ಬುಕ್‌, ವಾಟ್ಸ್‌ ಆ್ಯಪ್‌ಗ್ಳ ಬೆನ್ನು ಬಿದ್ದಿವೆ. 

Advertisement

ಚುನಾವಣೆಗೆ ರಾಜಕಿಯ ಪಕ್ಷಗಳ ಪ್ರಚಾರದ ಕಾರ್ಯವೈಖರಿ ಬದಲಾಗುತ್ತಿದ್ದು, ಕ್ಷೇತ್ರದಲ್ಲಿ ಇನ್ನೂ ಲೋಕ ಸಮರಕ್ಕೆ ಅಭ್ಯರ್ಥಿಗಳ ಆಯ್ಕೆ ಕರಸತ್ತು ಆಂತಿಮಗೊಳ್ಳದಿದ್ದರೂ ಕಾಂಗ್ರೆಸ್‌, ಬಿಜೆಪಿ ಹಾಗೂ ಬಹುಜನ ಸಮಾಜ ಪಕ್ಷಗಳು ಮಾತ್ರ ಕ್ಷೇತ್ರದಲ್ಲಿ ಮತದಾರರ ಮನ ಸೆಳೆಯುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಕಾರ್ಡ್‌ ಅಭಿಯಾನ ಕೈಗೊಂಡು ತಮ್ಮ ತಮ್ಮ ಅಭ್ಯರ್ಥಿಗಳ ಪರ ಬಿರುಸಿನ ಮತಯಾಚನೆಯಲ್ಲಿ ತೊಡಗಿರುವುದು ಎದ್ದು ಕಾಣುತ್ತಿದೆ.

ಕೇಂದ್ರ ಚುನಾವಣಾ ಆಯೋಗವು ಈ ಬಾರಿ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಟ್ಟಿರುವುದಾಗಿ ತಿಳಿಸಿದರೂ ಜಿಲ್ಲೆಯಲ್ಲಿ ಮಾತ್ರ ಜಾಲತಾಣಗಳಲ್ಲಿ ರಾಜಕೀಯ ಪಕ್ಷಗಳ ಪರ ಅಬ್ಬರದ ಪ್ರಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಬಿಜೆಪಿ ಹಾದಿಯಾಗಿ, ಕಾಂಗ್ರೆಸ್‌, ಬಿಎಸ್‌ಪಿ ಮತ್ತಿತರ ಪಕ್ಷಗಳು ತಮ್ಮ ಪಕ್ಷಗಳ ಸೈದ್ಧಾಂತಿಕ ಧೋರಣೆ, ಕ್ಷೇತ್ರದಲ್ಲಿ ಕಣಕ್ಕೆ ಇಳಿಯಲಿರುವ ಅಭ್ಯರ್ಥಿಗಳ ವಿವರ, ಅವರ ಪೂರ್ವಪರ ಇತಿಹಾಸ, ಸಾಧನೆ, ರಾಷ್ಟ್ರೀಯ ನಾಯಕರ ಭಾವಚಿತ್ರಗಳು ಇರುವ ಪೋಸ್ಟ್‌ಗಳನ್ನು ಕ್ಷಣ
ಕ್ಷಣಕ್ಕೆ ಫೇಸ್‌ಬುಕ್‌ ಹಾಗೂ ವಾಟ್ಸ್‌ ಆ್ಯಪ್‌ಗ್ಳಲ್ಲಿ ಪೋಸ್ಟ್‌ ಮಾಡುವ ಮೂಲಕ ರಾಜಕೀಯ ಪಕ್ಷಗಳ ಬೆಂಬಲಿಗರು, ಕಾರ್ಯಕರ್ತರು ತಮ್ಮ ಪಕ್ಷಗಳ ಪರ ಹವಾ ಸೃಷ್ಟಿಸುತ್ತಿದ್ದಾರೆ.

ಹೊಸ ಪೇಜ್‌, ಗ್ರೂಪ್‌ಗ್ಳ ಸೃಷ್ಟಿ: 2019ರ ಲೋಕ ಸಭಾ ಚುನಾವಣೆಗಾಗಿ ರಾಜಕೀಯ ಪಕ್ಷಗಳ ಹೊಸ ಫೇಸ್‌ಬುಕ್‌ ಖಾತೆ, ವಾಟ್ಸ್‌ ಆ್ಯಪ್‌ ಗ್ರೂಪ್‌ಗ್ಳು ಸೃಷ್ಟಿ ಯಾಗಿವೆ. ಸಂಸದ ವೀರಪ್ಪ ಮೊಯ್ಲಿ ತಮ್ಮ ಹೆಸರಿನಲ್ಲಿ ಎರಡು ಮೂರು ಫೇಸ್‌ಬುಕ್‌ ಖಾತೆಗಳನ್ನು ತೆರೆದಿ
ದ್ದಾರೆ. ಅದೇ ರೀತಿ ಹೊಸಕೋಟೆ ಬಿ.ಎನ್‌.ಬಚ್ಚೇಗೌಡ ತಮ್ಮ ಹೆಸರಲ್ಲಿ ಪೇಸ್‌ಬುಕ್‌ ಖಾತೆ ತೆರೆ ದಿದ್ದು, ಅವರ ಹೆಸರಿನಲ್ಲಿ ಬಚ್ಚೇಗೌಡ ಅಭಿಮಾನಿಗಳ ಬಳಗ ಎಂದು ಫೇಸ್‌ಬುಕ್‌ ಕ್ರಿಯೆಟ್‌ ಆಗಿದೆ. ಅದೇ ರೀತಿ ಬಹುಜನ ಸಮಾಜದ ಪಕ್ಷದ ಸಂಭಾವ್ಯ ಅಭ್ಯರ್ಥಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ರಾದ ಡಾ.ಸಿ.ಎಸ್‌.ದ್ವಾರಕನಾಥ್‌ ಸಹ ಚುನಾವಣಾ
ಪ್ರಚಾರಕ್ಕಾಗಿಯೆ ಹೊಸದಾಗಿ ಫೇಸ್‌ಬುಕ್‌ ಖಾತೆ ತೆರೆದಿದ್ದಾರೆ. ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್‌ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರೂ ತಮ್ಮ ಎಫ್ಬಿ ಖಾತೆಯಲ್ಲಿ ಪೋಸ್ಟ್‌ಗಳು ಇದು ವರೆಗೂ ಆಪ್‌ಲೋಡ್‌ ಆಗಿಲ್ಲ. ಒಟ್ಟಾರೆ ಕಾಂಗ್ರೆಸ್‌ಗಿಂತ ಬಿಜೆಪಿ ಹಾಗೂ ಬಿಎಸ್‌ಪಿ ಪಕ್ಷಗಳು ಸಾಮಾಜಿಕ ಜಾಲತಾಣ ಗಳನ್ನು ಹೆಚ್ಚು ಬಳಸಿಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ.

 ಫೇಸ್‌ಬುಕ್‌ನಲ್ಲಿ ವೋಟಿಂಗ್‌ ಅಬ್ಬರ: ಚುನಾವಣೆಗೂ ಮೊದಲೇ ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳಾದ ಸಂಸದರಾದ ಎಂ.ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವ ಬಿ.ಎನ್‌.ಬಚ್ಚೇಗೌಡಪರ ವಿರುದ್ಧ ನಡೆಯುತ್ತಿರುವ ವೋಟಿಂಗ್‌ ಗಮನ
ಸೆಳೆಯುತ್ತಿದೆ. ಕ್ಷೇತ್ರದಲ್ಲಿ ವಿಶೇಷವಾಗಿ ಜೆಡಿಎಸ್‌ ನವರು ಮಾತ್ರ ಮತ ಹಾಕಿ ಎನ್ನುವ ವೋಟಿಂಗ್‌ ಪೋಸ್ಟ್‌ಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜೆಡಿಎಸ್‌ನವರು ಹೆಚ್ಚಾಗಿ ಬಿಜೆಪಿಗೆ ಮತ ಹಾಕಿರುವ ಪೋಸ್ಟ್‌ಗಳ ಸ್ತ್ರೀನ್‌ ಶಾಟ್‌ ತೆಗೆದು ಬಿಜೆಪಿ ಪರ ನೆಟ್ಟಿಗರು ಅವುಗಳನ್ನು ಜಾಲತಾಣಗಳಲ್ಲಿ ಹರಿದು ಬಿಡುತ್ತಿರುವುದು ಕಾಣುತ್ತಿದೆ.

Advertisement

ಒಟ್ಟಾರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೊರತುಪಡಿಸಿದರೆ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಪಕ್ಷಗಳಲ್ಲಿ ಅಭ್ಯರ್ಥಿ ಆಯ್ಕೆ ಕರಸತ್ತು ಇನ್ನೂ ಮುಂದು ವರಿದಿದ್ದರೂ ರಾಜಕೀಯ ಪಕ್ಷಗಳು ಹಾಗೂ ಬೆಂಬಲಿಗರು, ಕಾರ್ಯಕರ್ತರು ಮಾತ್ರ ಸದ್ದಿಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಮ್ಮ ಪಕ್ಷಗಳ ಹಾಗೂ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ.

ಜೊತೆಗೆ ಕೆಲ ನೆಟ್ಟಿಗರು ಮೋದಿ, ರಾಹುಲ್‌ಗಾಂಧಿ ಪರ ಬ್ಯಾಟಿಂಗ್‌ ಬಿಸುತ್ತಾ ಕಾಂಗ್ರೆಸ್‌, ಬಿಜೆಪಿ ಪಕ್ಷಗಳನ್ನು ಬೆಂಬಲಿಸುವಂತೆ ಮತದಾರರ ಮನ ಮಟ್ಟುವ ರೀತಿಯಲ್ಲಿ ಅಕ್ಷರ ರೂಪ ನೀಡಿ ಫೇಸ್‌ಬುಕ್‌ ಹಾಗೂ ವಾಟ್ಸ್‌ ಆ್ಯಪ್‌ ಗ್ರೂಪ್‌ಗ್ಳಲ್ಲಿ ಪೋಸ್ಟ್‌ ಮಾಡುತ್ತಿದ್ದು,
ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಯಲಹಂಕದಲ್ಲಿ ಬಿಜೆಪಿ ಜಾಲತಾಣದ ವಾರ್‌ ರೂಮ್‌ ಹಿಂದಿನ ಹಲವು ಸಾರ್ವತ್ರಿಕ ಚುನಾವಣೆಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ಸಾಕಷ್ಟು ಯಶಸ್ಸು ಪಡೆದುಕೊಂಡಿರುವ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಿದೆ. ಇದಕ್ಕಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮಟ್ಟಿಗೆ ಕಳೆದ ಮಾ. 10 ರಂದು ಭಾನುವಾರ ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ಸೋಷಿಯೆಲ್‌ ಮೀಡಿಯಾ ಮೀಟ್‌ ಆಯೋಜಿಸಿ ತನ್ನ ಸ್ವಯಂ ಸೇವಕರಿಗೆ ಜಾಲತಾಣಗಳ ಬಳಕೆ ಬಗ್ಗೆ ತರಬೇತಿ ನೀಡಿತು.

ಸಮಾವೇಶಕ್ಕೆ ರಾಜ್ಯ ಉಸ್ತುವಾರಿಯಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್‌ ಭಾಗವಹಿಸಿದ್ದನ್ನು ನಾವು
ಇಲ್ಲಿ ಸ್ಮರಿಸಬಹುದು. ಇನ್ನೂ ಇಡೀ ಲೋಕಸಭಾ ಚುನಾವಣೆ ಯನ್ನು ಸಾಮಾಜಿಕ ಜಾಲತಾಣಗಳ ನಿರ್ವಹಣೆಗಾಗಿಯೆ ಕ್ಷೇತ್ರದ ವ್ಯಾಪ್ತಿಗೆ ಬರುವ ಯಲಹಂಕದಲ್ಲಿ ವಾರ್‌ ರೂಮ್‌ ಸಹ ತೆರೆಯಲಾಗಿದ್ದು, ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ ಉಸ್ತುವಾರಿ ವಹಿಸಿಕೊಂಡಿದ್ದಾರೆ

ಫೇಸ್‌ಬುಕ್‌ನಲ್ಲಿ ಸಂಸದ ಮೊಯ್ಲಿ ಫ‌ುಲ್‌ ಆ್ಯಕ್ಟೀವ್‌ ಕಳೆದ ನಾಲ್ಕು ವರ್ಷಗಳಿಂದ ತಮ್ಮ ಫೇಸ್‌ಬುಕ್‌ ಖಾತೆಯಿಂದ ಸಾಕಷ್ಟು ಅಂತರ
ಕಾಯ್ದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎಂ.ವೀರಪ್ಪ ಮೊಯ್ಲಿ ಲೋಕಸಭಾ ಚುನಾವಣೆ ಘೋಷಣೆಗೂ ಮೊದಲು ಒಂದರೆಡು ತಿಂಗಳಿಂದ ಫೇಸ್‌ಬುಕ್‌ ನಲ್ಲಿ ಫ‌ುಲ್‌ ಆಕ್ಟೀವ್‌ ಆಗಿದ್ದಾರೆ. ಕಳೆದ ನಾಲ್ಕು ವರ್ಷದಲ್ಲಿ ಕ್ಷೇತ್ರದಲ್ಲಿ ಆಗಿರುವ ಸಾಧನೆ,
ಅಭಿವೃದ್ಧಿ ಕಾಮಗಾರಿಗಳ ವಿವರ, ಸಂಸದರ ಆದರ್ಶ ಗ್ರಾಮದಲ್ಲಿ ಕೈಗೊಂಡು ಅಭಿವೃದ್ಧಿ ಚಟುವಟಿಕೆ, ಸಾಧನೆ, ಮುಂದಿನ ಭರವಸೆಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದು ಕೊಳ್ಳುತ್ತಿರುವುದು ಗಮನ ಸೆಳೆದಿದೆ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next